ಕೆಜಿಎಫ್ 2 ಬೆನ್ನಲ್ಲೇ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಬಿಗ್ ಅಪ್ಡೇಟ್..! ಇವರೇ ನೋಡಿ ಹೀರೋ

By Infoflick Correspondent

Updated:Thursday, April 21, 2022, 08:29[IST]

ಕೆಜಿಎಫ್ 2 ಬೆನ್ನಲ್ಲೇ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಬಿಗ್ ಅಪ್ಡೇಟ್..! ಇವರೇ ನೋಡಿ ಹೀರೋ

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಭಾಗ-1 ಕೆಜಿಎಫ್ ಬಂದಮೇಲೆ ಈ ಸಿನಿಮಾದ ಹೈಪ್ ಕ್ರಿಯೇಟ್ ಆಗಿತ್ತು. ಅದರ ಯಶಸ್ಸನ್ನು ನೋಡಿದ ಬಳಿಕ ಕೆಜಿಎಫ್ ಭಾಗ ಒಂದರ ಮುಂದಿನ ಭಾಗವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಭಾಗ-2 ಸಿನಿಮಾ ಮಾಡಿದ್ದಾರೆ. ಹಾಗೆ ಇಂಡಿಯಾದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಈಗ ಪ್ರಶಾಂತ್ ನೀಲ್ ಅವರು ಸೇರಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ಅವರೇ ಒಂದು ಬ್ರಾಂಡ್ ರೀತಿ ನಿರ್ದೇಶನ ಮಾಡಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಕೆಜಿಎಫ್ 2 ಸಿನಿಮಾ ಇದೀಗ ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಮಾಡುತ್ತಿದೆ.

ಒಬ್ಬ ನಿರ್ದೇಶಕ ಯಾವ ರೀತಿ ಯೋಚನೆ ಮಾಡಿ, ಚಿತ್ರ ಪ್ರೇಕ್ಷಕರು ನಮ್ಮಿಂದ ಏನನ್ನೂ ಬಯಸುತ್ತಾರೆ, ಯಾವ ರೀತಿ ಕಥೆ ಬಯಸುತ್ತಾರೆ, ಯಾವ ರೀತಿ ಮೇಕಿಂಗ್ ಎಲಿವೇಶನ್ ಸ್ಟೋರಿ ಇಷ್ಟಪಡುತ್ತಾರೆ, ಹಾಗೆ ಕ್ಯಾರೆಕ್ಟರ್ ಗಳನ್ನು ಯಾವ ರೀತಿ ಇಷ್ಟ ಪಡುತ್ತಾರೆ ಎಂದು ಪ್ರಶಾಂತ್ ನೀಲ್ ಅವರು ಹೆಚ್ಚು ತಿಳಿದಿದ್ದಾರೆ. ಅದೇ ರೀತಿ ಕೆಜಿಎಫ್ ಭಾಗ-2 ಸಹ ಈಗ ಮೂಡಿಬಂದಿದೆ ಎಂದು ಹೇಳಬಹುದು. ಹೌದು ನಟ ಯಶ್ ಕೆಜಿಎಫ್ ಚಿತ್ರದಲ್ಲಿ ಅತ್ಯದ್ಭುತವಾಗಿ ಅಭಿನಯವನ್ನು ಮಾಡಿದ್ದಾರೆ, ಮೂಲೆಮೂಲೆಯಲ್ಲೂ ಇದೀಗ ಕೆಜಿಎಫ್ 2 ಹವಾ ಇದೆ ಎಂದು ಹೇಳಬಹುದು.

ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆಯೇ  ಇನ್ನೊಂದು ಪ್ರಾಜೆಕ್ಟನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.   

ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಬಿಜಿ ಇರುವ ಪ್ರಶಾಂತ್ ನೀಲ್ ಅವರು ಸಲಾರ್ ಮುಗಿಯುತ್ತಿದ್ದಂತೆ ಕನ್ನಡದ ಉಗ್ರಂ ಖ್ಯಾತಿಯ ನಟ ಶ್ರೀಮುರುಳಿ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎಂದು ಈಗ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಇದಾದ ಬಳಿಕವೇ ಏನಿದ್ದರೂ ಕೆಜಿಎಫ್ 3 ಅಥವಾ ಜೂನಿಯರ್ ಎನ್ಟಿಆರ್, ರಾಮಚರಣ್ ಜೊತೆ ಸಿನಿಮಾ ಮಾಡುವುದಂತೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳ ತಿಳಿಸಿ. ಪ್ರಶಾಂತ್ ನೀಲ್ ಅವರು ಯಾರಿಗೆ ಮೊದಲು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಕಮೆಂಟ್ ಮಾಡಿ...