ಸಿನಿಪ್ರಿಯರಿಗೆ ಸಿಹಿ ಸುದ್ದಿ ಜೂ ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಜೊಡಿಯ ಸಿನಿಮಾ ಫಸ್ಟ್ ಲುಕ್ ರಿವಿಲ್

By Infoflick Correspondent

Updated:Saturday, May 21, 2022, 10:06[IST]

ಸಿನಿಪ್ರಿಯರಿಗೆ ಸಿಹಿ ಸುದ್ದಿ ಜೂ ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಜೊಡಿಯ ಸಿನಿಮಾ ಫಸ್ಟ್ ಲುಕ್ ರಿವಿಲ್

ಮೇ 20 ಜೂ ಎನ್ ಟಿ ಆರ್ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೂ.ಎನ್ ಟಿ ಆರ್ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳಂತು ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟನ ಫೋಟೋ, ವಿಡಿಯೋ ಶೇರ್ ಮಾಡುವ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.   

ಹುಟ್ಟುಹಬ್ಬದ ವಿಶೇಷವಾಗಿ ಜೂ ಎನ್ ಟಿ ಆರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಜೂ ಎನ್ ಟಿ ಆರ್ ನಟನೆಯ 31ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಜೂ ಎನ್ ಟಿ ಆರ್ 31ನೇ ಸಿನಿಮಾ ಮೂಡಿಬರುತ್ತಿದೆ.  

ನಿನ್ನೆಯಷ್ಟೇ ಎನ್ ಟಿಆರ್ 30 ಸಿನಿಮಾದ ಬಗ್ಗೆ ಘೋಷಣೆಯಾಗಿದ್ದು, ಇಂದು ಪ್ರಶಾಂತ್ ನೀಲ್ ನಿರ್ದೇಶನದ ಎನ್ ಟಿಆರ್ 31 ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜ್ಯೂ.ಎನ್ ಟಿಆರ್ ಹಾಗೂ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಶಾಂತ್ ನೀಲ್ ಜೊತೆಗೆ ಜೂ.ಎನ್ ಟಿಆರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಕನ್ ಫರ್ಮ್ ಆಗಿದ್ದು, ಇಂದು ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ಜೊತೆಗೆ ಪವರ್ ಫುಲ್ ಕ್ಯಾಪ್ಷನ್ ಕೂಡಾ ನೀಡಲಾಗಿದೆ. 

ನಿರ್ದೇಶಕ ಪ್ರಶಾಂತ್ ನೀಲ್ ಫಸ್ಟ್ ಲುಕ್ ಶೇರ್ ಮಾಡಿ, ರಕ್ತದಲ್ಲಿ ತೋಯ್ದ ಮಣ್ಣು ಮಾತ್ರ ನೆನಪಾಗುವುದು. ಅವನ ಮಣ್ಮು, ಅವನ ಆಳ್ವಿಕೆ, ಖಂಡವಾಗಿ ಅವನ ರಕ್ತವಲ್ಲ ಎಂದು ಕ್ಯಾಪ್ಷನ್ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟರ್ ರೀತಿಯಲ್ಲೇ ಜ್ಯೂ.ಎನ್ ಟಿಆರ್ 31 ಚಿತ್ರದ ಕಪ್ಪು ಬಿಳುಪು ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದ್ದು, ರಗಡ್ ಲುಕ್ ನ ಜ್ಯೂ.ಎನ್ ಟಿಆರ್ 31 ಸಿನಿಮಾದ ಪೋಸ್ಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಬ್ಬರಿಸಿದ್ದಾರೆ. 

ಎನ್ ಟಿಆರ್ 31 ಚಿತ್ರವನ್ನು ಮೈತ್ರಿ ಮೂವಿ ಹಾಗೂ ಎನ್ ಟಿಆರ್ ಆರ್ಟ್ಸ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಎನ್ ಟಿಆರ್ 30 ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಪ್ರಾರಂಭವಾಗಲಿದ್ದು, ಎನ್ ಟಿಆರ್ 31 ಚಿತ್ರದ ಚಿತ್ರೀಕರಣ 2022ರ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.