ವಿಜಯಲಕ್ಷ್ಮೀಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಕೊನೆಗೂ ಅಂದರ್..! ಅಸಲಿಗೆ ಈತ ಯಾರು..?

By Infoflick Correspondent

Updated:Friday, January 21, 2022, 20:59[IST]

ವಿಜಯಲಕ್ಷ್ಮೀಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಕೊನೆಗೂ ಅಂದರ್..! ಅಸಲಿಗೆ ಈತ ಯಾರು..?

ನಟಿ ವಿಜಯಲಕ್ಷ್ಮಿ ಈಗಾಗಲೇ ಸಾಕಷ್ಟು ವಿಚಾರಗಳಿಗೆ ಹೆಚ್ಚು ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಹೆಚ್ಚು ಬಾರಿ ನಟಿ ವಿಜಯಲಕ್ಷ್ಮಿಯವರು ಸಹಾಯ ಬೇಡಿ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟರ ಬಳಿ ಸಹಾಯ ಕೇಳಿದ್ದರು. ಹಾಗೆ ಇದೀಗ ನಾನು ತುಂಬಾ ಕಷ್ಟದಲ್ಲಿದ್ದೇನೆ ಇರಲು ಮನೆಯೂ ಇಲ್ಲ ಎಂದು ಸಾಕಷ್ಟು ಕಣ್ಣೀರು ಹಾಕಿದ್ದರು. ಅವರ ತಾಯಿ ತೀರಿದ ಬಳಿಕ ನಡೆದ ಹೆಚ್ಚು ವಿಷಯಗಳು ಕೂಡ ನಿಮಗೆ ಗೊತ್ತಿವೆ. ಹಾಗೆ ವಿಜಯಲಕ್ಷ್ಮಿಯವರ ತಾಯಿ ನಿಧಾನರಾದ ಸಂದರ್ಭದಲ್ಲಿಯೂ ಜನಸ್ನೇಹಿ ತಂಡದ ಯೋಗೇಶ್ ಅವರು ಮಾಡಿದ ಸಹಾಯ ಕೂಡ ಎಲ್ಲರಿಗೂ ಗೊತ್ತಿದೆ. ಹೌದು ಇದೀಗ ವಿಜಯಲಕ್ಷ್ಮಿ ಅವರು ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

2020ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರಂತೆ ನಟಿ ವಿಜಯಲಕ್ಷ್ಮಿ. ಅದಕ್ಕೆ ಕಾರಣ ಹುಡುಕಿ ಹೊರಟರೆ ನಟಿ ವಿಜಯಲಕ್ಷ್ಮಿ ಅವರಿಗೆ ಜೀವ ಬೆದರಿಕೆ, ಹಾಗೂ ಲೈಂಗಿಕ ಕಿರುಕುಳ ಕೊಟ್ಟಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಕೆಲಸಕ್ಕೆ ಹೋಗಿದ್ದರೆಂದು ತಿಳಿದುಬಂದಿದೆ. ಆ ವಿಚಾರವಾಗಿ ದೂರು ದಾಖಲಿಸಿದ್ದ ನಟಿ ವಿಜಯಲಕ್ಷ್ಮಿಯವರು ತಮಗಾದ ಜೀವ ಬೆದರಿಕೆ ಹಾಗೂ ಲೈಂಗಿಕ ಕಿರುಕುಳ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಅದೇ ವಿಚಾರವಾಗಿ ಬೆಂಗಳೂರಿನಲ್ಲಿ ಆರೋಪಿಯನ್ನು ಮೊನ್ನೆ ಬುಧವಾರ ಚೆನ್ನೈ ಪೊಲೀಸರೆ  ಬಂಧಿಸಿದ್ದಾರೆ ಎನ್ನಲಾಗಿದೆ. ಹಾಗೆ ಈತನನ್ನು ತಮಿಳುನಾಡು ಕೋರ್ಟಿಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಅಸಲಿಗೆ ಈತ ಯಾರು ಗೊತ್ತಾ..? ಹೌದು ತಿರುನೆಲ್ವೇಲಿಯ ನಿವಾಸಿಯಾದ ಈತನೇ ಹರಿ ನಾಡಾರ್‌. ಹಾಗೆ ಗೋಪಾಲ ಕೃಷ್ಣ ನಾಡಾರ್‌ ಕೂಡ ಎಂದು ಸಹ ಕರೆಯುತ್ತಾರೆ. 39 ವರ್ಷ ವಯಸ್ಸು. 2021ರಲ್ಲಿ ಅತ್ತ ತಮಿಳುನಾಡಿನ ವಿಧಾನ ಸಭಾ ಚುನಾವಣೆಯಲ್ಲಿ ಅಲಗುಲಂ ಎಂಬ ಒಂದು ಕ್ಷೇತ್ರದಿಂದ ಎಲ್ಲಾ ಪಕ್ಷ ಬಿಟ್ಟು ತನ್ನದೇ ಒಂದು ಸ್ವತಂತ್ರ ಪಕ್ಷಕ್ಕೆ ನಿಂತಿದ್ದ. ಹಾಗೆ ಆ ಚುನಾವಣಾದಲ್ಲಿ ಸ್ಪರ್ದೇ ಮಾಡಿ ಸೋಲನ್ನ ಅನುಭವಿಸಿದ್ದ. ಹಾಗೆ ಒಬ್ಬ ಉದ್ಯಮಿಗೆ 360 ಕೋಟಿ ಬ್ಯಾಂಕ್‌ ಲೋನ್‌ ಕೊಡಿಸುತ್ತೇನೆ ಎಂದು ಹೇಳಿ ಆತನ್ನಾ ನಂಬಿಸಿ ಆತನಿಂದಲೇ 7 ಕೋಟಿ ರೂ ದುಡ್ಡು ಪಡೆದು ವಂಚನೆ ಮಾಡಿದ್ದ. ಆಮೇಲೆ ಇದೆ ವಂಚನೆಗಾಗಿ 2021 ಮೇ ನಲ್ಲಿ ಈತನ್ನ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿನ ಮಾಡಿದ್ದರು. ತದನಂತರ ಅಲ್ಲಿಂದ ಬಿಡುಗಡೆಯೂ ಆಗಿದ್ದ...ಎಂದು ತಿಳಿದು ಬಂದಿದೆ.. 

ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಆಗಿದ್ದ ಹರಿ ನಾಡಾರ್ ಎಂಬಾತನೇ ವಿಜಯಲಕ್ಷ್ಮಿಯವರಿಗೆ ಕಿರುಕುಳ ಕೊಟ್ಟಿದ್ದು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಈತನ್ನ ಬಂಧಿಸಿದ್ದಾರೆ ಎಂದು ಹೇಳಲಾಗಿದೆ. 2020ರಲ್ಲಿ ಎನ್‌ಟಿಕೆ ಪಕ್ಷದ ನಾಯಕ ಸೀಮನ್‌ ಎಂಬಾತನ ಕುಮ್ಮಕ್ಕಿನ ಸಾಥ್ ಇಟ್ಟುಕೊಂಡು ಈ ನಾಡಾರ್‌ ವಿಜಯಲಕ್ಷ್ಮಿ ಅವರಿಗೆ ಕಿರುಕುಳ ಕೊಟ್ಟಿದ್ದ ಎಂದು ತಿಳಿದುಬಂದಿದೆ...