ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಬಂದ ವಿಂಕ್‌ ಗರ್ಲ್

By Infoflick Correspondent

Updated:Friday, July 29, 2022, 19:57[IST]

ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಬಂದ ವಿಂಕ್‌ ಗರ್ಲ್

ಕಣ್ಣು ಹೊಡೆದು ಇಡೀ ಭಾರತದಾದ್ಯಂತ ಸಂಚಲನ ಮೂಡಿಸಿದ್ದ ಪ್ರಿಯಾ ವಾರಿಯರ್ ಈಗ ಇನ್ನಷ್ಟು ಹಾಟ್‌ ಆಗಿದ್ದಾರೆ. ಒರು ಅಡಾರ್ ಲವ್ ಎಂಬ ಮಳಯಾಳಂ ಸಿನಿಮಾದಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದವಳು. ದೇಶದಾದ್ಯಂತ ಅಭಿಮಾನಿಗಳನ್ನು ಪಡೆದು ರಾತ್ರೋ ರಾತ್ರಿ ಸೆಲೆಬ್ರಿಟಿಯಾದರು. ಪ್ರಿಯಾ ವಾರಿಯರ್ ನಟಿಸಿದ ಚಿತ್ರ ರಿಲೀಸ್ ಗೂ ಮುನ್ನವೇ ಭಾರೀ ಸದ್ದು ಮಾಡಿತ್ತು. ಆದರೆ, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿ ಬಿಟ್ಟಿತು. ಆದರೂ ಪ್ರಿಯಾ ವಾರಿಯರ್ ಖ್ಯಾತಿ ಮಾತ್ರ ಕೊಂಚವೂ ಕಡಿಮೆಯಾಗಲಿಲ್ಲ. ಈ ಸಿನಿಮಾದ ಪ್ರೋಮೋ ರಿಲೀಸ್ ಅದಾಗ ಎಲ್ಲಿ ನೋಡಿದರೂ ಪ್ರಿಯಾ ವಾರಿಯರ್ ಅವರದ್ದೇ ವೀಡಿಯೋ, ಫೋಟೋಗಳು ಹರಿದಾಡುತ್ತಿದ್ದವು.  

ಇನ್ನು 2018ರಲ್ಲಿ ಮತ್ತೊಂದು ಸಿನಿಮಾದಲ್ಲಿ ನಟಿಸಿದರು. ಅದೇ ನೀ ವಾನಂ ನಾನ್ ಮಜೈ ಸಿನಿಮಾ. ಇನ್ನು ಇಂದಿಗೂ ವಿಂಕ್ ಗರ್ಲ್ ಎಂದು ಕರೆಸಿಕೊಳ್ಳುತ್ತಾರೆ. ಕೇರಳದ ಕುಟ್ಟಿ ಪ್ರಿಯಾ ವಾರಿಯರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ 7.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಮಾಡೆಲಿಂಗ್ ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದಾರೆ. ಇನ್ನು ಇಷ್ಕ್ ಎಂಬ ತೆಲುಗು ಚಿತ್ರದಲ್ಲೂ ನಟಿಸಿದ್ದರು. ಪ್ರಿಯಾ ವಾರಿಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೋಲ್ ಆಗಿದ್ದರು. ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು ಎಂದು ಇನ್ ಸ್ಟಾಗ್ರಾಂನಿಂದ ದೂರ ಉಳಿದಿದ್ದರು. 

ಆದರೆ ಇದೀಗ ಮತ್ತೆ ಸೋಶಿಯಲ್ ಮೀಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಫೋಟೋಶೂಟ್ ಮಾಡಿಸಿ ತಮ್ಮ ಖಾತೆಯಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಹಾಟ್ ಆಗಿ ಬಿಳಿ ಬಣ್ಣದ ಫ್ರಾಕ್ ತೊಟ್ಟು, ಬೆಡ್ ರೂಮ್ ನಲ್ಲಿ ಸ್ನೇಹಿತನ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಈ ಹಾಟ್ ಡ್ಯಾನ್ಸ್ ವೀಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.