Prakash Rai : ಮತ್ತೊಮ್ಮೆ ಮದುವೆಯಾಗಿ, ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಪ್ರಕಾಶ್ ರೈ ; ಯಾರ ಜೊತೆ ನೋಡಿ ?

By Infoflick Correspondent

Updated:Wednesday, July 13, 2022, 14:59[IST]

Prakash Rai :  ಮತ್ತೊಮ್ಮೆ ಮದುವೆಯಾಗಿ, ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಪ್ರಕಾಶ್  ರೈ ; ಯಾರ ಜೊತೆ ನೋಡಿ ?

ಗಟ್ಟಿ ಧ್ವನಿಯ ಬಹುಭಾಷಾ ನಟ ಪ್ರಕಾಶ್ ರೈ ಮತ್ತೊಮ್ಮೆ ಮದುವೆಯಾಗಿದ್ದಾರೆ. ಹೌದು.. ಈಗಾಗಲೇ ಎರಡು ಮದುವೆಯಾಗಿರುವ ಪ್ರಕಾಶ್ ರೈ ನಿನ್ನೆ ಮತ್ತೊಮ್ಮೆ ಮದುವೆಯಾಗಿದ್ದಾರೆ. ಅದೂ ಕೂಡ ಅವರ ಮುದ್ದು ಮಗ ವೇದಾಂತ್ ಗಾಗಿ ಎಂದು ಹೇಳಿದ್ದಾರೆ. ಹಾಗಾದರೆ ಅವರ ಪತ್ನಿಗೆ ಏನಾಯ್ತು..? ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.. ಪ್ರಕಾಶ್ ರೈ ಮತ್ತೆ ಮದುವೆಯಾಗಲು ಅವರ ಮಗ ವೇದಾಂತ್ ಕಾರಣವಂತೆ. ನಿನ್ನೆ ಪ್ರಕಾಶ್ ರೈ ಅವರು, ತಮ್ಮ ಎರಡನೇ ಪತ್ನಿಯನ್ನು ಮದುವೆಯಾಗಿ 11ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಅವರು ಮತ್ತೊಂದು ಮದುವೆಯಾಗಿ ಅಭಿಮಾನಿಗಳಿಗೆ ಶಾತ್ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಅವರ ಮಗ, ಅದರರ್ಥ ಪ್ರಕಾಶ್ ರೈ ಪುತ್ರ ತನ್ನ ತಂದೆ-ತಾಯಿ ಮದುವೆಯನ್ನು ನೋಡಿಲ್ಲವಂತೆ. ಹಾಗಾಗಿ ನೀವಿಬ್ಬರು ನನ್ನ ಎದುರು ಮದುವೆಯಾಗಿ ಎಂದು ಕೇಳಿದ್ದಾನೆ.   

ಹೀಗಾಗಿ ಕಳೆದ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ವೇಳೆ, ಪ್ರಕಾಶ್ ರೈ ಹಾಗೂ ಪತ್ನಿ ಪೋನಿ ವರ್ಮಾ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈ ಬಗ್ಗೆ ಸ್ವತ: ಪ್ರಕಾಶ್ ರೈ ಅವರೇ ಟ್ವೀಟ್ ಕೂಡ ಮಾಡಿದ್ದಾರೆ. ನಾವು ಇನ್ನೊಮ್ಮೆ ಮದುವೆ ಮಾಡಿಕೊಂಡಿದ್ದೇವೆ. ಏಕೆಂದರೆ, ನಮ್ಮಿಬ್ಬರ ಮದುವೆ ನೋಡಲು ಮಗ ವೇದಾಂತ್​ ತುಂಬ ಆಸೆ ಪಡುತ್ತಿದ್ದ. ಹಾಗಾಗಿ ಮದುವೆಯಾದೆವು. ಈ ಸುಸಂದರ್ಭದಲ್ಲಿ ಕುಟುಂಬದೊಂದಿಗೆ ತುಂಬ ಉತ್ತಮ ಸಮಯ ಕಳೆದೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. 

ಈ ಸಮಾರಂಭದಲ್ಲಿ ಪ್ರಕಾಶ್ ರೈ ಅವರ ಮೊದಲ ಪತ್ನಿಯ ಮಕ್ಕಳು  ಕೂಡ  ಭಾಗಿಯಾಗಿದ್ದಾರೆ. ಮೇಘನಾ ಹಾಗೂ ಪೂಜಾ ಇವರ ಮೊದಲ ಪತ್ನಿ ಲಲಿತಾ ಕುಮಾರಿಯ ಮಕ್ಕಳು. ಲಲಿತಾ ಹಾಗೂ ಪ್ರಕಾಶ್ 2009ರಲ್ಲಿ ವಿಚ್ಛೇಧನ ಪಡೆದು, 2010 ರಲ್ಲಿ ಪೋನಿ ವರ್ಮಾರನ್ನು ಮದುವೆಯಾದರು.