ನಟಿ ಪೂಜಾ ಹೆಗ್ಡೆ ಸಿನಿಮಾಗಳು ಫ್ಲಾಪ್ ಆಗಿದ್ದಕ್ಕೆ ನಿರ್ಮಾಕರು ಮಾಡಿದ್ದೇನು..? ನೋಡಿ..

By Infoflick Correspondent

Updated:Sunday, June 26, 2022, 21:30[IST]

ನಟಿ ಪೂಜಾ ಹೆಗ್ಡೆ ಸಿನಿಮಾಗಳು ಫ್ಲಾಪ್ ಆಗಿದ್ದಕ್ಕೆ ನಿರ್ಮಾಕರು ಮಾಡಿದ್ದೇನು..? ನೋಡಿ..

ಸೌತ್ ಇಂಡಿಯಾದ ಬಹುಬೇಡಿಕೆಯ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ಮೋಡಿ ಮಾಡಿರುವ ನಟಿ ಪೂಜಾ ಹೆಗ್ಡೆ ಲಕ್ ಬದಲಾಗಿದೆ. ಇವರ ಸಿನಿಮಾಗಳು ಹಿಟ್ ಆಗಿದ್ದು, ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು, ನಾಗಚೈತನ್ಯ, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಹಲವರ ಜೊತೆಗೆ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಪೂಜಾ ಹೆಗ್ಡೆ ಅವರ ಅದೃಷ್ಟ ತಲೆಕೆಳಗಾಗಿದ್ದು, ಸತತವಾಗಿ ಮೂರು ಸಿನಿಮಾಗಳು ಫ್ಲಾಪ್ ಆಗಿವೆ.   

ಕರ್ನಾಟಕದ ಬೆಡಗಿ ಪೂಜಾ ಹೆಗ್ಡೆ ಅವರು ಒಕ ಲೈಲಾ ಕೋಸಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರ ಮೊದಲ ಚಿತ್ರವೇ ನಾಗ ಚೈತನ್ಯ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.  ಆದರೆ ಇತ್ತೀಚೆಗೆ ಪೂಜಾ ಹೆಗ್ಡೆ ನಟಿಸಿರುವ ಸಾಲು ಸಾಲು ಚಿತ್ರಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿವೆ. ಹೀಗಿದ್ದರೂ ಪೂಜಾ ಅವರ ಬೇಡಿಕೆ ಏನು ಕಡಿಮೆಯಾಗಿಲ್ಲ. ಒಂದಾದ ಮೇಲೆ ಒಂದು ಚಿತ್ರಗಳಲ್ಲಿ ನಟಿಸುವ ಆಫರ್ ಗಳು ಬರುತ್ತಲೇ ಇವೆ. ಕಳೆದ ತಿಂಗಳಷ್ಟೇ ಕಾನ್ ಫೆಸ್ಟಿವಲ್ನಲ್ಲಿ ಮಿರ ಮಿರನೇ ಮಿಂಚಿದ ಪೂಜಾ ಹೆಗಡೆ ಅವರಿಗೆ ನಿರ್ಮಾಪಕರೊಬ್ಬರು ಶಾಕ್ ಕೊಟ್ಟಿದ್ದಾರೆ. 

ಪೂಜಾ ಹೆಗ್ಡೆ ಅವರು ನಟಿಸಿದ ಬಿಗ್ ಬಜೆಟ್ ಚಿತ್ರಗಳಾದ ರಾಧೆ ಶ್ಯಾಮ್, ಆಚಾರ್ಯ ಮತ್ತು ಬೀಸ್ಟ್ ಚಿತ್ರಗಳು ಸಾಲು ಸಾಲಾಗಿ ಸೋತಿವೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಪೂಜಾ ಹೆಗ್ಡೆಗೆ ಶಾಕ್ ಕೊಟ್ಟಿದ್ದಾರೆ. ಪೂಜಾ ಅವರೊಂದಿಗೆ ಬರುತ್ತಿದ್ದ ಸಹಚರರ ಖರ್ಚಿನ ಬಿಲ್ ಅನ್ನು ಪೂಜಾ ಅವರ ಮನೆಗೆ ನಿರ್ಮಾಪಕರು ಕಳಿಸಿದ್ದಾರೆ. ನಿಮ್ಮ ಸಹಚರರ ಬಿಲ್ ಅನ್ನು ನೀವೇ ಕಟ್ಟಿ ಎಂದು ಹೇಳಿದ್ದಾರೆ. ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ಫ್ಲಾಪ್ ಹೀರೋಯಿನ್ ಎಂದು ಕೂಡ ಟ್ರೋಲ್ ಆಗುತ್ತಿದ್ದಾರೆ.