Prem : ನಾನು ಚಪ್ಪಲಿ ಅಂಗಡಿಲಿ ಕೆಲಸ ಮಾಡಿದ್ದೆ ಎಂದ ಪ್ರೇಮ್..! ಹಳೆ ಕಥೆ ನೆನೆದು ಭಾವುಕ..!

By Infoflick Correspondent

Updated:Tuesday, August 30, 2022, 14:46[IST]

Prem : ನಾನು ಚಪ್ಪಲಿ ಅಂಗಡಿಲಿ ಕೆಲಸ ಮಾಡಿದ್ದೆ ಎಂದ ಪ್ರೇಮ್..! ಹಳೆ ಕಥೆ ನೆನೆದು ಭಾವುಕ..!

ಹೌದು ಬಂಧುಗಳೇ ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಪರಿಚಯ ಇಲ್ಲ ಹೇಳಿ, ಅವರದ್ದೇ ಆದ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಪ್ರೇಮ್ ಅವರು ಗಿಟ್ಟಿಸಿಕೊಂಡಿದ್ದಾರೆ. ಹೌದು ಪ್ರೇಮ್ ಅವರ ಚಾರ್ಮಿನಾರ್ ಸಿನಿಮಾ ಇಂದಿಗೂ ಸಹ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗೇನೇ ಚಾರ್ಮಿನಾರ್ ಚಿತ್ರದಲ್ಲಿ ಅವರು ಅಭಿನಯಿಸಿದಂತ ಅಭಿನಯ ನಿಜಕ್ಕೂ ಅದ್ಭುತ. ಚೌಕ ಸಿನಿಮಾದಲ್ಲಿ ಕೂಡ ನಟ ಪ್ರೇಮ್ ಅವರು ಅತ್ಯದ್ಭುತವಾಗಿ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಹೀಗೆ ಒಂದರ ಮೇಲೊಂದರಂತೆ ಹಿಟ್ ಚಿತ್ರದಲ್ಲಿ ಅಭಿನಯ ಮಾಡಿರುವ ಲವ್ಲಿ ಸ್ಟಾರ್ ಪ್ರೇಮ್ ಅವರು ಇದೀಗ ಶ್ವೇತಾ ಚಂಗಪ್ಪ ಅವರ ನಿರೂಪಣೆಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಜೋಡಿ ನಂಬರ್ ಒನ್ ವೇದಿಕೆಯಲ್ಲಿ ಜಜ್ಜಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ನಟ ಪ್ರೇಮ್ ಅವರು ತುಂಬಾ ಸರಳ ವ್ಯಕ್ತಿ. ನೋಡಲು ಸ್ಪುರದ್ರೂಪಿ ಸುಂದರ. ಖ್ಯಾತ ನಟ ಆಗಿ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಒಂದು ಸಂದರ್ಶನದಲ್ಲಿ ಅವರು ಅವರ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಹೌದು ಲವ್ಲಿ ಸ್ಟಾರ್ ಪ್ರೇಮ್ ಅವರು ಹೇಳುವ ಹಾಗೆ, ನನಗೆ ಮೂರು ಜನ ತಂಗಿಯರು, ಅಪ್ಪ ಅಮ್ಮ ಎಲ್ಲರೂ ಕೂಡ ದುಡಿಯುತ್ತಿದ್ದೆವು. ನಮ್ಮದು ಒಂದು ಮಧ್ಯಮ ವರ್ಗದ ಕುಟುಂಬ. ಏನೇ ಮಾಡಿದರು ಎಷ್ಟೇ ದುಡಿದರು ಸಹ ಹಣ ಸಾಕಾಗುತ್ತಿರಲಿಲ್ಲ. ತುಂಬಾ ಕಷ್ಟದ ಜೀವನವೇ ನಮ್ಮದಾಗಿತ್ತು. ಅಂದಿನ ಕಾಲದಲ್ಲಿ ನಾನು ಸ್ಕೂಲ್ ರಜಾ ಸಿಕ್ಕಾಗಲೆಲ್ಲಾ ಕೆಲಸ ಹುಡುಕಿಕೊಂಡು ಹೋಗುತ್ತಿದ್ದೇ. ಕಬ್ಬನ್ ಪೇಟೆ, ಎವಿನ್ಯೂ ರಸ್ತೆಗಳಲ್ಲಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿದ್ದೇನೆ. ರೇಷನ್ ಅಂಗಡಿಯಲ್ಲಿ ಕೆಲಸ ಮಾಡಿದ್ದೇನೆ.

ಜೊತೆಗೆ ಕೂಲ್ ಡ್ರಿಂಕ್ಸ್ ಡಬ್ಬಿಗಳನ್ನು ಹೊತ್ತುಕೊಂಡು ಹೋಗುವಾಗ ಎಷ್ಟೋ ಬಾರಿ ನನ್ನ ಭುಜ ಕೆತ್ತಿ ಹೋಗಿದೆ ಆದರೂ ಕೂಡ ಅಷ್ಟೆಲ್ಲ ಕಷ್ಟಪಟ್ಟು ಅಂದಿನ ದಿನಕ್ಕೆ ಏಳು ರಿಂದ ಎಂಟು ಲಕ್ಷ ಸಾಲ ಮಾಡಿದ್ದೆ, ಕಾರಣ ಮನೆಯ ಜವಾಬ್ದಾರಿಗಾಗಿ ಎಂದು ಪ್ರೇಮ್ ಅವರು ಹೇಳಿದ್ದಾರೆ. ತದನಂತರದಲ್ಲಿ ಸಿನಿಮಾ ಮಾಡಿದ್ದು ಪ್ರತಿ ಮನೆಗೂ ನಾನು ಮಾಡಿದ ಸಾಲವನ್ನು ರಿಸರ್ವ್ ಬ್ಯಾಂಕ್ ಹೊಸ ನೋಟಿನಲ್ಲಿ ಒಂದು ಬಾಕ್ಸ್ ರೀತಿ ಮಾಡಿ ಅದರ ಮೇಲೆ ಅವರ ಹೆಸರು ಬರೆದು ಸಾಲ ತೀರಿಸಿದ್ದೇನೆ ಎಂದರು. ಹಾಗೆ ಸಿನಿಮಾ ತುಂಬಾನೇ ಕೊಟ್ಟಿದೆ. ಇದೀಗ ಎಂಥಹ ಕಥೆಗಳು ಬಂದರೆ ಸಿನಿಮಾ ಮಾಡುವುದಾಗಿ ಲವ್ಲಿ ಸ್ಟಾರ್ ಪ್ರೇಮ್ ಅವರು ಹೇಳಿದರು ಗೊತ್ತಾ..? ಇಲ್ಲಿರುವ ವಿಡಿಯೋ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..