ಚಂದದ ಬೆಡಗಿ ಪೂಜಾ ಹೆಗ್ಡೆ ಗೆ ದಳಪತಿ ವಿಜಯ್ ಅಭಿಮಾನಿಗಳಿಂದ ಕೊಂಕು ಮಾತು

By Infoflick Correspondent

Updated:Sunday, April 24, 2022, 20:14[IST]

ಚಂದದ ಬೆಡಗಿ ಪೂಜಾ ಹೆಗ್ಡೆ ಗೆ ದಳಪತಿ ವಿಜಯ್ ಅಭಿಮಾನಿಗಳಿಂದ ಕೊಂಕು ಮಾತು

ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಲಕ್ಕಿ ಚಾರ್ಮ್ ಎಂದೇ ಫೇಮಸ್ ಆಗಿರೋ ಪೂಜಾ ಹೆಗ್ಡೆ ಇದೀಗ ಐರನ್ ಲೆಗ್ ಎಂದು ಕರೆಸಿಕೊಂಡಿದ್ದಾರೆ. ದಳಪತಿ ವಿಜಯ್ ಫ್ಯಾನ್ಸ್ ಅದ್ಯಾಕೋ ಪೂಜಾ ಹೆಗ್ಡೆ ಮೇಲೆ ಕಿಡಿಕಾರಿದ್ದಾರೆ. ಈ ನಟಿಯನ್ನ ಐರೆನ್ ಲೆಗ್ ಎಂದು ಕರೆದು ಟ್ರೋಲ್ ಮಾಡ್ತಿದ್ದಾರೆ. 

ಗ್ಲಾಮರ್ ನಟಿ ಪೂಜಾ ತೆಲುಗು ಮಾತ್ರವಲ್ಲ, ಹಿಂದಿಯಲ್ಲೂ ಅವರಿಗೆ ಸಖತ್ ಅವಕಾಶಗಳು ಸಿಕ್ಕಿದವು. ಈ ಮಧ್ಯೆ ಅವರ ಎರಡು ಬಹುನಿರೀಕ್ಷಿತ ಸಿನಿಮಾಗಳು ಇನ್ನಿಲ್ಲದಂತೆ ನೆಲಕಚ್ಚಿದವು. ಪ್ಯಾನ್ ಇಂಡಿಯಾ ಸಿನಿಮಾಗಳಾದ ಪ್ರಭಾಸ್ ನಟನೆಯ 'ರಾಧೆ ಶ್ಯಾಮ್' ಮತ್ತು 'ದಳಪತಿ' ವಿಜಯ್ ನಟನೆಯ 'ಬೀಸ್ಟ್‌' ಸಿನಿಮಾಗಳಿಗೆ ನಾಯಕಿಯಾಗುವ ಅವಕಾಶ ನಟಿ ಪೂಜಾ ಹೆಗ್ಡೆಗೆ ಸಿಕ್ಕಿತ್ತು. ಎರಡೂ ಕೂಡ ದೊಡ್ಡ ಸ್ಟಾರ್ ನಟರಿರುವ, ಬಿಗ್ ಬಜೆಟ್ ಸಿನಿಮಾಗಳು. ಎರಡು ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ.   

ಬೀಸ್ಟ್ ಸಿನಿಮಾ ಸೋತ ಕಾರಣ ದಳಪತಿ ವಿಜಯ್ ಫ್ಯಾನ್ಸ್ ಪೂಜಾ ಹೆಗ್ಡೆ ಮೇಲೆ ಫುಲ್ ಗರಂ ಆಗಿದ್ದಾರೆ. ನಟಿಯನ್ನ ಐರೆನ್ ಲೆಗ್ ಅಂತಾ ಕರೆದು ಟ್ರೋಲ್ ಮಾಡ್ತಿದ್ದಾರೆ. ಆದರೆ ಇದಕ್ಕೆ ಪೂಜಾ ತಲೆಕೆಡೆಸಿಕೊಳ್ಳದೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. 

ಕರಾವಳಿ ಬ್ಯೂಟಿ ಪೂಜಾ ಅಭಿನಯಿಸಿರುವ `ಅರವಿಂದ ಸಮೇತ ವೀರ ರಾಘವ’, ʻಅಲ್ಲಾ ವೈಕುಂಠಪುರಂಮುಲೋʼ, ʻಮಹರ್ಷಿʼ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.  ಪೂಜಾ ಹೆಗ್ಡೆ ಅಭಿನಯದ ಹಿಟ್ ಪಟ್ಟಿಯಲ್ಲಿ ಸಾಕಷ್ಟು  ಚಿತ್ರಗಳು ಸೇರಿವೆ. ದಕ್ಷಿಣ ಇಂಡಸ್ಟ್ರಿಯ ಹಿಟ್ ಹೀರೋಯಿನ್‌ಗಳ ಮೊದಲ ಸಾಲಿನಲ್ಲಿ ಪೂಜಾ ಇದ್ದಾರೆ. ಅವರು ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.‌ ಈಗಲೂ ಇವರಿಗೆ ಚಿತ್ರರಂಗದಲ್ಲಿ ಅಪಾರ ಬೇಡಿಕೆ ಇದೆ ಹಾಗಾಗಿ ಪೂಜಾ ಅಭಿಮಾನಿಗಳು ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. 

ಅನಿಲ್ ರಬಿಪುರಿ ಅವರ ಹೊಸ ಚಿತ್ರ ‘ಏಕ್ ತ್ರೀ ಫನ್ ಅಂಡ್ ಫ್ರಸ್ಟ್ರೇಷನ್’ನಲ್ಲಿ ಪೂಜಾ ಐಟಂ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.‌ ಪೂಜಾ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ‌ ಎಂಬ ಸುದ್ದಿ ಹರಿದಾಡಿದೆ.