KGF : ಪ್ರಶಾಂತ್ ನೀಲ್ ಅಮ್ಮ ಸಿನಿಮಾ ಮಹೂರ್ತ ವೇಳೆ ಕೊಟ್ಟ 100 ರೂ ಪಾಯಿಯನ್ನ ಪ್ರಶಾಂತ್ ಮಾಡಿದ್ದೇನು..?

By Infoflick Correspondent

Updated:Monday, May 9, 2022, 10:59[IST]

KGF : ಪ್ರಶಾಂತ್ ನೀಲ್ ಅಮ್ಮ ಸಿನಿಮಾ ಮಹೂರ್ತ ವೇಳೆ ಕೊಟ್ಟ 100 ರೂ ಪಾಯಿಯನ್ನ ಪ್ರಶಾಂತ್ ಮಾಡಿದ್ದೇನು..?

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ-2 ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ಉನ್ನತ ಸ್ಥಾನದಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೆಳೆದು ಬಂದ ಪ್ರಶಾಂತ್ ಅವರು ಮಾಡಿದ್ದು ಕೇವಲ 3 ಸಿನಿಮಾ. ಇದೀಗ ಕೆಜಿಎಫ್ ಭಾಗ-2 ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಜಿಎಫ್ ಭಾಗ-2 ನೋಡಿದ ಪ್ರೇಕ್ಷಕರು ಹುಚ್ಚರಂತೆ ಥಿಯೇಟರ್ನಲ್ಲಿ ಕುಣಿದು ನಿರ್ದೇಶನಕ್ಕೆ ಸೈ ಎಂದಿದ್ದಾರೆ. ಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಥೆಗೆ ಮಾಡಿರುವ ನಿರ್ದೇಶನಕ್ಕೆ ಎಲಿವೇಶನ್ ಎಲ್ಲವನ್ನೂ ನೋಡಿ ಭಾರತ ದೇಶದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ...

ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅವರ ತಾಯಿ ಮೇಲೆ ತುಂಬಾನೇ ಗೌರವ ಮತ್ತು ಪ್ರೀತಿ. ಪ್ರಶಾಂತ್ ನೀಲ್ ಅವರ ಮೇಲೆಯೂ ಕೂಡ ಅವರ ತಾಯಿಗೆ ಹೆಚ್ಚು ವಾತ್ಸಲ್ಯ ವಂತೆ. ಪ್ರಶಾಂತ್ ನೀಲ್ ಅವರು ತಾಯಿಯನ್ನೇ  ದೇವರು ಎಂದು ನಂಬಿದ್ದಾರೆ.  ಪ್ರಶಾಂತ್ ಅವರ ಜೊತೆ ಹೆಚ್ಚು ಅವರ ತಾಯಿ ನಿಂತಿದ್ದಾರೆ ಎನ್ನಲಾಗಿದೆ. ಹಾಗೆಯೇ ಉಗ್ರಂ ಆಗುವುದಕ್ಕೂ ಪ್ರಶಾಂತ್ ನೀಲ್ ಅವರ ತಾಯಿಯೇ ಕಾರಣ ಎಂದು ತಿಳಿದುಬಂದಿದೆ. ಉಗ್ರಂ ಬರುವ ವೇಳೆ ಪ್ರಶಾಂತ್ ನೀಲ್ ಅವರು ಸುಮಾರು 8ರಿಂದ 10 ಕೋಟಿ ಹಣವನ್ನು ಲಾಸ್ ಮಾಡಿಕೊಂಡಿದ್ದು, ಕೆಜಿಎಫ್ ಚಿತ್ರದ ವಿಲನ್ ಪುನೀತ್ ರುದ್ರನಾಗ ಅವರು ಈ ರೀತಿ ಹೇಳಿದ್ದಾರೆ..ಹಾಗೆ ಉಗ್ರಂ ಒಂದು ಕಡೆ ಓಡುತ್ತಿದ್ದರೆ ಇನ್ನೊಂದು ಕಡೆ ಹೆಚ್ಡಿ ಪ್ರಿಂಟ್ ಬಿಡುಗಡೆಯಾಗಿತ್ತು. ಅದು ಪ್ರಶಾಂತ್ ಅವರನ್ನು ತುಂಬಾನೇ ನೋವಿಗೆ ಒಳಗಾಗುವಂತೆ ಮಾಡಿತ್ತು. ಆಗ ಅವರ ಜೊತೆ ನಿಂತಿದ್ದು ಅವರ ತಾಯಿಯೇ ಎಂದಿದ್ದಾರೆ.

ಹೀಗೆ ಎಲ್ಲದರಲ್ಲಿಯೂ ಜೊತೆ ನಿಂತಿರುವ ಪ್ರಶಾಂತ್ ನೀಲ್ ತಾಯಿಯವರು ಕೆಜಿಎಫ್ ಸಿನಿಮಾ ಮೂರ್ತದ ವೇಳೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ ವೇಳೆ 100 ರೂಪಾಯಿ ಮಗನ ಕೈಯಲ್ಲಿ ಕೊಟ್ಟು ಆರತಿ ತಟ್ಟೆಗೆ ಹಾಕುವ ಎಂದರಂತೆ. ಆಗ ಪ್ರಶಾಂತ್ ನೀಲ್ ಅವರು ನೂರು ರೂಪಾಯಿಯನ್ನು ತೆಗೆದುಕೊಂಡು ಜೇಬಿಗಿಳಿಸಿ ಇದು ಬೇರೆ ಕೆಲಸಕ್ಕೆ ಬರುತ್ತದೆ ಎನ್ನುವಷ್ಟು ಕೆಲಸದ ಮೇಲೆ ಶ್ರದ್ಧೆ ನಂಬಿಕೆ ಅವರಿಗಿದೆ ಎಂದರು. ಹಾಗೆ ಇದ್ಯಾಕೆ ಸುಮ್ಮನೆ ವೇಸ್ಟ್ ಆಗುತ್ತದೆ 100 ರೂಪಾಯಿ ಬೇರೆ ಕೆಲಸಕ್ಕೆ ಬರುತ್ತದೆ ಎನ್ನುವ ಮಟ್ಟದಲ್ಲಿ ಅಲೋಚನೆ ಮಾಡುತ್ತಾರಂತೆ.ಹೌದು ಪ್ರಶಾಂತ್ ನೀಲ್ ಅವರು ಗೆದ್ದಿದ್ದಾರೆ, ಇನ್ನೂ ಗೆಲ್ಲುತ್ತಾರೆ ಎಂದ ಈ ನಟನ ಮಾಹಿತಿಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...