ಅಪ್ಪು ಸಾವಿಗೆ ಪ್ರತಿರಾತ್ರಿ ಮಾಡುತ್ತಿದ್ದ ಆ ಕೆಲಸವೇ ಕಾರಣ..! ಪ್ರಶಾಂತ್ ಸಂಬರ್ಗಿ ಶಾಕಿಂಗ್ ಹೇಳಿಕೆ..!

By Infoflick Correspondent

Updated:Saturday, August 20, 2022, 09:48[IST]

ಅಪ್ಪು ಸಾವಿಗೆ ಪ್ರತಿರಾತ್ರಿ ಮಾಡುತ್ತಿದ್ದ ಆ ಕೆಲಸವೇ ಕಾರಣ..! ಪ್ರಶಾಂತ್ ಸಂಬರ್ಗಿ ಶಾಕಿಂಗ್ ಹೇಳಿಕೆ..!

ಕನ್ನಡ ನಾಡಿನ ಹೆಮ್ಮೆಯ ನಟ ಕರುನಾಡ ಕುವರ ಪ್ರೀತಿಯ ಅಪ್ಪು ಇಂದು ದೇವರಾಗಿದ್ದಾರೆ. ಕನ್ನಡ ಸಿನಿರಂಗದ ಖ್ಯಾತ ನಟರಾಗಿ, ಹಾಗೆ ಡಾನ್ಸರ್ ಆಗಿ, ನಿರ್ಮಾಪಕ ಆಗಿಯೂ ಸಹ ಹೆಚ್ಚು ಗುರುತಿಸಿಕೊಂಡವರು. ಅಪ್ಪು ಅವರು ಸಿನಿಮಾ ಹೊರತುಪಡಿಸಿ ಸಮಾಜಕ್ಕೆ ಅವರು ತುಂಬಾನೇ ದೊಡ್ಡ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ದಾನ ಮಾಡುತ್ತಾ ಎಲ್ಲಾ ವರ್ಗದಲ್ಲಿಯೂ ಸಹಾಯ ಹಸ್ತ ನೀಡಿದವರು. ಕಷ್ಟ ಎಂದ ತಕ್ಷಣ ದೊಡ್ಡವರು ಸಣ್ಣವರು ಎಂದು  ನೋಡದೆ ಅವರಲ್ಲಿ ಕಷ್ಟ ಇದೆ ಎಂದು ತಿಳಿದ ನಂತರ ಯಾರಿಗೂ ಗೊತ್ತಾಗದೆ ಹಾಗೆ ಅವರ ಕೈ ಮೂಲಕ ಸಹಾಯ ಮಾಡುತ್ತಿದ್ದ ದೇವತಾ ಮನುಷ್ಯ. ಇಂತಹ ಮನುಷ್ಯ ಇದೀಗ ನಮ್ಮ ಜೊತೆ ಇಲ್ಲ. ಅದು ಕೇವಲ ದೈಹಿಕವಾಗಿ ಮಾತ್ರ. ಅದು ವಿಷಾದನೀಯ ಎನ್ನಬಹುದು. 

ನಟ ಪುನೀತ್ ಅವರು ಎಲ್ಲರೂಟ್ಟಿಗೆ ಬಾರಿ ಸರಳತೆಯಿಂದ ಸ್ನೇಹದಿಂದ ಪ್ರೀತಿಯಿಂದಲೇ ಮಾತನಾಡಿಸುವುದಂತ ಮನಸ್ಸಿನವರು ಆಗಿದ್ದರು. ಆದರೆ ಇಂದು ಇವರು ನಮ್ಮ ಜೊತೆಗೆ ಇಲ್ಲ ಎನ್ನುವುದು ತುಂಬಾ ದುಃಖದ ವಿಷಯ. ಆದರೂ ಕೂಡ ಅಪ್ಪು ಸೂರ್ಯ ಚಂದ್ರ ಇರುವವರೆಗೂ ಪ್ರತಿಯೊಬ್ಬ ಅಭಿಮಾನಿ ಹೃದಯದಲ್ಲಿ ನೆಲೆಸಿರುತ್ತಾರೆ. ಈಗ ಅವರ ಸ್ನೇಹಿತರ ಬಳಗದ ಒಬ್ಬ ವ್ಯಕ್ತಿ ಅವರ ಸಾವಿನ ಬಗ್ಗೆ ಅವರಿಗೆ ಸಾವಿಗೆ ಮೂಲ ಕಾರಣ ಇದು ಇರಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಶಾಂತ್ ಸಂಬರ್ಗಿ ಸಮಾಜಿಕ ಕಾರ್ಯಕರ್ತ ಹಾಗೂ ಕನ್ನಡ ಸಿನಿಮಾರಂಗದಲ್ಲಿ ಕೆಲವರಿಗೆ ಪರಿಚಿತ ಇರುವ ವ್ಯಕ್ತಿ. ಜೊತೆಗೆ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದು ಗಮನ ಸೆಳೆದವರು ಇವರು. 

ಇತ್ತೀಚಿಗೆ ಪ್ರಶಾಂತ್ ಅವರು ಸಂದರ್ಶನ ನೀಡಿದರು. ತಮ್ಮ ಮತ್ತು ಪುನೀತ್ ಅವರ ಒಡನಾಟ ಹೇಗಿತ್ತು ಎಂದು ಕೆಲ ವಿಚರವನ್ನ ಬಿಚ್ಚಿಟ್ಟರು. ಸಿನಿಮಾ ಮಾಡುವ ವಿಚಾರದ ಬಗ್ಗೆ ಕೂಡ ಹೇಳಿಕೊಂಡರು. ಕೊನೆಯಲ್ಲಿ ಅಪ್ಪು ಅವರ ಸಾವಿನ ವಿಚಾರ ಕೇಳಿ ಇದ್ದಕ್ಕಿದ್ದಂತೆ ನನಗೆ ಶಾಕ್ ಆಯ್ತು, ಈಗಲೂ ಕೂಡ ಅದನ್ನು ಅರಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ, ಅಪ್ಪು ಅವರು ಕರೋನ ಬಂದಾಗಿನಿಂದ, ಲಾಕ್ಡೌನ್ ಆದಾಗಿನಿಂದ ಹೆಚ್ಚು ರಾತ್ರಿ ಸಮಯ ಎಂಟು ಗಂಟೆಯಿಂದ ಬೆಳಗಿನ ಜಾವ 3:00ಯವರೆಗೂ ಸಿನಿಮಾ ನೋಡುತ್ತಿದ್ದರು. ಬಳಿಕ ಆ ಸಿನಿಮಾ ಕುರಿತು ಅವರ ಸ್ನೇಹಿತರಿಗೆ ಸಿನಿಮಾ ಕಲಾವಿದರ ಬಗ್ಗೆ ಕಲಾವಿದರಿಗೆ ಫೋನ್ ಮಾಡಿ ವಿಚಾರವನ್ನು ಮುಟ್ಟಿಸುತ್ತಿದ್ದರು. ಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದರು. ಬೆಳಗಿನ ಜಾವ ಜಿಮ್ ಟ್ರೈನರ್ ಬಂದು ಪುನೀತ್ ಅವರನ್ನು ಕರೆದ ತಕ್ಷಣ ಅವರನ್ನು ಕಾಯಿಸುವುದು ಬೇಡ ಎಂದು ಹಾಗೆಯೇ ಹೋಗುತ್ತಿದ್ದರು ಎಂದಿದ್ದಾರೆ.

ಇದು ಕರೋನ ಮುಗಿದ ಮೇಲು ಸಹ ಲಾಕ್ಡೌನ್ ಮುಗಿದ ನಂತರವೂ ಅವರಿಗೆ ಅಭ್ಯಾಸವಾಗಿ ಹೋಗಿತ್ತು. ಅವರು ನಿದ್ದೆಯನ್ನು ಹೆಚ್ಚು ಮಾಡುತ್ತಲೇ ಇರಲಿಲ್ಲ. ಕೇವಲ ನಾಲ್ಕು ಗಂಟೆ ನಿದ್ದೆ ಮಾಡುತ್ತಿದ್ದರು. ಇದರಿಂದಾಗಿಯೇ ಅಷ್ಟು ಫಿಟ್ ಇದ್ದ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದೆಸುತ್ತದೆ ಎಂದು  ಪ್ರಶಾಂತ್ ಸಂಬರ್ಗಿ ಈ ವಿಷಯ ಹಂಚಿಕೊಂಡಿದ್ದಾರೆ. ಈ ಮಾತುಗಳನ್ನು ಕೇಳಿ ಕೆಲವರು ಇವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿನಗೆ ತಲೆ ಸರಿ ಇದೆಯಾ ಎಂದೆಲ್ಲ ಕಾಮೆಂಟ್ ಮಾಡಿ ಇವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇನ್ನು ಕೆಲವರು ಪ್ರಶಾಂತ್ ಅವರ ಮಾತಿಗೆ, ಇದ್ದರೂ ಇರಬಹುದು ಬಿಡಿ ಎಂದು ತಲೆ ಆಡಿಸಿದ್ದಾರೆ. ನೀವು ಕೂಡ ಈ ಮಾಹಿತಿ ನೋಡಿದಿರಲ್ಲ, ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಪ್ರಶಾಂತ್ ಅವರು ಅಪ್ಪು ಸಾವಿನ ಬಗ್ಗೆ ಕೊಟ್ಟ ಕಾರಣದ ಬಗ್ಗೆ ನಿಮ್ಮ ಅನಿಸಿಕೆ ಏನು, ನಮಗೆ ತಿಳಿಸಿ, ಧನ್ಯವಾದಗಳು.. ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ  ಮತ್ತು ಶೇರ್ ಮಾಡಿ ಹಾಗೆ ನಿಮ್ಮ ಕಾಮೆಂಟ್ ನಮಗೆ ತಿಳಿಸಿ.