ಭರ್ಜರಿ ಪ್ರದರ್ಶನ ನೀಡುತ್ತಿರುವ ಪೊಗರು ಚಿತ್ರ..! ದಾಖಲೆ ಬರೆದ ಎರಡನೇ ದಿನದ ಕಲೆಕ್ಷನ್..!

Updated: Sunday, February 21, 2021, 13:15 [IST]

ಹೌದು ಮೊನ್ನೆಯಷ್ಟೇ ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಚಿತ್ರವೂ ಮೂರು ಭಾಷೆಯನ್ನು  ಒಳಗೊಂಡು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಪೊಗರು ಚಿತ್ರ ಎಲ್ಲರ ಮನಸ್ಸನ್ನು ಗೆದ್ದು ಬಿಟ್ಟಿತು, ಮತ್ತು ಇದೊಂದು ಪಕ್ಕಾ ಮಾಸ್ ಸಿನಿಮಾ, ವಿಲನ್ ಗಳೇ ಚಿತ್ರದಲಿ ಹೈಲೈಟ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು. ಸಾಕಷ್ಟು ದಿನಗಳ ಬಳಿಕ ಈ ವರ್ಷದ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಧ್ರುವ ಸರ್ಜಾರ ಪೊಗರು ಚಿತ್ರ ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿ, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ..   

Advertisement

ಸಾಕಷ್ಟು ಸಿನಿಪ್ರಿಯರಿಗೆ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಪೊಗರು ಚಿತ್ರದ ಕಥೆ ಹಾಗೂ ಮೇಕಿಂಗ್ ನೋಡಿ ಮತ್ತು ವಿಸಿಯುಲ್ಸ್ ಗೆ ಸಕತ್ ಫಿದಾ ಆಗಿದ್ದಾರೆ. ಇದರ ನಡುವೆ ಧ್ರುವ ಸರ್ಜಾ ಅಭಿನಯಿಸಿದ ಪೊಗರು ಚಿತ್ರ ಮೊದಲ ದಿನದ ಕಲೆಕ್ಷನ್ ಈಗಾಗಲೇ ತಿಳಿದಿದ್ದು, ಬಾಕ್ಸಾಫೀಸ್ ಪಂಡಿತರಿಂದ ಎರಡು ದಿನ ಸೇರಿ, ಎಷ್ಟು ಕೋಟಿಯನ್ನು ಈ ಚಿತ್ರ ಗಳಿಸಿಕೊಂಡಿತು ಎನ್ನುವ ವಿಷಯ ಇದೀಗ ತಿಳಿದುಬಂದಿದೆ.   

Advertisement

ಹೌದು ಸ್ನೇಹಿತರೆ ನಮ್ಮ ಪೊಗರು ಚಿತ್ರ ಮೊದಲ ದಿನ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿ ಮೊದಲ ದಿನದ ಕಲೆಕ್ಷನ್ 17ರಿಂದ 20 ಕೋಟಿ ಗಳಿಸಿಕೊಂಡಿದೆ ಎಂದು ತಿಳಿದುಬಂದಿತ್ತು, ಇಂದು ನಿನ್ನೆ ಮೊನ್ನೆ ಸೇರಿ, ಎರಡನೆ ದಿನದ ಕಲೆಕ್ಷನ್ ಒಟ್ಟು 13 ಕೋಟಿ ಗಳಸಿದೆ ಎನ್ನಲಾಗಿದೆ. ಈ ಚಿತ್ರದ ಯಶಸ್ಸು ಹೀಗೆ ಮುಂದುವರೆಯಲಿ ಎಂದು ಕಮೆಂಟ್ ಮಾಡುತ್ತಾ, ನೀವು ಈಗಾಗಲೇ ಪೊಗರು ಚಿತ್ರವನ್ನು ನೋಡಿದರೆ, ಚಿತ್ರ ಹೇಗಿದೆ ಎಂದು ಕಾಮೆಂಟ್ ಮಾಡಿ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ, ಶೇರ್ ಮಾಡಿ, ಧನ್ಯವಾದಗಳು...