Prabhas: ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾದ ನಟ ಪ್ರಭಾಸ್: ಹುಡುಗಿ ಯಾರು ಗೊತ್ತಾ..?

By Infoflick Correspondent

Updated:Monday, June 13, 2022, 07:44[IST]

Prabhas: ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾದ ನಟ ಪ್ರಭಾಸ್: ಹುಡುಗಿ ಯಾರು ಗೊತ್ತಾ..?

ನಟ ಪ್ರಭಾಸ್ ಅವರಿಗೆ ಬಿಗ್ ಹಿಟ್ಟ ಕೊಟ್ಟ ಚಿತ್ರವೆಂದರೆ ಅದು ಬಾಹುಬಲಿ ಸಿನಿಮಾ. ಬಾಹುಬಲಿ ಸಿನಿಮಾದಲ್ಲಿ ನಟಿಸಿದ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆದರು. ಪೌರಾಣಿಕ ವೇಷದಲ್ಲಿ ಅದ್ಭುತವಾಗಿ ಕಾಣಿಸುವ ಪ್ರಭಾಸ್ ಅವರು ಬಾಹುಬಲಿ ಚಿತ್ರವಾದ ಮೇಲೆ ಸಾಹೋ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಹಿಟ್ ಆಗುತ್ತೆ. ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಸಾಹೋ ಚಿತ್ರ ಮಕಾಡೆ ಮಲಗಿತ್ತು. ಸಾಹೋ ನಂತರ ಪ್ರೀತಿಯ ಕಥೆ ಹೇಳುವ ರಾಧೆ ಶ್ಯಾಮ್ ಸಿನಿಮಾದಲ್ಲಿ ಬಣ್ಣ ಹಚ್ಚಿದರು.

ದುರಾದೃಷ್ಟವಶಾತ್ ರಾಧೆ ಶ್ಯಾಮ್ ಚಿತ್ರ ಕೂಡ ಪ್ರಭಾಸ್ ಅವರ ಕೈ ಹಿಡಿಯಲಿಲ್ಲ. ಕೆಲ ನೆಗೆಟಿವ್ ರಿವ್ಯೂವ್ ಗಳಿಂದಾಗಿ ರಾಧೆ ಶ್ಯಾಮ್ ಚಿತ್ರ ಸೋಲುಂಡಿದೆ ಎನ್ನಬಹುದು. ರಾಧೆ ಶ್ಯಾಮ್ ಸಿನಿಮಾ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಭಾಸ್ ಗೆ ತುಂಬಾ ಬೇಸರವಾಗಿತ್ತು. ಆದರೂ ಮುಂದೆ ಸಾಗಬೇಕು ಎಂದು ಕೊಮಡು ಪ್ರಭಾಸ್ ಅವರು ತಮ್ಮ ಮುಂದಿನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದೇ, ಪ್ರಶಾಂತ್ ನೀಲ್ ನಿರ್ದೇಶನ ಸಲಾರ್ ಚಿತ್ರ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರ ಅಭಿಮಾನಿಗಳೂ ಕೂಡ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಸದ್ಯ ಸಲಾರ್ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ನಡುವೆಯೇ ಪ್ರಭಾಸ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಈ ವರ್ಷಾಂತ್ಯದೊಳಗೆ ಪ್ರಭಾಸ್ ಅವರು ಮದುವೆಯಾಗಲಿದ್ದಾರಂತೆ. ಅದೂ ಕೂಡ ತಮ್ಮ ಮನೆಯಲ್ಲಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಲು ಒಪ್ಪಿದ್ದಾರಂತೆ. ಆದರೆ ಹುಡುಗಿ ಯಾರು, ಮದುವೆ ಯಾವಾಗ..? ಎಂಬೆಲ್ಲಾ ಸುದ್ದಿಗಳು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.