ಮಗುವಾದ ತಕ್ಷಣವೇ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಹೇಳಿದ ಮಾತುಗಳಿವು

By Infoflick Correspondent

Updated:Saturday, June 11, 2022, 08:52[IST]

ಮಗುವಾದ ತಕ್ಷಣವೇ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಹೇಳಿದ ಮಾತುಗಳಿವು

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪ್ರಣೀತಾ, ಕಳೆದ ವರ್ಷ ಮೇನಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇತ್ತೀಚೆಗೆ ಅವರ ಬೇಬಿ ಬಂಪ್ ಚಿತ್ರಗಳು ವೈರಲ್ ಆಗಿದ್ದವು. ಇದೀಗ ಮುದ್ದು ಕಂದನ ಆಗಮನದಿಂದ ಪ್ರಣೀತಾ ಸುಭಾಷ್ ತಾಯ್ತನದ ಸಂಭ್ರಮದಲ್ಲಿದ್ದಾರೆ.  

ಈಗ ನಟಿ ಪ್ರಣೀತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಅವರು, ಮಗಳು ಬಂದಾಗಿನಿಂದ ನನ್ನ ಜೀವನ ಅವಾಸ್ತವಿಕವಾಗಿದೆ ಎಂದು ಬರೆದುಕೊಂಡಿದ್ದಾರೆ. 

ಕಳೆದ ಕೆಲವು ದಿನಗಳು ವಿಶಿಷ್ಟವಾಗಿವೆ. ಅದರಲ್ಲೂ ಹೆಣ್ಣು ಮಗು ಹುಟ್ಟಿದ ದಿನದಿಂದ ಬಹಳ ವಿಶೇಷವಾಗಿದೆ. ಸ್ತ್ರೀರೋಗ ತಜ್ಞೆ ತಾಯಿಯನ್ನು ಹೊಂದಿರುವುದು ನಿಜಕ್ಕೂ ನನ್ನ ಅದೃಷ್ಟ. ಆದರೆ, ಅವರಿಗೆ ಭಾವನಾತ್ಮಕವಾಗಿ ಇದು ಕಠಿಣ ಸಮಯ’ ಎಂದು ಅವರು ಹೇಳಿದ್ದಾರೆ. ಕಡಿಮೆ ನೋವಿನಲ್ಲಿ ಹೆರಿಗೆ ಮಾಡಿಸಿದ ವೈದ್ಯಕೀಯ ತಂಡಕ್ಕೆ ಧನ್ಯವಾದ ಎಂದು ಪ್ರಣೀತಾ ಹೇಳಿದ್ದಾರೆ. 

ಅದೃಷ್ಟವಶಾತ್ ಆಸ್ಟರ್‌ ಆರ್‌ವಿಯಲ್ಲಿ ಡಾ.ಸುನೀಲ್ ಈಶ್ವರ್ ಮತ್ತು ಅವರ ತಂಡದಿಂದ ನನ್ನ ಹೆರಿಗೆ ಸರಾಗವಾಗಿ ಆಯ್ತು. ಅರಿವಳಿಕೆ ತಜ್ಞ ಡಾ.ಸುಬ್ಬು ಮತ್ತು ಅವರ ತಂಡಕ್ಕೂ ನನ್ನ ಧನ್ಯವಾದಗಳು. ಇವರುಗಳಿಂದ ನನ್ನ ಹೆರಿಗೆ ಪ್ರಕ್ರಿಯೆಯಲ್ಲಿ ಕಡಿಮೆ ನೋವು ಅನುಭವಿಸಿದೆ. ನನ್ನ ಈ ಜನ್ಮ ಕಥೆಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಕಾಯುತ್ತಿದ್ದೇನೆ’’ ಎಂದು ನಟಿ ಪ್ರಣೀತಾ ಸುಭಾಷ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಮಗು ಹಾಗೂ ವೈದ್ಯರ ಜೊತೆ ಕ್ಲಿಕ್ ಮಾಡಿಕೊಂಡ ಫೋಟೋಗಳನ್ನೂ ನಟಿ ಪ್ರಣೀತಾ ಸುಭಾಷ್ ಹಂಚಿಕೊಂಡಿದ್ದಾರೆ.