Prashant Neel : ಪ್ರಶಾಂತ್ ನೀಲ್ ಬರ್ತಡೆ ಸಂಭ್ರಮ ಹೇಗಿತ್ತು ? ಯಾರ್ಯಾರು ಬಂದಿದ್ದರು

By Infoflick Correspondent

Updated:Saturday, June 4, 2022, 21:21[IST]

Prashant Neel   :  ಪ್ರಶಾಂತ್ ನೀಲ್ ಬರ್ತಡೆ ಸಂಭ್ರಮ ಹೇಗಿತ್ತು ? ಯಾರ್ಯಾರು ಬಂದಿದ್ದರು

ಪ್ರಶಾಂತ್​ ನೀಲ್​ ಅವರಿಗೆ ಇಂದು (ಜೂನ್​ 4) ಜನ್ಮದಿನದ ಸಂಭ್ರಮ. ಅವರ ಬರ್ತ್​ಡೇ ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಕೆಜಿಎಫ್ ಚಿತ್ರದ ಮೂಲಕ ಅಪಾರ ಖ್ಯಾತಿ ಪಡೆದ ಪ್ರಶಾಂತ್ ನೀಲ್, ಪ್ರಪಂಚವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. 

ಪ್ರಶಾಂತ್​ ನೀಲ್​ ಅವರ ಹುಟ್ಟುಹಬ್ಬದ ಸಲುವಾಗಿ 'ಕೆಜಿಎಫ್​: ಚಾಪ್ಟರ್​ 2' ಸಿನಿಮಾ ತಂಡದವರು ಒಂದೆಡೆ ಸೇರಿದ್ದಾರೆ. ಪ್ರಭಾಸ್​, ಯಶ್​, ವಿಜಯ್​ ಕಿರಗಂದೂರು ಮುಂತಾದವರು ಸೇರಿಕೊಂಡು ಪ್ರಶಾಂತ್​ ನೀಲ್​ ಅವರ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದಾರೆ. ಈ​ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.     

ಪ್ರಭಾಸ್ ಕೂಡ ಪ್ರಶಾಂತ್ ನೀಲ್ ಹುಟ್ಟು ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಪ್ರಭಾಸ್ ಬೆಂಗಳೂರಿಗೆ ಬಂದಿದ್ದರು. ವಿಶೇಷವಾದ ಕೇಕ್‌ಗಳನ್ನು ಕಟ್ ಮಾಡಿ ಸಂಭ್ರಮಿಸಲಾಗಿದೆ. ಕೆಜಿಎಫ್ ಮತ್ತು ಹೊಂಬಾಳೆ ಫಿಲ್ಮ್ಸ್ ಚಿಹ್ನೆಯಲ್ಲಿ ವಿ‍ಷೇಶವಾದ ಕೇಕ್ ತಯಾರಿಸಲಾಗಿತ್ತು. 

ವಿಶೇಷವಾಗಿ ಅವರ ಹುಟ್ಟುಹಬ್ಬಕ್ಕಾಗಿಯೇ ಹೈದರಾಬಾದ್​ನಿಂದ ನೇರವಾಗಿ ಬೆಂಗಳೂರಿಗೆ ಬಂದಿರುವ ನಟ ಪ್ರಭಾಸ್​ ನೆಚ್ಚಿನ ನಿರ್ದೇಶಕನಿಗೆ ವಿಶ್​ ಮಾಡಿದರು. ( video credit : daiiy culture )