Prashanth Neel : ಪ್ರಭಾಸ ಅಭಿಮಾನಿಯಿಂದ ಪ್ರಶಾಂತ ನೀಲ್ ಗೆ ಬೆದರಿಕೆ ಪತ್ರ ಬಂದಿದ್ಯಾಕೆ ? ಅದರಲ್ಲೇನಿದೆ!

By Infoflick Correspondent

Updated:Saturday, May 14, 2022, 20:47[IST]

Prashanth Neel : ಪ್ರಭಾಸ ಅಭಿಮಾನಿಯಿಂದ ಪ್ರಶಾಂತ ನೀಲ್ ಗೆ ಬೆದರಿಕೆ ಪತ್ರ ಬಂದಿದ್ಯಾಕೆ ? ಅದರಲ್ಲೇನಿದೆ!

ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಬಾಕ್ಸ್ ಆಫೀಸ್ ನಲ್ಲೂ ಧೂಳ್ ಎಬ್ಬಿಸಿದೆ. ಇಡೀ ವಿಶ್ವವೇ ಪ್ರಶಾಂತ್ ನೀಲ್ ಅವರನ್ನು ಕೊಂಡಾಡುತ್ತಿದೆ. 

ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಸಿನಿಮಾದ ಚಿತ್ರೀಕರಣ ಸದ್ಯ 35ರಷ್ಟು ಮುಕ್ತಾಯವಾಗಿದೆ. ಇನ್ನು ಉಳಿದ ಭಾಗದ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗುತ್ತಿದೆ.

ಪ್ರಭಾಸ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಅಭಿಮಾನಿ ಹೀಗೆ ಮಾಡಲು ಕಾರಣವೇನು ಗೊತ್ತೆ ?

ಈ ಮೊದಲು ರಾಧೆ ಶ್ಯಾಮ್ ಬಿಡುಗಡೆಗೂ ಮೊದಲು ಅಭಿಮಾನಿಯೊಬ್ಬ ಅಪ್ ಡೇಟ್ ನೀಡುವಂತೆ ಕೋರಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಇದು ಕೂಡ ವೈರಲ್ ಆಗಿತ್ತು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು ಚಿತ್ರತಂಡ. ರಾಧೆ-ಶ್ಯಾಮ್​ ಬಿಡುಗಡೆಯಾದ ಬಳಿಕ ಚೆನ್ನಾಗಿಲ್ಲ ಎಂದು ಮನನೊಂದು ಪ್ರಭಾಸ್​ ಅಭಿಮನಿಯೊಬ್ಬ ಸೂಸೈಡ್​ ಮಾಡಿಕೊಂಡಿದ್ದ.

ಇದೀಗ ಪ್ರಶಾಂತ್ ನೀಲ್ ಅವರಿಗೂ ಅಭಿಮಾನಿಗಳು ಅಪ್‌ಡೆಟ್ ನೀಡುವಂತೆ ಬೆನ್ನುಬಿದ್ದಿದ್ದಾರೆ. ಸಲಾರ್ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಇದುವರೆಗೂ ಸಿನಿಮಾದಿಂದ ಯಾವುದೇ ಅಪ್ ಡೆಟ್ ಸಿಕ್ಕಿಲ್ಲ. ನಾವು ಈಗಾಗಲೇ ತುಂಬಾ ನೊಂದಿದ್ದೇವೆ  ನೀವು ಸಿನಿಮಾಬಗ್ಗೆ ಅಪ್ ಡೇಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಒಬ್ಬ ಪತ್ರ ಬರೆದಿದ್ದಾನೆ.

ಒಂದು ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಈ ತಿಂಗಳಲ್ಲಿ ಅಪ್ ಡೇಟ್ ನೀಡದಿದ್ದರೆ ನಾನು  ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಬಿಸಿಸುದ್ದಿಯಾಗಿದೆ.