Prema : ಬಹಳ ವರ್ಷಗಳ ಬಳಿಕ ತನ್ಮ ಲವರ್ ಬಗ್ಗೆ ಹೇಳಿದ ಖ್ಯಾತ ನಟಿ ಪ್ರೇಮಾ..! ಅವರಾರು ಗೊತ್ತಾ..?

By Infoflick Correspondent

Updated:Friday, July 22, 2022, 21:57[IST]

Prema : ಬಹಳ ವರ್ಷಗಳ ಬಳಿಕ ತನ್ಮ ಲವರ್ ಬಗ್ಗೆ ಹೇಳಿದ ಖ್ಯಾತ ನಟಿ ಪ್ರೇಮಾ..! ಅವರಾರು ಗೊತ್ತಾ..?

000 ಇಸ್ವಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ಪ್ರೇಮ ಅವರು ಖ್ಯಾತ ನಟಿಯಾಗಿ ಮೆರೆದವರು. ಕೊಡಗು ಜಿಲ್ಲೆಯಲ್ಲಿ ಹುಟ್ಟಿದ ನಟಿ ಪ್ರೇಮ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಯಶಸ್ವಿ ನಟಿಯಾಗಿ ಹೊರಹೊಮ್ಮಿದವರು. ಡಾಕ್ಟರ್ ವಿಷ್ಣುವರ್ಧನ್ ಅವರೊಟ್ಟಿಗೆನ ಸಿನಿಮಾಗಳು ಇಂದಿಗೂ ಕೂಡ ಪ್ರೇಮ ಅವರ ನಟನೆ ಬಗ್ಗೆ ಹೆಚ್ಚು ಸಾರುತ್ತವೆ. ಹೌದು ಕನಸುಗಾರ ಸಿನಿಮಾದಲ್ಲಿ ಪ್ರೇಮಾ ಅಭಿನಯವ ಕಂಡು ಕನ್ನಡಿಗರು ಅಕ್ಷರ ಸಹ ಫಿದಾ ಆಗಿದ್ದರು ಎನ್ನಬಹುದು. ಇವತ್ತಿಗೂ ಸಹ ಯಜಮಾನ ಚಿತ್ರ ಬಂದರೆ ಟಿವಿಯಲ್ಲಿ ಎಲ್ಲರೂ ಕೂಡ ಇಷ್ಟದಿಂದಲೇ ನೋಡುತ್ತಾರೆ, ಅಷ್ಟರ ಮಟ್ಟಕ್ಕೆ ಪ್ರೇಮಾ ಅಭಿನಯ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆ ಅವರ ಅಭಿನಯವನ್ನು ಕಂಡು ಎಲ್ಲರೂ ಕೂಡ ಮೆಚ್ಚಿಕೊಳ್ಳುತ್ತಿದ್ದರು. 

ಪ್ರೇಮಾ ಅವರು ಇದ್ದಕ್ಕಿದ್ದಂತೆ ಹೆಚ್ಚು ಉನ್ನತ ಸ್ಥಾನದಲ್ಲಿ ಇದ್ದ ಸಂದರ್ಭದಲ್ಲಿಯೇ ಸಿನಿಮಾರಂಗದಿಂದ ದೂರ ಉಳಿದಿದ್ದು ಅವರ ಅಭಿಮಾನಿ ಬಳಗದವರಿಗೆ ಹೆಚ್ಚು ಬೇಸರ ತಂದಿತ್ತು. ಹಾಗೆ ಹೆಚ್ಚು ಬಾರಿ ನೀವು ಯಾಕೆ ಸಿನಿಮಾರಂಗದಿಂದ ದೂರ ಉಳಿದಿದ್ದೀರಿ ಇಷ್ಟು ದಿವಸ ಎನ್ನುವ ಪ್ರಶ್ನೆಗೆ ನನಗೆ ಸರಿಯಾದ ಪಾತ್ರಗಳು ಸಿಕ್ಕಿರಲಿಲ್ಲ, ಹಾಗೆ ಮೇಲಾಗಿ ಕಥೆಗಳು ಕೂಡ ನನಗೆ ಯಾವುವು ಇಷ್ಟ ಆಗಿರಲಿಲ್ಲ, ಅದೊಂದೆ ಕಾರಣಕ್ಕೆ ಸಿನಿಮಾದಿಂದ ದೂರ ಇದ್ದೆ ಅಷ್ಟೇ ಎಂದು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಎಲ್ಲಾ ವಿಚಾರ ಬಿಚ್ಚಿಟ್ಟಿದ್ದಾರೆ. ಹೌದು ಇತ್ತೀಚಿಗೆ ವೆಡ್ಡಿಂಗ್ ಗಿಫ್ಟ್ ಎಂಬ ಒಂದು ಚಿತ್ರದಲ್ಲಿ ಅಭಿನಯ ಮಾಡಿದ ಪ್ರೇಮಾ ಅವರು ವಿಕ್ರಂ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕೆ ತುಂಬಾ ಖುಷಿಯಾಯಿತು.

ಚಿತ್ರಕಥೆ ಎಲ್ಲವೂ ಕೂಡ ನನಗೆ ಇಷ್ಟ ಆಗಿತ್ತು. ಹಾಗಾಗಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದೇನೆ. ನನಗೆ ಪಾತ್ರದ ಕಥೆಗಳು ಇಷ್ಟ ಆದರೆ ನಟನೆ ಮಾಡುತ್ತೇನೆ, ಇಲ್ಲವಾದಲ್ಲಿ ಮಾಡುವುದಿಲ್ಲ ಎಂದರು. ಇಷ್ಟು ದಿವಸದ ಬಳಿಕ ಸಿನಿಮಾ ಮಾಡುತ್ತಿರುವುದರ ಬಗ್ಗೆ ಕೇಳಿದಾಗ ನನಗೆ ಯಾರಾದರೂ ನಿಮ್ಮ ಲವರ್ ಯಾರು ಎಂದು ಕೇಳಿದರೆ, ನಾನು ಕ್ಯಾಮೆರಾ ಎಂದು ಹೇಳುತ್ತೇನೆ. ಕಾರಣ ಆ ಕ್ಯಾಮರಾ ಮುಂದೆ ನಿಂತರೆ ಅಭಿಮಾನಿಗಳೇ ಕಣ್ಣು ಮುಂದೆ ನಿಂತಂತಿರುತ್ತದೆ ಎಂದು ಹೇಳಿ ನಟಿ ಪ್ರೇಮ ಅವರು ಅವರ ಸಿನಿಮಾ ಕುರಿತಾದ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. ಪ್ರೇಮಾ ಅವರ ಈ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಅವರ ಲವರ್ ಬಗ್ಗೆ ಹೇಳಿದ ಮಾಹಿತಿಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು..( video credit : news first kannada )