ಪ್ರಭುದೇವ್ ಜೊತೆ ಸಕತ್ ಸ್ಟೆಪ್ ಹಾಕಿದ ಅಪ್ಪು..! ಕನಸು ನನಸಾಯಿತು ಎಂದಿದ್ದೇಕೆ ನೋಡಿ..?

Updated: Monday, September 20, 2021, 12:31 [IST]

ಪ್ರಭುದೇವ್ ಜೊತೆ ಸಕತ್ ಸ್ಟೆಪ್ ಹಾಕಿದ ಅಪ್ಪು..! ಕನಸು ನನಸಾಯಿತು ಎಂದಿದ್ದೇಕೆ ನೋಡಿ..?

ಒಂದು ಕಡೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇನ್ನೊಂದು ಕಡೆ ಡಾನ್ಸ್ ಕಿಂಗ್ ಪ್ರಭುದೇವ. ಹೌದು ಈ ಇಬ್ಬರೂ ಒಟ್ಟಿಗೆ ನೃತ್ಯ ಮಾಡಿದರೆ ಹೇಗಿರುತ್ತದೆ, ಇದಕ್ಕೆ ಸಾಕ್ಷಿಯಂತೆ ಇವರಿಬ್ಬರ ಕಾಂಬಿನೇಷನ್‌ ಲಕ್ಕಿಮ್ಯಾನ್‌ ಎಂಬ ಚಿತ್ರದಲ್ಲಿ ಕಾಣ ಬರುತ್ತಿದೆ. ಹೌದು ನಟ ನಿರ್ದೇಶಕ ಡ್ಯಾನ್ಸರ್ ಪ್ರಭುದೇವ ಅವರೊಟ್ಟಿಗೆ ಡ್ಯಾನ್ಸ್ ಮಾಡಿದ್ದರ ಬಗ್ಗೆ ವಿಶೇಷ ಅನುಭವವನ್ನ ಅಪ್ಪು ಹಂಚಿಕೊಂಡಿದ್ದಾರೆ.

ಈತನ ದೇಹದಲ್ಲಿ ಮೂಳೆಗಳೇ ಇಲ್ವೇನು ಎನ್ನುವ ರೀತಿ ಕೇಳಿದ್ರೆ ಅದು ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರ ನೃತ್ಯ ನೋಡಿದ್ರೆ ಹಾಗೇನಿಸುತ್ತದೆ. ಇಂತ ವಿಚಿತ್ರ ಮಾತು ನೋಡಿಯೇ ಇವರ ಡ್ಯಾನ್ಸ್ ನೋಡಿಯೇ ಇವರಿಗೆ ಭಾರತದ ಮೈಕಲ್‌ ಜಾಕ್ಸನ್‌ ಎಂಬ ಬಿರುದಿದೆ.. ಹೌದು ಈ ರೀತಿ ಅಪ್ರತಿಮ ನಟನ ಜೊತೆ ನಟಿಸುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಆದ್ರೆ ನಮ್ಮ ಕನ್ನಡ ಸಿನಿಮಾ ರಂಗದ 'ಪವರ್‌ ಸ್ಟಾರ್‌' ಪುನೀತ್ ಅವರು ಈ ಡಾನ್ಸಿಂಗ್‌ ಕಿಂಗ್ ಸ್ಟಾರ್‌ ಜೊತೆ ಸಿನಿಮಾವೊಂದಕ್ಕೆ ಭರ್ಜರಿ ಹೆಜ್ಜೆ ಹಾಕಿದ್ದಾರೆ, ಜೊತೆಗೆ ಥ್ರಿಲ್‌ ಸಹ ಆಗಿದ್ದಾರೆ..

ನಟ ಪುನೀತ್‌ ಅವರು ಕೂಡ ಒಳ್ಳೆಯ ನೃತ್ಯಗಾರರು ಆದ್ರೂ ಕೂಡ ಡಾನ್ಸರ್ ಪ್ರಭುದೇವ ಅವರ ಜತೆ ಡ್ಯಾನ್ಸ್ ‌ ಮಾಡಬೇಕೆಂದಾಗ ಟೆನ್ಷನ್‌ ಆಗಿತ್ತು ಎಂದಿದ್ದಾರೆ ಅಪ್ಪು. ಅಶ್ಟಕ್ಕೂ ಪುನೀತ್ ಹೇಳಿದ್ದಿಷ್ಟು..' ಪ್ರಭುದೇವ ಜತೆ ಡ್ಯಾನ್ಸ್ ಮಾಡುವುದು ಪ್ರತಿಯೊಬ್ಬರ ಕನಸು, ನಾನಂತೂ ಅವರ ಡ್ಯಾನ್ಸ್ ನೋಡಿ ಯಾವಾಗಲೂ ಎಕ್ಸೈಟ್‌ ಆಗುತ್ತಿದ್ದೆ. ಇದೇ ಮೊದಲ ಬಾರಿಗೆ ಅವರ ಜತೆ ನೃತ್ಯ ಮಾಡಿದ್ದು ನನಗೆ ಸಿಕ್ಕಾಪಟ್ಟೆ ಥ್ರಿಲ್‌ ಆಗಿದೆ. ಅವರ ಡ್ಯಾನ್ಸಿಂಗ್‌ ಮೂಮೆಂಟ್‌ಗಳು, ಕಾಲು ಕುಣಿಸುವ ರೀತಿ, ಪರ್ಫೆಕ್ಟ್ ಸ್ಟೆಪ್‌ ಎಲ್ಲವೂ ನೋಡುತ್ತಿದ್ದಾರೆ ರೋಮಾಂಚಕ ಎನಿಸುತ್ತದೆ, ಹಾಗೆ ನಾನೇ ಲಕ್ಕಿ ಮ್ಯಾನ್‌' ಎಂದರು...

ಹೌದು ನಟ ಪುನೀತ್‌ ಅವರ ಚಿತ್ರ, ಹಾಗೆ ನಟನೆಗೆ ಅಭಿಮಾನಿಗಳಿದ್ದಂತೆ, ಪ್ರಭುದೇವ್ ಅವರ ನೃತ್ಯಕ್ಕೂ ಅಭಿಮಾನಿಗಳಿದ್ದಾರೆ. ಆ ಕಾರಣಕ್ಕೆ ಈ ಇಬ್ಬರ ಡ್ಯಾನ್ಸ್ ‌ ನೋಡಲು ಬಹಳಷ್ಟು ಮಂದಿ ತುಂಬಾ ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಇದೀಗ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್‌ ಕನ್ನಡದಲ್ಲಿ ಲಕ್ಕಿ ಮ್ಯಾನ್‌ ಎಂಬ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದ ಹಾಡೊಂದಕ್ಕಾಗಿ ಇಬ್ಬರಿಗೂ ಡಾನ್ಸ್ ಮಾಡಿಸಿದ್ದು, ಈ ಸಿನಿಮಾ ಚಿತ್ರೀಕರಣ ಮೊನ್ನೆಯಷ್ಟೇ ಮುಗಿದಿದೆ. 

ಪುನೀತ್ ಅವರು ಮಾತು ಮುಂದುವರೆಸಿ ಪ್ರಭುದೇವ್ ಅವರ ಬಗ್ಗೆ 'ನಾನು ಬಹಳ ದಿನಗಳಿಂದ ಅವರ ಜತೆ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಬೇಕು ಎಂದು ಹೇಳುತ್ತಲೇ ಇದ್ದೆ. ಅದು 'ಲಕ್ಕಿ ಮ್ಯಾನ್‌' ಮೂಲಕ ಈಡೇರಿತು. ಒಂದರ್ಥದಲ್ಲಿ ಅವರ ಜತೆ ನೃತ್ಯ ಮಾಡಿದ್ದಕ್ಕೆ ನಾನೇ ಲಕ್ಕಿ ಮ್ಯಾನ್‌. ಭಾರತದಲ್ಲಿ ಡ್ಯಾನ್ಸ್ ‌ ಕಲಿಯಬೇಕು ಎನ್ನುವ ಎಲ್ಲರಿಗೂ ಪ್ರಭುದೇವ ಒಂದು ಅರ್ಥದಲ್ಲಿ ಸ್ಫೂರ್ತಿದಾಯಕರಾಗಿದ್ದಾರೆ. ಅವರನ್ನು ಕಂಡರೆ ನನಗೆ ಬಹಳ ಅಚ್ಚುಮೆಚ್ಚು. ಅವರ ಜತೆ ಕನ್ನಡದ ಕೋಟ್ಯಧಿಪತಿ ಹೋಸ್ಟ್‌ ಮಾಡಿದ್ದೆ. ಈಗ ಅವರ ಜತೆ ನೃತ್ಯ ಮಾಡಿದ್ದೇನೆ. ಇವೆಲ್ಲವೂ ಅವರ ಸಹೋದರ ನಾಗೇಂದ್ರ ಪ್ರಸಾದ್‌ ಅವರಿಗೋಸ್ಕರ. ನಾಗೇಂದ್ರ ಪ್ರಸಾದ್‌ರ" ಚಿತ್ರ" ಸಿನಿಮಾದ "ಜಿಂಬೋಲೆ.. ಜಿಂಬೋಲೆ..." ಹಾಡು ಆಗಿನ ಕಾಲಕ್ಕೆ ಸಿಕ್ಕಾಪಟ್ಟೆ ಫೇವರಿಟ್‌ ಆಗಿತ್ತು. ಆ ಕುಟುಂಬದ ಜತೆ ನಮ್ಮ ಒಡನಾಟ ಬಹಳ ವರ್ಷಗಳಿಂದ ಇದೆ. ಹಾಗಾಗಿ ಅವರ ಜತೆ ಕೆಲಸ ಮಾಡುತ್ತಿದ್ದೇನೆ. ಪ್ರಭುದೇವ ಅವರ ಜತೆ ನೃತ್ಯ ಮಾಡುವ ಹುಚ್ಚು ಯಾರಿಗೆ ಇರುವುದಿಲ್ಲ ಹೇಳಿ? ಅವರ ಜತೆ ಡ್ಯಾನ್ಸ್ ‌ ಎಂದಾಗ ನನಗೆ ಟೆನ್ಷನ್‌ ಸಹ ಆಗಿತ್ತು. ಅದ್ಭುತವಾದ ಡ್ಯಾನ್ಸರ್ ಅವರು, ಅವರಿಗೆ ಸ್ಟೆಪ್‌ಗಳನ್ನು ಮ್ಯಾಚ್‌ ಮಾಡಲು ನನಗೆ ಕಷ್ಟವಾಯಿತು. ಜತೆಗೆ ಎಲ್ಲಿ ಮಿಸ್‌ ಆಗುತ್ತದೋ ಎಂಬ ಟೆನ್ಷನ್‌ ಬೇರೆ ಇತ್ತು. ಒಟ್ಟಾರೆ ಈ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ" ಎಂದು ಅಪ್ಪು ಮಾತಾಡಿದರು...