ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರಿಂದ ಪುನೀತ್ ಅವರಿಗೆ ದೊರೆತ "ಆಹ್ವಾನ'" ನಂತರ ಆದದ್ದೇನು ?

By Infoflick Correspondent

Updated:Tuesday, April 19, 2022, 19:02[IST]

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರಿಂದ ಪುನೀತ್ ಅವರಿಗೆ ದೊರೆತ

ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಪ್ರಶಾಂತ್ ನೀಲ್ ನಿರ್ದೇಶನ ಮೆಚ್ಚಿ ಅವರಿಗೆ ಟಾಲಿವುಡ್, ಕಾಲಿವುಡ್ ಗಳಿಂದ ಹಲವಾರು ಅವಕಾಶಗಳು ಬರುತ್ತಿದೆ.‌ಚಂದನವನದಲ್ಲೂ ಅವರ ಬೇಡಿಕೆ ಅಪಾರವಾಗಿದೆ. 

ಉಗ್ರಂ ಮೂಲಕ ಸಂಪೂರ್ಣ ನಿರ್ದೇಶನಕ್ಕೆ ಹೆಜ್ಜೆ ಇಟ್ಟ ಪ್ರಶಾಂತ್ ನೀಲ್ ಕೆಜಿಎಫ್ ಮೂಲಕ ಅಖಾಡಕ್ಕೆ ಇಳಿದರು. ಉಗ್ರಂ ಮತ್ತು ಕೆಜಿಎಫ್ ಪಯಣದ ನಡುವೆ ಒಂದು ಘಟನೆ ನಡೆದಿದ್ದು ಅದೀಗ ಭಾರಿ ಸುದ್ದಿಯಲ್ಲಿದೆ. ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ಅವರು ಯಾರಿಗೂ ತಿಳಿಯದ ಹಲವಾರು ವಿಷಯಗಳನ್ನು ಹಂಚಿಕೊಂಡೊದ್ದಾರೆ. ಇಲ್ಲಿದೆ ನೋಡಿ    

ಯಶ್‌ಗಾಗಿ ಪ್ರಶಾಂತ್ ನೀಲ್ ಕೆಜಿಎಫ್ ಮಾಡುವುದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಅವರಿಗೆ ಸಿನಿಮಾ ಮಾಡಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ತಮ್ಮ ಮೊದಲ ನಿರ್ದೇಶನದ ಸಿನಿಮಾ ಉಗ್ರಂ ನಲ್ಲಿ ಫ್ಯಾಮಿಲಿ ಟಚ್ ಇರಬೇಕಿತ್ತು ಎಂದು ಹಲವಾರು ಜನ ಹೇಳಿದ ಕಾರಣ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಮಾಡಲು ಪ್ರಶಾಂತ್ ಮುಂದಾಗಿದ್ದರು. ಈ ಸಿನಿಮಾ ಇವರು ಅಪ್ಪುಗಾಗೇ ಮಾಡಬೇಕು ಎಂದು ಅಂದುಕೊಂಡು ಫ್ಯಾಮಿಲಿ ಮ್ಯಾನ್ ಆದ ಪುನೀತ್ ರಾಜಕುಮಾರ್ ಅವರಿಗೆ ಆಹ್ವಾನ(ಆವಾನ) ಎಂಬ ಸಿನಿಮಾ ಮಾಡಲು ಮುಂದಾಗಿದ್ದರು. ಇದಕ್ಕೆ ಒಪ್ಪಿಗೆಯೂ ದೊರೆತಿತ್ತು. 

ಸಿನಿಮಾ ಮಾಡಲು ಪುನೀತ್ ಅವರ ಜೊತೆ ಮಾತುಕತೆ ನಡೆಸಿದ್ದೆವು. ಅವರಿಗೂ ಕಥೆ ಮತ್ತು ಸಿನಿಮಾ ಟೈಟಲ್ ಇಷ್ಟವಾಗಿತ್ತು.  4 ತಿಂಗಳು ಅವರು ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರು. ಆ ನಡುವೆ ಕೆಜಿಎಫ್ ಶುರುವಾಯಿತು. ಕೆಜಿಎಫ್ ಮುಗಿಯಲಿ ನಂತರ ನಾವು ಈ ಸಿನಿಮಾ ಮಾಡೋಣ ಎಂದು ಅಪ್ಪು ಹೇಳಿದ್ದರು ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ.