Sonu Srinivasa Gowda : ಸೋನು ಶ್ರೀನಿವಾಸ್ ಗೌಡ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು..?

By Infoflick Correspondent

Updated:Thursday, August 18, 2022, 18:15[IST]

Sonu Srinivasa Gowda : ಸೋನು ಶ್ರೀನಿವಾಸ್ ಗೌಡ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು..?

ನೇರವಾದ ಮಾತು, ಕೋಪ, ಆರೋಪಗಳಿಂದಲೇ ಫೇಮಸ್ ಆದವರು ಪ್ರಶಾಂತ್ ಸಂಬರಗಿ. ಬಿಗ್ ಬಾಸ್ ಮನೆಯಲ್ಲಿ ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಲೇ ಇದ್ದರು. ಅನ್ಯಾಯ ವಿದ್ದಲ್ಲಿ ಧ್ವನಿ ಎತ್ತಿ ಮಾತನಾಡುವ, ಸುಳ್ಳು ಕಂಡಾಗ  ತಿರಸ್ಕರಿಸುವ. ತಮ್ಮ ತಪ್ಪಿದ್ದಾಗ ಕ್ಷಮೆ ಕೇಳುವ ಗುಣಗಳೀಂದ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಯಾರೇ ಆಗಲೀ ಅವರ ಬಗ್ಗೆ ಹೆದರದೇ ಇರುವ ವಿಚಾರವನ್ನು ಮನ ಬಿಚ್ಚಿ ಮಾತನಾಡುವ ವ್ಯಕ್ತಿ. ತಪ್ಪಿದ್ದರೆ, ತಪ್ಪು ಎಂದು ಸರಿ ಎಂದರೆ ಸರಿ ಎಂದು ಮಾತನಾಡುತ್ತಾರೆ. 

ಪ್ರಶಾಂತ್ ಸಂಬರಗಿ ಅವರು ತಮ್ಮ ಮಾತುಗಳಿಂದಲೇ, ವಾದಗಳಿಂದಲೇ ಹೆಚ್ಚು ಫೇಮಸ್ ಆದವರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ, ದೊಡ್ಮನೆಯಲ್ಲಿದ್ದವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು. ಇದೀಗ ಪ್ರಶಾಂತ್ ಸಂಬರಗಿ ಅವರು, ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ಮಾತನಾಡಿದ್ದಾರೆ. ಸೋನು ಬಗ್ಗೆ ಪ್ರಶಾಂತ್ ಅವರು ಏನ್ ಹೇಳಿದ್ದಾರೆ ಗೊತ್ತಾ..? 

ಈಗಾಗಲೇ ಸೋನು ಶ್ರೀನಿವಾಸ್ ಗೌಡ ಅವರು ಬಹಳ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇದ್ದಾರೆ. ಅನ್ ಮೆಚ್ಯುರ್ಡ್ ಮಾತುಗಳು, ಆಲೋಚನೆಯೇ ಇಲ್ಲದಂತೆ ಮನ ಬಂದಂತೆ ನಡೆದುಕೊಳ್ಳುವ ರೀತಿಯಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯಲ್ಲಿದ್ದಾರೆ. ಇದೀಗ ಪ್ರಶಾಂತ್ ಸಂಬರಗಿ ಅವರು ಸೋನು ಗೌಡ ಅವರ ಬಗ್ಗೆ ಹೇಳಿದ್ದಾರೆ. ಸೋನು ಗೌಡ ಅಂತಹವರೇ ವಾಹಿನಿಗೂ ಬೇಕಾಗಿರುವುದು. ಅವರಿಂದಲೇ ಜನ ಮಾತನಾಡುತ್ತಾರೆ. ಹಾಗಾಗಿ ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯದ ಮೇಲೆ ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರಾ..? ಇಲ್ಲವೇ ಹೊರಗೆ ಹೋಗುತ್ತಾ ಎಂಬುದನ್ನು ಕಾದು ನೋಡಬೇಕಿದೆ ಅಂತ ಪ್ರಶಾಂತ್ ಸಂಬರಗಿ ಅವರು ಹೇಳಿದ್ದಾರೆ.