ನಟಿಯ ಎದೆಸೀಳುವಂತ ಡ್ರೆಸ್ ಫೋಟೋ ನೋಡಿ ಬೈದ ನೆಟ್ಟಿಗರಿಗೆ ಸರಿಯಾಗಿ ತರಾಟೆಗೆ ತೆಗದುಕೊಂಡ ಪ್ರಿಯಾ ಹೇಳಿದ್ದೇನು ಗೊತ್ತಾ..?

Updated: Saturday, October 17, 2020, 15:51 [IST]

    

ರಾತ್ರೋರಾತ್ರಿ ನ್ಯಾಶನಲ್ ಸ್ಟಾರ್ ಆಗಿ, ಹೊರಬಿದ್ದ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ಅವರು ಇತ್ತಿಚೆಗೆ ಎದೆಸೀಳುವಂತ ಡ್ರೆಸ್ ಹಾಕಿಕೊಂಡಿದ್ದು ಕಂಡುಬಂದಿದೆ. ಈ ರೀತಿಯ ಬಟ್ಟೆ ಹಾಕಿಕೊಂಡಿರುವುದಕ್ಕೆ ನೆಟ್ಟಿಗರು ತಮ್ಮಿಷ್ಟದಂತೆ ಕಾಮೆಂಟ್ ಮಾಡಿದ್ದಾರೆ, ಅವ್ರಿಗೆಲ್ಲರಿಗೂ ನಟಿ ಪ್ರಿಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ, ಕೆಲ ಯುವತಿಯರು ಹಾಕಿಕೊಳ್ಳುವ ಬಟ್ಟೆ ಬಗ್ಗೆ ಸದಾ ಒಂದಿಲ್ಲೊಂದು ಅನಿಸಿಕೆ ಕಾಮೆಂಟ್ ಗಳು ಬರುತ್ತಲೇ ಇರುತ್ತವೆ.  

ಅದರಲ್ಲೂ ಹೆಚ್ಚಿನ ಮಟ್ಟದಲ್ಲಿ ಕೆಲ ಸಿನಿಮಾ ನಟಿಯರ ಡ್ರೆಸ್ ಬಗ್ಗೆ ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಅಶ್ಲೀಲವಾಗಿ, ಅಸಭ್ಯವಾಗಿ ಕಾಮೆಂಟ್ ಮಾಡುತ್ತಿರುತ್ತಾರೆ. ನಟಿಯರು ಪಾತ್ರಕ್ಕೆ ತಕ್ಕಂತೆ ಮತ್ತು ತಮ್ಮಿಷ್ಟದ ಹಾಗೆ ಬೋಲ್ಡ್ ಬಟ್ಟೆ ಹಾಕಿಕೊಂಡರೂ, ಅದನ್ನೂ ಸಹಿಸದ ಕೆಲ ಜನರು, ಹೇಗೆ ಬೇಕೋ ಹಾಗೆ, ಮನಬಂದಂತೆ ಮಾತನಾಡುತ್ತಾರೆ. ಹಾಗೇನೇ ನಟಿ ಪ್ರಿಯಾರವರು ಹಾಕಿಕೊಂಡಿರುವ ಒಂದು ಬಟ್ಟೆಗೆ ಅಂತಹದ್ದೇ ಕಾಮೆಂಟ್ ಕಂಡುಬಂದಿದ್ದು, ಅದಕ್ಕೆ ನಟಿ ಪ್ರಿಯಾ ವಾರಿಯಾರ್ ಉತ್ತರ ನೀಡಿದ್ದಾರೆ.ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಅವರು, ಸಾಂಪ್ರದಾಯಿಕ ಉಡುಗೆ ಧರಿಸಿ ,ಜೊತೆಗೆ  ಆಭರಣಗಳನ್ನು ಹಾಕಿಕೊಂಡು, ಮೊನ್ನೆಯಷ್ಟೇ ಫೋಟೋಶೂಟ್ ಒಂದನ್ನು ಮಾಡಿಸಿದ್ದರು ಎಂದು ಹೇಳಲಾಗುತ್ತಿದೆ.   

ಆದರೆ ಆ ಡ್ರೆಸ್ ನಲ್ಲಿ , ಎದೆಯ ಮೇಲೆ ಬ್ಲೌಸ್ ಬಂದಿದ್ದು, ಎದೆ ಸೀಳುವ ಹಾಗೆ ಕಂಡುಬಂದಿದೆ. ಈ ಫೋಟೋಸ್ ನೋಡಿದ ನೆಟ್ಟಿಗರು,ತಮ್ಮ ತಮ್ಮ ಅನಿಸಿಕೆಗಳ ಮೂಲಕ ಪ್ರಿಯಾಗೆ ಬೈಯ್ದಿದ್ದಾರೆ. ನಟಿ ಪ್ರಿಯಾ ವಾರಿಯರ್ ಗೆ ಡ್ರೆಸ್ ಹಾಕಿಕೊಂಡ ರೀತಿ ನೋಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಕೇಳಿಬಂದಿದೆ..

ಈ ಕಾಮೆಂಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ನಟಿ ಪ್ರಿಯಾ ಅವರು, "ಹೇಯ್ ನೀವು ಮಾಡಿರುವ ಎಲ್ಲಾ ಕಾಮೆಂಟ್‌ಗಳನ್ನು ನಾನು ಓದಿದ್ದೇನೆ. ಕೆಟ್ ಕೆಟ್ಟದಾಗಿ ಕಾಮೆಂಟ್ ಮಾಡಿರುವ ಜನಗೆಲ್ಲರಿಗೂ ಚಪ್ಪಾಳೆ ತಟ್ಟಲೇಬೇಕು.. ಇಷ್ಟೆಲ್ಲ ಏರಿಳಿತವನ್ನು ಹತ್ತಿಕೊಂಡು, ದಾಟಿಕೊಂಡು  ನಾನು ಇಲ್ಲಿವರೆಗೆ ಬಂದಿದ್ದೇನೆ. ಈ ವಿಷಯ ನನಗೆ ಹೆಮ್ಮೆಪಡುವಂತಾಗಿದೆ. ಈ ರೀತಿ ಕಾಮೆಂಟ್ ಮಾಡುವವರನ್ನ ಮತ್ತು ಬೆದರಿಕೆ ಮಾತುಗಳನ್ನು, ಪ್ರತಿನಿತ್ಯ ನಾನು ನೋಡುತ್ತೇನೆ. ಅದರಿಂದ ಏನೂ ಆಗುವುದಿಲ್ಲ, ಮತ್ತು ಏನು ಸಾಧ್ಯವಾಗದು. ಮೊದಲು ನಿಮ್ಮಲ್ಲಿರುವ ಮನಸ್ಥಿತಿ ಬದಲಾಯಿಸಿಕೊಳ್ಳಿ" ಎಂದು ನಟಿ ಪ್ರಿಯಾ ವಾರಿಯರ್ ಖಡಕ್ ಉತ್ತರ ನೀಡಿದ್ದಾರೆಂದು ತಿಳಿದುಬಂದಿದೆ. ಜೊತೆಗೆ ನಟಿ ನೀಡಿರುವ ಈ ಪ್ರತಿಕ್ರಿಯೆ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಶೇರ್ ಮಾಡಿ...