Prasant Neel : ಅಭಿಮಾನಿಗಳ ತಲೆಗೆ ಹುಳಬಿಟ್ಟ ಪ್ರಶಾಂತ್ ನೀಲ್..! ಮೂರು ಪೋಸ್ಟರ್ ಜೊತೆಗೆ ಬಿಟ್ಟಿದ್ದೇಕೆ ಗೊತ್ತಾ..?

By Infoflick Correspondent

Updated:Monday, May 23, 2022, 00:33[IST]

Prasant Neel :   ಅಭಿಮಾನಿಗಳ ತಲೆಗೆ ಹುಳಬಿಟ್ಟ ಪ್ರಶಾಂತ್ ನೀಲ್..! ಮೂರು ಪೋಸ್ಟರ್ ಜೊತೆಗೆ ಬಿಟ್ಟಿದ್ದೇಕೆ ಗೊತ್ತಾ..?

ಕನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಜಿಎಫ್ ಒಂದು ಕೆಜಿಎಫ್ ಭಾಗ-2 ಸಿನಿಮಾ ಮೂಲಕ ಪ್ರಪಂಚದಾದ್ಯಂತ ಪ್ರಶಾಂತ್ ನೀಲ್ ಅವರ ಹೊಸ ಹವಾ ಸೃಷ್ಟಿ ಆಗಿದೆ. ಈಗ ಸ್ಟಾರ್ ನಟ ಹಾಗೂ ನಿರ್ಮಾಪಕರು ಪ್ರಶಾಂತ್ ನೀಲ್ ಅವರ ಕಾಲ್ ಶೀಟ್ ಗೆ ಕಾಯುತ್ತಿದ್ದಾರೆ.  ಹೌದು ಸ್ಟಾರ್ ನಿರ್ದೇಶಕರ ಪಟ್ಟಿಯಲ್ಲಿ ಈಗ ಪ್ರಶಾಂತ್ ನೀಲ್ ಕಾಣಿಸಿಕೊಳ್ಳುತ್ತಿದ್ದು ಕನ್ನಡ ಸಿನಿಮಾರಂಗವನ್ನು ತುಂಬಾ ದೊಡ್ಡದಾಗಿ ಇಡೀ ಪ್ರಪಂಚಕ್ಕೆನೆ ಪರಿಚಯ ಮಾಡಿಸುತ್ತಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಹೌದು ಪ್ರಶಾಂತ್ ನೀಲ್ ಅವರ ಮುಂಬರುವ ಸಿನಿಮಾಗಳು ಯಾವ ರೀತಿ ಇರುತ್ತವೆ ಎಂಬುದಾಗಿ ಯಾರೂ ಕೂಡ ಹೇಳಲಿಕ್ಕಾಗದು.   

ನಿರೀಕ್ಷೆ ತುಂಬಾನೇ ಹೆಚ್ಚಾಗಿದೆ, ಅವರ ಆಲೋಚನೆಗಳು ತುಂಬಾ ದೊಡ್ಡ ಮಟ್ಟದಲ್ಲಿ ಇರುತ್ತದೆ. ಪ್ರಶಾಂತ್ ನೀಲ್ ಕೆಜಿಎಫ್ ಭಾಗ-1 ಕೆಜಿಎಫ್ ಭಾಗ-2 ಮತ್ತು ಉಗ್ರಂ ಸಿನಿಮಾ ಮಾಡಿ ಕೇವಲ ಮೂರೇ ಮೂರು ಸಿನಿಮಾದಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕೆಜಿಎಫ್ ಯಶಸ್ಸಿನಲ್ಲಿ ತೇಲಾಡುತ್ತಿರುವ ಪ್ರಶಾಂತ್ ಸುಮ್ಮನೆ ಕುಳಿತಿಲ್ಲ, ಬದಲಾಗಿ ಪ್ರಭಾಸ್ ಜೊತೆ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತು ಎನ್ಟಿಆರ್ ಅವರಿಗೂ ಕೂಡ ಸಿನಿಮಾ ಮಾಡುವ ಸಿದ್ಧತೆ ನಡೆಸಿದ್ದು ಮೊನ್ನೆ ಎನ್ಟಿಆರ್31 ಎನ್ನುವ ಶೀರ್ಷಿಕೆ ನೀಡಿ ಎನ್ಟಿಆರ್ ಅಭಿಮಾನಿಗಳಿಗೆ ಸಖತ್ ಪೋಸ್ಟರ್ ಕೂಡ ನೀಡಿದ್ದಾರೆ. ಪ್ರಶಾಂತ್ ನೀಲ್ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಕೆಜಿಎಫ್ ಭಾಗ-2 ಸಲಾರ್ ಜೊತೆಗೆ ಎನ್ಟಿಆರ್ 31 ಪೋಸ್ಟರ್ ಜೊತೆಗೆ ಇದೀಗ ಶೇರ್ ಮಾಡಿಕೊಂಡು ಅಭಿಮಾನಿಗಳ ತಲೆಗೆ ದೊಡ್ಡ ಹುಳವನ್ನೆ ಬಿಟ್ಟಿದ್ದಾರೆ. ಯಶ್ , ಪ್ರಭಾಸ್  ಮತ್ತು  ಎನ್ಟಿಆರ್ ಸೇರಿಸಿ  ಹೊಸ ಚಿತ್ರ ನಿರ್ಮಾಣ ಮಾಡುವ ಆಲೋಚನೆ ಇದೆಯಾ ಎಂದು ಹೇಳಲಾಗುತ್ತಿದೆ. ಆ ರೀತಿ ಆದರೆ  ಭಾರತೀಯ ಚಿತ್ರರಂಗದಲ್ಲಿ  ಮತ್ತೂಂದು ಹೊಸ ಧಾಖಲೆ ನಿರ್ಮಾಣವಾಗುದರಲ್ಲಿ ಸಂದೇಹವಿಲ್ಲ 

ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಮತ್ತು ಪ್ರೇಕ್ಷಕರು ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾಗಳ ಚಿತ್ರಕಥೆ ಒಂದಕ್ಕೊಂದು ಲಿಂಕ್ ಇರಬಹುದಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಕೆಜಿಎಫ್ ಭಾಗ-3 ಹಾಗೂ ಸಲಾರ್ ಒಂದೇ ಸಿನಿಮಾ ಎಂದು ಅಭಿಮಾನಿಗಳು ಊಹೆ ಮಾಡುತ್ತಿದ್ದು, ಅತ್ತ ಪ್ರಶಾಂತ್ ನೀಲ್ ಸಿನಿಮಾದ ಮೇಕಿಂಗ್ ಗೆ ಎಲ್ಲರೂ ಫಿದಾ ಆಗಿದ್ದಾರೆ ಎನ್ನಬಹುದು. ಇವರ ಮುಂದಿನ ಚಿತ್ರಗಳು ಯಾವ ರೀತಿ ಒಂದೊಂದು ಕನೆಕ್ಟ್ ಆಗಿರುತ್ತದೆ ಎಂಬುದಾಗಿ ಕಾದು ನೋಡಬೇಕು. ಹೌದು ಎಲ್ಲಾ ಪ್ರಶ್ನೆಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಯಾವ ರೀತಿ ಸಿನಿಮಾ ಮಾಡುತ್ತಾರೆ ಎಂದು ಕಾದುನೋಡಬೇಕು ಧನ್ಯವಾದಗಳು..