ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋಸ್ ಹೇಗಿದೆ ಗೊತ್ತಾ..?

By Infoflick Correspondent

Updated:Monday, May 23, 2022, 10:58[IST]

ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋಸ್ ಹೇಗಿದೆ ಗೊತ್ತಾ..?

ಬಟ್ಟಲು ಕಂಗಳ ಚೆಲುವೆ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್, ತಮ್ಮ ವಯಕ್ತಿಕ ಜೀವನದ ಬಗ್ಗೆ ಎಲ್ಲೂ ಹೆಚ್ಚಾಗಿ ಹಂಚಿಕೊಳ್ಳುವುದಿಲ್ಲ. ಕಳೆದ ವರ್ಷ ಸದ್ದಿಲ್ಲದೇ ಮದುವೆಯಾಗಿದ್ದರು. ನಿತಿನ್ ರಾಜು ಎಂಬುವರ ಜೊತೆಗೆ ನಟಿ ಪ್ರಣೀತಾ ಸುಭಾಷ್ ಸಪ್ತಪದಿ ತುಳಿದಿದ್ದರು. ನಿತಿನ್ ರಾಜು ಹಾಗೂ ಪ್ರಣೀತಾ ಸುಭಾಷ್ ಮದುವೆಗೆ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಸಾಕ್ಷಿಯಾಗಿದ್ದರು. ಪ್ರಣೀತಾ ಸುಭಾಷ್ ಮದುವೆಯಾಗಿರುವ ಫೋಟೋವನ್ನು ಸ್ನೇಹಿತರೊಬ್ಬರು ಸೋಶಿಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಪ್ರಣೀತಾ ಅವರ ಮದುವೆ ಗುಟ್ಟಾಗಿ ಉಳಿಯಲಿಲ್ಲ.   

ಈಗ ಸ್ವತಃ ಪ್ರಣೀತಾ ಅವರೇ ತಮ್ಮ ಮನೆಗೆ ಹೊಸ ಅಥಿತಿ ಆಗಮನದ ವಿಚಾರವನ್ನೂ ಕಳೆದ ತಿಂಗಳು ಅವರೇ ಹೇಳಿಕೊಂಡಿದ್ದರು. ಪ್ರಣೀತಾ ಅವರ ಪತಿ ನಿತಿನ್ ರಾಜು ಕೂಡ ಬೆಂಗಳೂರು ಮೂಲದವರೇ ಆಗಿದ್ದು, ಮಾಲ್ ಒಂದರ ಮಾಲೀಕರು ಎನ್ನಲಾಗಿದೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಪ್ರಣೀತಾ ಸುಭಾಷ್ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಹಂಗಾಮ-2 ಚಿತ್ರಗಳಲ್ಲಿ ಪ್ರಣೀತಾ ಸುಭಾಷ್ ಅಭಿನಯಿಸಿದ್ದರು. ಇದರೊಂದಿಗೆ ಕನ್ನಡದ ರಾಮನ ಅವತಾರ ಚಿತ್ರದಲ್ಲೂ ಪ್ರಣೀತಾ ಸುಭಾಷ್ ನಟಿಸಿದ್ದರು. ಆದರೆ ಮದುವೆಯ ನಂತರ ಪ್ರಣೀತಾ ಸಿನಿರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ.   

ಪ್ರಣೀತಾ ಅವರು ಗರ್ಭಿಣಿಯಾಗಿದ್ದು, ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಪತಿ ನಿತಿನ್ ಅವರ 34ನೇ ಹುಟ್ಟುಹಬ್ಬಕ್ಕೆ ಮಗುವನ್ನು ಗಿಫ್ಟ್ ಆಗಿ ನೀಡುವುದಾಗಿ ಪೋಸ್ಟ್ ಮಾಡಿದ್ದರು. ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪತಿಯ ಜೊತೆಗೆ ಪ್ರೆಗ್ನೆನ್ಸಿ ರಿಪೋರ್ಟ್ ಅನ್ನು ಕೂಡ ಪೋಸ್ಟ್ ಮಾಡಿದ್ದರು. ಕೆಲ ದಿನಗಳ ಹಿಮದಷ್ಟೇ ಸೀಮಂತದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದರು. ಇದೀಗ ಪ್ರಣೀತಾ ಅವರ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋಸ್ ಹೇಗಿದೆ ಗೊತ್ತಾ..?

ಪ್ರಣೀತಾ ಪತಿ ನಿತಿನ್ ರಾಜ್ ಉದ್ಯಮಿ

ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋಸ್ ಹೇಗಿದೆ ಗೊತ್ತಾ..?

ಪತಿ ಜೊತೆಗೆ ಪ್ರೆಗ್ನೆನ್ಸಿ ರಿಪೋರ್ಟ್ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡ ಪ್ರಣೀತಾ

ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋಸ್ ಹೇಗಿದೆ ಗೊತ್ತಾ..?

ಪ್ರಣೀತಾ ಪತಿ ನಿತಿನ್ ಅವರ 34ನೇ ಹುಟ್ಟುಹಬ್ಬಕ್ಕೆ ಹೊಸ ಅತಿಥಿ ಆಗಮನ

ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋಸ್ ಹೇಗಿದೆ ಗೊತ್ತಾ..?

ನಟಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಫೋಟೋ