Prakash Raj : ರಸ್ತೆಗಳನ್ನು ಸರಿಪಡಿಸುವ ವಿಷಯಕ್ಕೆ ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ.: ಏನು ಹೇಳಿದ್ದಾರೆ ನೋಡಿ

By Infoflick Correspondent

Updated:Monday, September 5, 2022, 08:09[IST]

Prakash Raj : ರಸ್ತೆಗಳನ್ನು ಸರಿಪಡಿಸುವ ವಿಷಯಕ್ಕೆ ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ.: ಏನು ಹೇಳಿದ್ದಾರೆ ನೋಡಿ

ಸ್ನೇಹಿತರೆ ನಮಸ್ಕಾರ ರಾಜಕೀಯ ವಿಚಾರವಾಗಿ ಕೆಲವರು ಪ್ರತಿಭಾವಂತ ಸಿನಿಮಾ ಕಲಾವಿದರು ಕೊಡುವ ಹೇಳಿಕೆಗಳು ಆಡುವ ಒಂದೊಂದು ಮಾತುಗಳು ನಿಜಕ್ಕೂ ಸತ್ಯ ಇರುವ ಹಾಗೆ ಎನಿಸುತ್ತವೆ. ನಾವು ಕೂಡ ಒಂದು ಬಾರಿ ಯೋಚನೆ ಮಾಡಿದರೆ ಅದು ಸರಿ ಎನಿಸುವಂತೆಯೇ ಇರುತ್ತವೆ. ಇನ್ನು ಕೆಲವು ಬಾರಿ ಇವರಿಗೆ ಬುದ್ಧಿ ಇಲ್ಲ ಏನೇನು ಹೇಳುತ್ತಿದ್ದಾನೆ ಎಂದೆನಿಸುವಂತಿರುತ್ತವೆ..ಇತ್ತೀಚಿಗೆ ನಟ ಪ್ರಕಾಶ್ ರಾಜ್ ಅವರು ಸಂದರ್ಶನದಲ್ಲಿ ರಾಜಕೀಯ ವಿಚಾರವಾಗಿ ಅವರ ಕೆಲ ಅನಿಸಿಕೆಗಳನ್ನು ಮಾಧ್ಯಮದ ಎದುರು ಬಿಚ್ಚಿಟ್ಟಿದ್ದಾರೆ. ಮೊನ್ನೆ ಮೈಸೂರಿಗೆ ಹೋದಾಗ ನಾನು ನೋಡಿದೆ ಪ್ರಧಾನ ಮಂತ್ರಿ ಬರುತ್ತಿದ್ದಾರೆ ಎಂದು ರಸ್ತೆಗಳನ್ನು ಸರಿಪಡಿಸಲಾಗಿತ್ತು ಅರೇ, ನಾವು ಕೋಟಿ ಕೋಟಿ ಹಣವನ್ನು ದುಡಿಯುತ್ತೇವೆ, ಕೋಟಿ ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟುತ್ತೇವೆ.

ಯಾವೊಬ್ಬ ರಾಜಕಾರಣಿ ಆಗಲಿ, ಪ್ರಧಾನಮಂತ್ರಿಯಾಗಲಿ, ಅಥವಾ ಎಂಎಲ್ಎ ಆಗಲಿ ಅವರ ಮನೆಯ ಸ್ವಂತ ದುಡ್ಡು ತಂದು ಮಾಡುವುದಿಲ್ಲ. ನಾವು ದುಡಿದು ನಮ್ಮ ಹಣವನ್ನು ತೆರಿಗೆ ಕಟ್ಟುತ್ತೇವೆ, ಈ ಮೂಲಕ ನಮಗೂ ಸ್ವಲ್ಪ ಏನಾದರೂ ಮಾಡಿ ಎಂದು ಕೇಳುತ್ತೇವೆ ಅಷ್ಟೇ, ಅವರು ಬಂದಾಗ ಮಾತ್ರ ರಸ್ತೆ ಸರಿ ಮಾಡಿಸುವುದು, ನಾವು ಹೋದಾಗ ಏನು ಇಲ್ಲ. ನಾವು ಕಟ್ಟುವ ಹಣದಿಂದ ಅದನ್ನು ಮಾಡಲು ಅವರಿಗೆ ಆಗುವುದಿಲ್ಲ, ನಾವು ಅವರಿಗೆ ಸಂಬಳ ನೀಡುತ್ತೇವೆ, ನಮ್ಮ ಹಣದಿಂದ ಅವರ ಪೆಟ್ರೋಲ್ ಊಟ, ಮನೆ ಬಾಡಿಗೆ, ಗಾಡಿ ಎಲ್ಲವನ್ನು ಕೂಡ ನಾವೆ ನೋಡಿಕೊಳ್ಳುವುದು. ನಾವೇ ಅವರಿಗೆ ಎಲ್ಲಾ, ಬೇರೆ ಯಾರು ಅಲ್ಲ. ಅವರು ಬಂದಾಗ ಮಾತ್ರ ರಸ್ತೆ ಸರಿ ಮಾಡಬೇಕಾ, ನಾವು ಹೋದಾಗ ಯಾಕೆ ಅವುಗಳು ಸರಿ ಇರುವುದಿಲ್ಲ.

ನಮ್ಮ ಮನೆಯ ಮಕ್ಕಳು ಸಣ್ಣ ಸಣ್ಣ ರಸ್ತೆಯಲ್ಲಿ ಗಾಡಿ ಓಡಾಡಿಸಿ ಕೈ ಕಾಲು ಮುರಿದುಕೊಳ್ಳಬೇಕಾ, ಇದನ್ನ ಯಾಕೆ ನೀವು ಪ್ರಶ್ನೆ ಮಾಡುತಿದ್ದೀರಿ ಎಂದು ನಮಗೆ ಕೇಳಿದಾಗ ದೇವರನ್ನು ನಂಬುತ್ತೀರಾ ಹಾಗೆ ಹೀಗೆ ಎಂದು ಹೇಳುತ್ತಾರೆ. ಅರೆ ನಾವು ಕೋಟಿ ಕೋಟಿ ತೆರಿಗೆ ಹಣ ನೀಡುತ್ತೇವೆ, ನಮ್ಮ ಹಣದಲ್ಲಿ ನೀವು ಜೀವನ ಮಾಡುವುದು, ನಾವು ನಿಮಗೆ ಸಂಬಳ ಕೊಡುವುದು, ಇದನ್ನ ನಾವು ಪ್ರಶ್ನೆ ಮಾಡಬೇಕು ಕಾರಣ ಅದು ನಮ್ಮ ಹಕ್ಕು, ನಾವು ದುಡಿಯುವ ಹಣದಲ್ಲಿ ಅವರು ಜೀವನ ಮಾಡುತ್ತಾರೆ. ನಮ್ಮ ದುಡ್ಡು ನಮ್ಮ ಹಕ್ಕು ಇದನ್ನೆಲ್ಲಾ ನಾವು ಯೋಚನೆ ಮಾಡಬೇಕು ಎಂದು ನಟ ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದ್ದು ಕೆಲವರು ನಟ ಪ್ರಕಾಶ್ ಪರ ಮಾತನಾಡಿದರೆ ಇನ್ನು ಕೆಲವರು ಅವರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ.  

ಈತ ಆ ಪಕ್ಷದ ವಿರೋಧಿ ಹಾಗಾಗಿ ಈ ರೀತಿ ಹೇಳಿಕೆಯನ್ನು ನೀಡುತ್ತಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ. ನೀವು ಕೂಡ ನಟ ಪ್ರಕಾಶ್ ರಾಜ್ ಅವರ ಈ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ, ಮತ್ತು ಮಾಹಿತಿಯನ್ನು ಶೇರ್ ಮಾಡಿ. ಹಾಗೆ ನಟ ಪ್ರಕಾಶ್ ರಾಜ್ ಅವರು ಹೇಳಿರುವುದರಲ್ಲಿ ತಪ್ಪು ಇದೆಯಾ ಎಂಬುದಾಗಿಯೂ ಸಹ ಕಮೆಂಟ್ ಮಾಡಿ ಧನ್ಯವಾದಗಳು.