Pranita subhash dance : ಇತ್ತೀಚಿಗೆ ಗರ್ಭಿಣಿಯಾಗಿದ್ದ ಪ್ರಣೀತಾ ಸುಭಾಷ್ ಜಿಮ್ ನಲ್ಲಿ ಸಕತ್ ಡ್ಯಾನ್ಸ್..! ನೆಟ್ಟಿಗರಿಂದ ಮೆಚ್ಚುಗೆ

By Infoflick Correspondent

Updated:Friday, April 29, 2022, 19:29[IST]

Pranita subhash dance : ಇತ್ತೀಚಿಗೆ ಗರ್ಭಿಣಿಯಾಗಿದ್ದ ಪ್ರಣೀತಾ ಸುಭಾಷ್ ಜಿಮ್ ನಲ್ಲಿ ಸಕತ್ ಡ್ಯಾನ್ಸ್..! ನೆಟ್ಟಿಗರಿಂದ ಮೆಚ್ಚುಗೆ

ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕ್ಟಿವ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದಿಷ್ಟು ಫೋಟೋಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳ ಜೊತೆ ಮಾತನಾಡುವ ನಟಿ ಪ್ರಣೀತಾ ಸುಭಾಷ್ ಅವರು ಅವರದೇ ಆದ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ.ಅಷ್ಟೇ ಜನಪ್ರಿಯತೆಯನ್ನು ಬೇರೆ ಸಿನಿಮಾರಂಗದಲ್ಲಿಯೂ ಕೂಡ ಹೊಂದಿದ್ದಾರೆ. ಪ್ರಣೀತಾ ಸುಭಾಷ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ 2010ರಲ್ಲಿ ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕನ್ನಡ ಚಿತ್ರರಂಗದ ಇನ್ನೊಬ್ಬ ಖ್ಯಾತ ನಟ ದುನಿಯಾ ವಿಜಯ್ ಜೊತೆ ಜರಾಸಂಧ ಮತ್ತು ಭೀಮಾತೀರದಲ್ಲಿಯೂ ಸಹ ಕಾಣಿಸಿದ್ದರು.

ನಟಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅತ್ತ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿಯೂ ಸಹ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಾಗೆ ಬಾಲಿವುಡ್ ಅಂಗಳದಲ್ಲಿ ಕೆಲವೊಂದಿಷ್ಟು ಸೈಡ್ ಪಾತ್ರಗಳನ್ನು ಮಾಡಿ ಅಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಹೌದು ಪ್ರಣೀತಾ ಸುಭಾಷ್ ಅವರು ಕಳೆದ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಆದರೆ ಆ ವಿಚಾರವನ್ನು ಎಲ್ಲಿಯೂ ಕೂಡ ಬಹಿರಂಗಪಡಿಸಲಿಲ್ಲ. ಬಳಿಕ ಅವರ ಫ್ರೆಂಡ್ ಒಬ್ಬರು ಮದುವೆಯ ಆ ಒಂದು ಫೋಟೋ ಮೂಲಕ ಪ್ರಣಿತ ಸುಭಾಷ್ ಅವರು ನಿತಿನ್ ಎಂಬವರ ಜೊತೆ ಮದುವೆಯಾಗಿದ್ದಾರೆ ಎನ್ನಲಾಗಿ ವಿಷಯ ತಿಳಿದುಬಂದಿತ್ತು. ಅಭಿಮಾನಿಗಳು ಆಗ ಶುಭಕೋರಿದ್ದರು.  

ಹೌದು ಇತ್ತೀಚಿಗೆ ನಾವು ಮೂವರಾಗುತ್ತಿದ್ದೇವೆ ಎಂದು ನಟಿ ಪ್ರಣಿತ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದು ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.

ಹೌದು ಇದೆ ಪ್ರಣಿತ ಅವರು ಈಗ ಗರ್ಭಿಣಿಯಾಗಿದ್ದರೂ ಜಿಮ್ ನಲ್ಲಿ ಮನರಂಜನೆಯ ಹಾಡೊಂದಕ್ಕೆ ಸಕ್ಕತ್ತಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋ ನೋಡಿ. ಹಾಗೇ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...