Cannes 2022 : ಕ್ಯಾನೆಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ಗುಲಾಬಿ ಗೌನ್ ತೊಟ್ಟು ಹೆಜ್ಜೆ ಹಾಕಿದ ಪೂಜಾ ಹೆಗ್ಡೆ
Updated:Friday, May 20, 2022, 07:58[IST]

ಕಾನ್ ಫಿಲ್ಡ್ ಫೆಸ್ಟಿವಲ್. ಹೆಸರು ಕೇಳಿದರೆ ಸಾಕು ಮೈ ಜುಮ್ ಎನ್ನುತ್ತೆ. ಈಗಾಗಲೇ ಕಾನ್ ಚಿತ್ರೋತ್ಸವ ಆರಂಭವಾಗಿದ್ದು, ಮೇ 28 ರಂದು ಇದರ ಸಮಾರೋಪ ಸಮಾರಂಭ ನಡೆಯಲಿದೆ. ಇಡೀ ಜಗತ್ತಿನಾದ್ಯಂತ ಇರುವ ಎಲ್ಲಾ ಸಿನಿಪ್ರಿಯರಿಗಾಗಿ ಕಾನ್ ಚಿತ್ರೋತ್ಸವವನ್ನು ನಡೆಸಲಾಗುತ್ತದೆ. ಪ್ರತಿ ಬಾರಿಯೂ ಇದಕ್ಕೆ ಬಾಲಿವುಡ್ನ ಜನಪ್ರಿಯ ನಟಿಯರನ್ನು ಆಹ್ವಾನಿಸಲಾಗುತ್ತದೆ. ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಟಿಯರು ಮೆಲ್ಲಗೆ ಹೆಜ್ಜೆ ಹಾಕಿ ಗಮನ ಎಲ್ಲರ ಗಮನ ಸೆಳೆಯುತ್ತಾರೆ. ಈ ಬಾರಿ ದಕ್ಷಿಣ ಭಾರತದ ನಟಿಯರಿಗೂ ಾಹ್ವಾನ ಸಿಕ್ಕಿರುವುದು ಸಂತಸದ ಸುದ್ದಿ.
ಖ್ಯಾತ ನಟಿಯರಾದ ನಯನತಾರಾ, ಪೂಜಾ ಹೆಗ್ಡೆ ಹಾಗೂ ತಮನ್ನಾ ಭಾಟಿಯಾ ಕೂಡ ಈ ಕಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಕಾನ್ ಫೆಸ್ಟಿವಲ್ನಲ್ಲಿ ಭಾರತೀಯ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಿದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಮೋಡಿ ಮಾಡಿರುವ ನಟಿ ಪೂಜಾ ಹೆಗ್ಡೆ ಕಾನ್ ಫೆಸ್ಟಿವಲ್ನಲ್ಲಿ ಭಾಗಿದ್ದಾರೆ. ನಟಿ ಪೂಜಾ ಹೆಗ್ಡೆ ರೆಡ್ ಕಾರ್ಪೆಟ್ ಮೇಲೆ ನಡೆದಾಡಿರುವ ಫೋಟೋಗಳು ಈಗಾಗಲೇ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಪೂಜಾ ಹೆಗ್ಡೆ ಲುಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಗುಲಾಬಿ ಬಣ್ಣದ ಲಾಂಗ್ ಗೌನ್ ಧರಿಸಿರುವ ಪೂಜಾ ಹೆಗ್ಡೆ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಚೆಂದದ ಡ್ರೇಸ್ ನಲ್ಲಿ ಪೂಜಾ ಹೆಗ್ಡೆ ಮಿರ ಮಿರನೇ ಮಿಂಚಿದ್ದಾರೆ. ಕಾನ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡಿರುವ ಪೂಜಾ ಹೆಗ್ಡೆ ಅವರನ್ ಫೋಟೋ ಹಾಗೂ ವಿಡಿಯೋ ನೋಡಿದ ಸಿನಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಈ ಕಾನ್ ಫೆಸ್ಟಿವಲ್ನಲ್ಲಿ ನಮ್ಮ ಬಾಲಿವುಡ್ ನಟಿ ನಮ್ಮ ಕನ್ನಡತಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ ಚಿತ್ರೋತ್ಸವದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳಲಿದೆ.