Sudeep : ಭಾಷೆ ವಿಚಾರದಲ್ಲಿ ಸುದೀಪ್ ಪರ ನಿಂತ ಪ್ರಧಾನಿ ನರೇಂದ್ರ ಮೋದಿ

By Infoflick Correspondent

Updated:Thursday, May 26, 2022, 22:31[IST]

Sudeep :  ಭಾಷೆ ವಿಚಾರದಲ್ಲಿ ಸುದೀಪ್ ಪರ ನಿಂತ ಪ್ರಧಾನಿ ನರೇಂದ್ರ ಮೋದಿ

ಕಳೆದ ಕೆಲ ದಿನಗಳಿಂದ ಭಾಷೆ ವಿಚಾರಕ್ಕೆ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲಿ ಭಾರೀ ವಿವಾದ ಉಂಟಾಗಿತ್ತು. ಹಿಂದಿ ರಾಷ್ಟ್ರ ಭಾಷೆ ಅಂತ ವಾದ ನಡೆಯುತ್ತಿತ್ತು. ಈ ಬಗ್ಗೆ ಎಲ್ಲರೂ ಕಿಚ್ಚ ಸುದೀಪ್ ರನ್ನು ಸಪೋರ್ಟ್ ಮಾಡಿದ್ದರು. ಅಜಯ್ ದೇವಗನ್ ಅವರ ವಾದವನ್ನು ಅಲ್ಲಗಳೆದಿದ್ದರು. ಸೋನು ಸೂದ್ ರಿಂದ ಹಿಡಿದು ಹಲವರು ಹಿಂದಿಯನ್ನು ನಾವು ಭಾರತದ ರಾಷ್ಟ್ರ ಭಾಷೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಭಾರತಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆಯಷ್ಟೇ ಎಂದು ಹೇಳಿದ್ದರು.   

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ಭಾಷೆ ಒಂದು ಮನರಂಜನೆ ಸತ್ಯ. ಜನರನ್ನು ಮೆಚ್ಚಿಸಲು ಯಾವ ಭಾಷೆಯಲ್ಲಿ ಸಿನಿಮಾ ಮಾಡಿದ್ವಿ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದರು. ರಾಜಕಾರಣಿಗಳು ಕೂಡ ಈ ವಿಚಾರದಲ್ಲಿ ಮೌನ ಮುರಿದಿದ್ದರು. ಸುದೀಪ್ ಅವರ ಮಾತನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಇನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಬಗ್ಗೆ ಮಾತನಾಡಿದ್ದರು. ಸುದೀಪ್ ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು.  

ನಾವು ಭಾರತದ ಎಲ್ಲಾ ಸ್ಥಳೀಯ ಭಾಷೆಗಳನ್ನು ಗೌರವಿಸುತ್ತೇವೆ ಎಂದು ಹೇನಿದ ಮೋದಿ ಅವರು, ಆ ಭಾಷೆಗಳಲ್ಲಿ ದೇಶದ ಸಂಸ್ಕೃತಿಯನ್ನು ತೋರುತ್ತದೆ. ಅವುಗಳನ್ನೆಲ್ಲ ಬಿಜೆಪಿ ಪಕ್ಷ ಪೂಜನೀಯವಾಗಿ ನೋಡುತ್ತದೆ. ಅಷ್ಟು ಮಾತ್ರವಲ್ಲದೇ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೇಶದ ಎಲ್ಲ ಸ್ಥಳೀಯ ಭಾಷೆಗಳಿಗೂ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಅವರು ಹೇಳಿದ್ದರು. ಈ ಬಗ್ಗೆ ಸುದೀಪ್ ಅವರು ಕೂಡ ಮಾಧ್ಯಮಗಳಲ್ಲಿ ಮಾತನಾಡಿದ್ದರು.