Priyanka Upendra : ಕನ್ನಡದ ನಟಿ ಪ್ರಿಯಾಂಕ ಅವರಿಂದ ಜಬರ್ದಸ್ತ್ ರಾ ರಾ ರಕ್ಕಮ್ಮ ಸ್ಟೆಪ್ಸ್..! ಇಲ್ನೋಡಿ ವಿಡಿಯೋ

By Infoflick Correspondent

Updated:Monday, July 18, 2022, 15:36[IST]

Priyanka Upendra :  ಕನ್ನಡದ ನಟಿ ಪ್ರಿಯಾಂಕ ಅವರಿಂದ ಜಬರ್ದಸ್ತ್ ರಾ ರಾ ರಕ್ಕಮ್ಮ ಸ್ಟೆಪ್ಸ್..! ಇಲ್ನೋಡಿ ವಿಡಿಯೋ

ಕಿಚ್ಚ ಸುದೀಪ್ ಅವರ ಅಭಿನಯದಲ್ಲಿ ಮೂಡಿಬಂದಿರುವ ಹಾಗೂ ಅನುಪ್ ಭಂಡಾರಿ ಅವರ ನಿರ್ದೇಶನದಲ್ಲಿ ತೆರೆಗೆ ಅಪ್ಪಳಿಸಲಿರುವ ವಿಕ್ರಾಂತ್ ರೋಣ ಚಿತ್ರ ಇದೇ ತಿಂಗಳು 28 ನೇ ತಾರೀಕು ಭರ್ಜರಿಯಾಗಿ ಘರ್ಜಿಸಲು ರೆಡಿಯಾಗಿದೆ. ಹೌದು, ಕನ್ನಡದ ಮತ್ತೊಂದು ಸಿನಿಮಾ ಇದು ಪಾನ್ ವರ್ಲ್ಡ್ ನಲ್ಲಿ ರಿಲೀಸ್ ಆಗುತ್ತಿದೆ. ಹಾಗೆ ಬಹುನಿರೀಕ್ಷಿತ ಸಿನಿಮಾ ಇದಾಗಿದೆ ಎನ್ನಬಹುದು. ಹಾಗೆ ಎಲ್ಲರ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ವಿಕ್ರಾಂತ್ ರೋಣ ಸಿನಿಮಾದ ಕೆಲವೊಂದಿಷ್ಟು ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಕೂಡ ಆಗುತ್ತಿವೆ. ನಟ ಕಿಚ್ಚ ಸುದೀಪ್ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಸಕ್ಕತ್ ಡಾನ್ಸ್ ಮಾಡುವುದಿಲ್ಲ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದ್ದವು.  

ಅಂತಹ ಮಾತುಗಳಿಗೆ ಕಿಚ್ಚ ಸುದೀಪ್ ಅವ್ರು ಈ ಸಿನಿಮಾದ ಎಕ್ಕ ಸಕ್ಕ ಹಾಡಿನ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದಾರೆ. ಭರ್ಜರಿ ವಿಭಿನ್ನ ಸ್ಟೆಪ್ ಹಾಕುವ ಮೂಲಕ ಕಿಚ್ಚ ಸುದೀಪ್ ಅವರು ಸದ್ದು ಮಾಡುತ್ತಿದ್ದಾರೆ. ಹೌದು ಈ ಹಾಡು ಭಾರಿ ರೀಲ್ಸ್ ಆಗುತ್ತಿದ್ದು ಹೆಚ್ಚು ಕಲಾವಿದರು ವಿಭಿನ್ನ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ವಿಡಿಯೋಗಳ ಪೋಸ್ಟ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಿರುವುದು ವಿಶೇಷ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಈ ಏಕ್ಕಸಕ್ಕ ಹಾಡಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಕಿದ ಸ್ಟೆಪ್ ನಿಜಕ್ಕೂ ಅದ್ಭುತವಾಗಿದೆ. ಇದೆ ಹಾಡಿಗೆ ಇದೀಗ ಮೂಲತಃ ಬೆಂಗಾಳಿಯವರಾದ ನಟಿ ಪ್ರಿಯಾಂಕ ಹೆಜ್ಜೆ ಹಾಕಿದ್ದು ಹೆಚ್ಚು ವೈರಲ್ ಆಗುತ್ತಿದೆ. ಹೌದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರ ಪತ್ನಿ ಆಗಿರುವ ಪ್ರಿಯಾಂಕ ಉಪೇಂದ್ರ ಅವರು ಸುದೀಪ್ ಅವರ ಎಕ್ಕ ಸಕ್ಕ ಹಾಡಿಗೆ ಹೆಜ್ಜೆ ಹಾಕಿ ಸದ್ದು ಆಗಿದ್ದಾರೆ.

ಇದರ ವಿಡಿಯೋ ಜಲಕ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಹಾಗೆ ವಿಡಿಯೋವನ್ನು ಹೆಚ್ಚು ವೈರಲ್ ಮಾಡುತ್ತಿದ್ದಾರೆ ಎನ್ನಬಹುದು. ಅಷ್ಟರಮಟ್ಟಿಗೆ ಪ್ರಿಯಾಂಕ ಅವರು ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದ ವಿಡಿಯೋ ಇಲ್ಲಿದೆ ನೋಡಿ..ನಟಿ ಪ್ರಿಯಾಂಕ ರಾ ರಾ ರಕ್ಕಮ್ಮ ಎಂದು ಮಾಡಿದ ಡಾನ್ಸ್ ಪರಿ ನಿಮಗೂ ಇಷ್ಟ ಆಗುತ್ತೆ ಎಂದುಕೊಂಡಿದ್ದೇನೆ. ವಿಡೀಯೋ ನೋಡಿ ಇಷ್ಟವಾದಲ್ಲಿ ಶೇರ್ ಮಾಡಿ. ಹಾಗೇನೇ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಶುಭವಾಗಲಿ, ಇದು ಕೂಡ ಕನ್ನಡದ ಮತ್ತೊಂದು ಅಭೂತಪರ್ವ ಯಶಸ್ವಿ ಸಿನಿಮಾ ಆಗಲಿ ಎಂದು ಶುಭಕೋರಿ. ಇಡೀ ಪ್ರಪಂಚವೇ ಮತ್ತೊಮ್ಮೆ ನಮ್ಮ ಕನ್ನಡದ ಶಕ್ತಿ ಏನು ಎಂಬುದಾಗಿ ತೋರಿಸುವತ್ತ ಈ ಸಿನಿಮಾ ಹೊರ ಹೊಮ್ಮಲಿ ಎಂದು ಹಾರೈಸಿ ಧನ್ಯವಾದ..