Priya Mani : ಕನ್ನಡದ ಖ್ಯಾತ ನಟಿಯಿಂದ ಮಗು ಮಾಡಿ ಕೊಳ್ಳುವ ವಿಷಯಕ್ಕೆ ಜಗಳ : ಡೈವೋರ್ಸ್ ಪಡೀತಿದ್ದಾರಂತೆ ದಂಪತಿ ?

By Infoflick Correspondent

Updated:Wednesday, August 17, 2022, 16:00[IST]

Priya Mani : ಕನ್ನಡದ ಖ್ಯಾತ ನಟಿಯಿಂದ ಮಗು ಮಾಡಿ ಕೊಳ್ಳುವ ವಿಷಯಕ್ಕೆ ಜಗಳ : ಡೈವೋರ್ಸ್ ಪಡೀತಿದ್ದಾರಂತೆ ದಂಪತಿ ?


ಮದುವೆ ಎಂಬ ಪದಕ್ಕೆ ತುಂಬಾನೇ ಮಹತ್ವಪೂರ್ಣವಾದ ಅರ್ಥವಿದೆ. ಈ ಮದುವೆ ಎಂಬುದು ಕೇವಲ ಅರಿಶಿಣದ ದಾರವನ್ನು ಕಟ್ಟುವುದು ಮಾತ್ರವಲ್ಲ. ಈ ಮದುವೆ ಅಂದರೆ ಎರಡು ಮನಸ್ಸುಗಳು ಮನಸ್ಫೂರ್ತಿಯಾಗಿ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವುದು ಎಂದು. ಇನ್ನು ಇವತ್ತಿನ ದಿನಗಳಲ್ಲಿ ಹೆಚ್ಚಿನ ಜನರು ಲವ್ ಮ್ಯಾರೇಜ್ ಆಗೋದು ಯಾಕೆ ಎಂದರೆ, ಈ ಲವ್ ಮ್ಯಾರೇಜ್'ನಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಈ ರೀತಿ ಲವ್ ಮ್ಯಾರೇಜ್ ಆಗುವುದರಿಂದ ಮದುವೆಯ ನಂತರದಲ್ಲಿಯೂ ಕೂಡ ಇವರಿಬ್ಬರ ನಡುವೆ ಅಂಡರ್ಸ್ಟ್ಯಾಂಡಿಂಗ್ ಉತ್ತಮವಾಗಿರುತ್ತದೆ ಎಂದು ತಿಳಿದಿದ್ದಾರೆ. 

ಸೌತ್ ಬ್ಯೂಟಿ  ಪ್ರಿಯಾಮಣಿ ಅವರು ಕೂಡಾ ಲವ್ ಮ್ಯಾರೇಜ್ ಆಗಿದ್ದಾರೆ. ಮುಸ್ತಾಫಾ ರಾಜ್ ಎಂಬುವರನ್ನು ಮದುವೆಯಾಗಿ ಹಲವು ವರ್ಷಗಳೇ ಕಳೆದಿದೆ. ಇನ್ನು ಪ್ರಿಯಾಮಣೀ ಅವರು ಸೌತ್ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದವರು, ಸುದೀಪ್, ದರ್ಶನ್, ಪುನೀತ್ ರಂತಹ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಬಾಲಿವುಡ್ ನ ಕೆಲ ವೆಬ್ ಸಿರೀಸ್ ಗಳಲ್ಲೂ ನಟಿಸಿ ಸುದ್ದಿಯಾಗಿದ್ದರು.    

ಸುಮಾರು ಇಪ್ಪತ್ತು ವರ್ಷಗಳೀಂದ ಸಿನಿಮಾ ಕ್ಷೇತ್ರದಲ್ಲಿರುವ ಪ್ರಿಯಾಮಣಿ ಅವರು ಇನ್ನು ತಮ್ಮ ಚಾರ್ಮ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಮಣಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿತು. ಸದ್ಯ ಪ್ರಿಯಾಮಣಿ ಅವರ ಕೈಲ್ಲಿ ಈಗ ಸಾಕಷ್ಟು ಪ್ರಾಜೆಕ್ಟ್ ಗಳು ಇವೆ. ಇನ್ನು ಕಿರುತೆರೆಯಲ್ಲೂ ಮಿಂಚುವ ಪ್ರಿಯಾಮಣಿ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿ ಏನೆಂದರೆ, ಅದು ಪ್ರಿಯಾಮಣಿ ಅವರು ಡಿವೋರ್ಸ್ ಮಾಡುತ್ತಿದ್ದರೆ ಎಂಬುದು. ಹೌದು ಪ್ರಿಯಾಮಣಿ ಅವರು ತಮಗೆ ಮಕ್ಕಳು ಬೇಡ ಎಂದು ಹೇಳಿದ್ದಾರೆ. ಹೀಗಾಗಿ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಇಬ್ಬರೂ ಬೇರೆಯಾಗುತ್ತಿದ್ದಾರೆ ಎನ್ನಲಾಗಿದೆ.