ಕೆಜಿಎಫ್-೨ ಚಿತ್ರ ವೀಕ್ಷಿಸಿ ವಾವ್ ಎಂದ ಖ್ಯಾತ ನಟ.. ಇದು ನಿಜ ! ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದಿಷ್ಟು

By Infoflick Correspondent

Updated:Thursday, March 3, 2022, 20:21[IST]

ಕೆಜಿಎಫ್-೨ ಚಿತ್ರ ವೀಕ್ಷಿಸಿ ವಾವ್ ಎಂದ ಖ್ಯಾತ ನಟ.. ಇದು ನಿಜ ! ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದಿಷ್ಟು

 


ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಯಶ್ (Yash) ಅಭಿನಯದ ಕೆಜಿಎಫ್ ಭಾಗ-2 (K G F 2) ಏಪ್ರಿಲ್ 14ಕ್ಕೆ ಭರ್ಜರಿಯಾಗಿ ಇಡೀ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಚಿತ್ರತಂಡ ಈ ಬಗ್ಗೆ ಈಗಾಗಲೇ ಅಧಿಕೃತವಾಗಿ ದಿನಾಂಕ ಪ್ರಕಟಿಸಿದ್ದು, ಏಪ್ರಿಲ್ 14 ಯಾವಾಗ ಆಗುತ್ತದೆ ಎಂದು ಭಾರತೀಯ ಚಿತ್ರರಂಗದ ಅಭಿಮಾನಿಗಳೆಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಹೌದು ಕೇವಲ ಕರ್ನಾಟಕ ಇಂಡಿಯಾ ಮಾತ್ರವಲ್ಲದೆ ಇಡಿ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಹೌದು ಇಡಿ ವಿಶ್ವವೇ ಮೆಚ್ಚಿಕೊಂಡ ಕನ್ನಡದ ಚಿತ್ರ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ.

ನಟ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ತೆರೆಯ ಮೇಲೆ ಕೆಜಿಎಫ್ ಭಾಗ-1 ರಲ್ಲಿ ಕಾಣಿಸಿಕೊಂಡು ಬಿಗ್ ಕಮಾಲ್ ಮಾಡಿದ್ದರು. ಸಿನಿಮಾ ನೋಡಿದ ವೀಕ್ಷಕರು ಕೆಜಿಎಫ್ ಭಾಗ-2 ಸಿನಿಮಾದ ಸೀಕ್ವೆನ್ಸ್ ಗಾಗಿ ಇದೀಗ ಕಾಯುತ್ತಿದ್ದಾರೆ. ಕೆಜಿಎಫ್ ಚಿತ್ರತಂಡ ಇದೇ 27ನೇ ತಾರೀಕು ಟ್ರೈಲರ್ ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ. ಹಾಗೆನೆ ಮುಂದಿನ ತಿಂಗಳು ಏಪ್ರಿಲ್ 14ಕ್ಕೆ ಕೆಜಿಎಫ್ 2 ಸಿನಿಮಾವನ್ನು ತೆರೆಯ ಮೇಲೆ ತರುವ ಎಲ್ಲಾ ತಯಾರಿ ಸಹ ನಡೆಸಿದೆ ಎನ್ನಲಾಗಿದೆ. ಭಾಗ ಎರಡರಲ್ಲಿ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅಧಿರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆ ರವೀನಾ ಟಂಡನ್ ರಮೀಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಕೆಜಿಎಫ್ 2 ಚಿತ್ರವನ್ನು ನೋಡಿದ ಮಲಯಾಳಂ ನ ಖ್ಯಾತ ನಟ ಕೆಜಿಎಫ್2 ಚಿತ್ರದ ವಿಮರ್ಶೆ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.  

ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithvi Raj Sukumaran) ಎಂಬುವವರು ಕೆಜಿಎಫ್-೨ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕೆಜಿಎಫ್ 2 ಸಿನಿಮಾದ ವಿತರಣೆಯ ಹಕ್ಕನ್ನು ಕೂಡ ಇವರೇ ಪಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈಗ ಸಿನಿಮಾ ನೋಡಿರುವುದರ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. 'ವಿಜಯ್ ಕಿರಗಂದೂರು ಅವರ ಜೊತೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಹಾಗೆ ಕೆಜಿಎಫ್-2 ಸಿನಿಮಾ ನೋಡಿದ್ದು ಈ ಮನಸ್ಸಿಗೆ ಹೆಚ್ಚಾಗಿ ಮುದ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೊಸ ಸ್ಟಾಂಡರ್ಟ್ ಸೆಟ್ ಮಾಡಲಿದ್ದಾರೆ' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ....