ಅಪ್ಪು ಅವರ ಮತ್ತೊಂದು ಮುಖ ಬಯಲು ಮಾಡಿದ ನಟಿ ಪ್ರೇಮಾ..? ಈ ಮಾತಿಗೆ ಕಣ್ಣೀರಿಟ್ಟ ಅಶ್ವಿನಿ ಪುನೀತ್..!

By Infoflick Correspondent

Updated:Thursday, April 14, 2022, 19:31[IST]

ಅಪ್ಪು ಅವರ ಮತ್ತೊಂದು ಮುಖ ಬಯಲು ಮಾಡಿದ ನಟಿ ಪ್ರೇಮಾ..? ಈ ಮಾತಿಗೆ ಕಣ್ಣೀರಿಟ್ಟ ಅಶ್ವಿನಿ ಪುನೀತ್..!

ನಮ್ಮ ಕನ್ನಡದ ಸ್ಟಾರ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯಾಗಿ ಈಗಾಗಲೇ ಐದು ತಿಂಗಳು ಮೇಲಾಗಿದೆ. ಆದರೂ ಕೂಡ ಅವರ ಒಂದೊಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ತಿಳಿಯುತ್ತಿದ್ದಂತೆ ಕಣ್ಣೀರು ತನ್ನಂತಾನೆ ಜಾರುತ್ತದೆ. ಅಷ್ಟರಮಟ್ಟಿಗೆ ಅಪ್ಪು ಅವರು ಎಲ್ಲರನ್ನೂ ತುಂಬಾನೇ ಕಾಡುತ್ತಿದ್ದಾರೆ ಎಂದು ನಾವು ಹೇಳಬಹುದು. ಅಪ್ಪು ಅಗಲಿಕೆ ಹೆಚ್ಚು ನೋವನ್ನ ಈಗಲೂ ನೀಡುತ್ತದೆ. ಈಗಲೂ ಕೂಡ ಅಪ್ಪು ಅವರು ನಮ್ಮ ಜೊತೆಗೆ ಇದ್ದಾರೆ, ಎಲ್ಲಿಯೂ ಹೋಗಿಲ್ಲ ಎಂದೆನಿಸುತ್ತದೆ. ಅವರ ವಿಡಿಯೋ, ಫೋಟೋಸ್, ಅವರ ಸಿನಿಮಾಗಳು ಅವರ ಸಾಮಾಜಿಕ ಕಾರ್ಯಗಳು ನೋಡಿ ತಿಳಿದುಕೊಂಡರೆ ನಿಜಕ್ಕೂ ಒಬ್ಬ ಮನುಷ್ಯ ಇವರ ರೀತಿ ಬದುಕಲು ಸಾಧ್ಯವೇ ಇಲ್ಲ ಎಂದೆನಿಸುತ್ತದೆ.

ಅಂತಹ ದೇವತಾ ಮನುಷ್ಯ ಇದೀಗ ನಮ್ಮ ಜೊತೆಗೆ ಇಲ್ಲ, ಆದರೆ ಅದು ಕೇವಲ ದೈಹಿಕವಾಗಿ ಮಾತ್ರ ಎಂದು ನಾವು ಹೇಳಬಹುದು. ಹೌದು ಇದೀಗ ಪುನೀತ್ ಅವರ ಬಗ್ಗೆ ನಟಿ ಪ್ರೇಮ ಅವರು ಕೆಲವೊಂದಿಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಪುನೀತ್ ಅವರ ಮತ್ತೊಂದು ಮುಖವನ್ನು ಎಲ್ಲರೆದುರು ಬಯಲು ಮಾಡಿ ಅವರ ಅನಿಸಿಕೆಯನ್ನು ಈಗ ಹಂಚಿಕೊಂಡಿದ್ದಾರೆ. ಹೌದು ನಟಿ ಪ್ರೇಮ ಅವರು ಹೇಳುವ ಹಾಗೆ, ಪುನೀತ್ ಅವರು ಮದುವೆಯಾಗುವ ಮೊದಲು ಹೀಗೆ ಇರಲಿಲ್ಲವಂತೆ. ಅಶ್ವಿನಿ ಅವರನ್ನ ಮದುವೆ ಆದ ಬಳಿಕ ಅವರಿಗೆ ತುಂಬಾನೇ ಜವಾಬ್ದಾರಿ ಬಂದಿತ್ತು. ಹಾಗೆ ಎಲ್ಲಾ ಹಿರಿಯರಿಗೆ, ಕಿರಿಯರಿಗೆ, ಹೆಚ್ಚು ಮರ್ಯಾದೆ ಕೊಡುತ್ತಿದ್ದರು ಎಂದಿದ್ದಾರೆ.

ಮದುವೆ ಮುಂಚೆ ಅಪ್ಪು ಅವರು ಗ್ರಾನೈಟ್ ಬಿಸಿನೆಸ್ ಮಾಡುತ್ತಿದ್ದು, ನಟನಾಗಿ ಸಿನಿಮಾದಲ್ಲಿ ಇನ್ನೂ ಅಭಿನಯ ಮಾಡಿರಲಿಲ್ಲ. ಮದುವೆ ಆಗುವ ಮುನ್ನ ಅಪ್ಪು ಅವರಿಗೆ ತುಂಬಾನೇ ಕೋಪ ಬರುತ್ತಿತ್ತು. ಓಂ ಶೂಟಿಂಗ್ ಸೆಟ್ ಗೆ ಅಪ್ಪು ಬರುತ್ತಿದ್ದರು. ಎಲ್ಲರನ್ನೂ ಚುಡಾಯಿಸಿಕೊಂಡು ಹೋಗಲೇ, ಬಾರಲೇ ಎನ್ನುತ್ತಾ ನಗು ನಗುತ್ತಾ ಎಂಜಾಯ್ ಮಾಡಿಕೊಂಡು ಇರುತ್ತಿದ್ದರು. ಹೆಚ್ಚು ಜೀವನ ಬಗ್ಗೆ ತಲೆಯ ಕೆಡಿಸಿಕೊಂಡಿರಲಿಲ್ಲ. ಅವರಿಗೆ ಜವಾಬ್ದಾರಿಗಳು ಸಹ ಆಗ ಇರಲಿಲ್ಲ, ಯಾವ ಟೆನ್ಶನ್ ತೆಗೆದುಕೊಳ್ಳದೆ ತುಂಬಾನೇ ಜಾಲಿಯಾಗಿ ಗೆಳೆಯರೊಟ್ಟಿಗೆ ಟ್ರಿಪ್ ಹೊಡೆದುಕೊಂಡು ಇರುತ್ತಿದ್ದರು. ಒಮ್ಮೆ ಮದುವೆಯಾದ ಬಳಿಕ ಪುನೀತ್ ಅವರು ತುಂಬಾನೇ ಬದಲಾದರು ಎಂದಿದ್ದಾರೆ. 

ನಟ ಪುನೀತ್ ಅವರು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಸಿನಿಮಾದಲ್ಲಿ ಹೆಚ್ಚು ಆಸಕ್ತಿ ತೋರಿ, ಎಲ್ಲರಿಗೂ ಮರಿಯಾದೆ ಕೊಡುತ್ತ, ಕಷ್ಟ ಅಂದವರಿಗೆ ಸಹಾಯ ಮಾಡುತ್ತಾ, ಅದನ್ನ ಎಲ್ಲಿಯೂ ಹೇಳದೆ ಮಾಡುತ್ತಿದ್ದರು. ಹಾಗೆ ತುಂಬಾ ಕೋಪ ಕಂಟ್ರೋಲ್ ಆಗಿತ್ತು ಅಪ್ಪು ಅವರಿಗೆ. ಅಂತಹ ಮನುಷ್ಯ ಮತ್ತೆ ನಮಗೆ ಸಿಗುವುದಿಲ್ಲ ಎಂದು ಇದೀಗ ಪ್ರೇಮ ಅವರು ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇವರ ಮಾತು ಕೇಳಿ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಕೂಡ ಕಣ್ಣೀರು ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ಹಾಗೆ ತಪ್ಪದೇ ಮಾಹಿತಿಯನ್ನು ಎಲ್ಲರೂ ಕೂಡ ಶೇರ್ ಮಾಡಿ ಧನ್ಯವಾದಗಳು...