ಯಶ್ ಜೊತೆ ರೋಮ್ಯಾನ್ಸ್ ಮಾಡಲು ನಟಿ ಪೂಜಾ ಹೆಗಡೆ ಬರುತ್ತಾರ..?

By Infoflick Correspondent

Updated:Monday, June 27, 2022, 08:57[IST]

ಯಶ್ ಜೊತೆ ರೋಮ್ಯಾನ್ಸ್ ಮಾಡಲು ನಟಿ ಪೂಜಾ ಹೆಗಡೆ ಬರುತ್ತಾರ..?

ನಟಿ ಪೂಜಾ ಹೆಗ್ಡೆ ಪ್ರಸ್ತುತ ಪ್ಯಾನ್-ಇಂಡಿಯನ್ ನಟಿಯಾಗಿ ಹೆಚ್ಚು ಬೇಡಿಕೆಯಲ್ಲಿ ಇದ್ದಾರೆ. ಇದೀಗ, ಹೊಸದೊಂದು ಬಿಸಿ ಸುದ್ದಿ ಬಂದಿದೆ. ಹೌದು ಅದೇನೆಂದರೆ, ಸುಂದರ ನಾಯಕಿ ನಟಿ ಪೂಜಾ ಹೆಗಡೆ ತನ್ನ ಮುಂದಿನ ಚಿತ್ರದಲ್ಲಿ ನಮ್ಮ ಹೆಮ್ಮೆ ಕನ್ನಡ ಕೆಜಿಎಫ್ ಸಿನಿಮಾದ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆಂದು ಈಗ ಕೇಳಿ ಬಂದಿದೆ. ಹೌದು ಇದು ನಟಿ ಪೂಜಾ ಹೆಗಡೆ ಅವರದು ಸ್ಯಾಂಡಲ್ವುಡ್ನಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ನಮಗೆ ಸೂಚಿಸುತ್ತದೆ. ಮೊದಲ ಕನ್ನಡ ಸಿನಿಮಾ ಪ್ರಾಜೆಕ್ಟ್ ಬಗ್ಗೆ ಕೆಲವು ವಿವರಗಳು ಹೀಗಿವೆ ನೋಡಿ... 

'ಕೆಜಿಎಫ್ ಚಾಪ್ಟರ್ 2' ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರಕ್ಕೆ 'ಯಶ್ 19' ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ನೀಡಲಾಗಿದ್ದು, ಈ ಚಿತ್ರದ ನಾಯಕಿಯಾಗಿ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ. ಸಕ್ನಿಲ್ಕ್ ವರದಿ ಮಾಡಿದಂತೆ, ನಟಿ ಪೂಜಾ ಅವರನ್ನು ತಯಾರಕರು ಸಂಪರ್ಕಿಸಿದ್ದಾರೆ ಜೊತೆಗೆ ಚಿತ್ರದ ಬಗ್ಗೆ ಮಾತುಕತೆಗಳು ಉತ್ತಮವಾಗಿ  ನಡೆದಿವೆ ಎಂದು ಹೇಳಲಾಗುತ್ತಿದೆ. ಹೌದು 'ಮಫ್ತಿ', ಸಿನಿಮಾ ಈಗಾಗಲೇ ಸೂಪರ್‌ ಹಿಟ್ ಆಗಿದ್ದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಚಲನಚಿತ್ರವನ್ನು ನಿರ್ಮಿಸಿ ಹೆಸರುವಾಸಿಯಾದ ನಿರ್ದೇಶಕ ನರ್ತನ್ ಅವರು ನಟ 'ಯಶ್ 19' ಅನ್ನು ನಿರ್ದೇಶಿಸಲಿದ್ದಾರೆ...

'ಯಶ್ 19' ನಲ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಪೂಜಾ ಹೆಗ್ಡೆ ವಿಜಯ್ ದೇವರಕೊಂಡ ಜೊತೆ 'ಜೆಜಿಎಂ' ರಣವೀರ್ ಸಿಂಗ್ ಜೊತೆ 'ಸರ್ಕಸ್', ಸಲ್ಮಾನ್ ಖಾನ್ ಜೊತೆ 'ಕಭಿ ಈದ್ ಕಭಿ ದೀಪಾವಳಿ' ಮತ್ತು ನಟ ಮಹೇಶ್ ಬಾಬು ಅವರ ಜೊತೆಗೂ ನಟಿಸುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ...