ಕೆಜಿಎಫ್ 2 ಸಿನಿಮಾವನ್ನು ಮೆಚ್ಚಿಕೊಂಡ ರಂಗಣ್ಣ: ಅವರು ಹೇಳಿದ್ದೇನು ಗೊತ್ತಾ..?

By Infoflick Correspondent

Updated:Sunday, April 17, 2022, 22:21[IST]

ಕೆಜಿಎಫ್ 2  ಸಿನಿಮಾವನ್ನು ಮೆಚ್ಚಿಕೊಂಡ ರಂಗಣ್ಣ: ಅವರು ಹೇಳಿದ್ದೇನು ಗೊತ್ತಾ..?

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2  ಸಿನಿಮಾ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಮೇಲೆ ಅಪ್ಪಳಿಸಿದೆ. ಇಡೀ ದೇಶದ ಅಭಿಮಾನಿಗಳು ಮಾತ್ರವಲ್ಲದೆ ಇಡೀ ವಿಶ್ವವೇ ಕೆಜಿಎಫ್ ಚಾಪ್ಟರ್ 2  ಸಿನಿಮಾಗಾಗಿ ಕಳೆದ ಮೂರು ವರ್ಷದಿಂದ ತುಂಬಾ ಕಾತರದಿಂದ ಕಾಯುತ್ತಿತ್ತು. ಕೆಜಿಎಫ್ 2  ಸಿನಿಮಾ ಯಾವ ರೀತಿ ಇರುತ್ತದೆ.? ಯಾವ ರೀತಿ ಕತೆಯನ್ನು ಹೆಣೆದಿರುತ್ತಾರೆ.? ಹೇಗೆ ರಾಕಿ ಭಾಯ್ ಎಲ್ಲರನ್ನೂ ಕಂಟ್ರೋಲ್ ಮಾಡುತ್ತಾರೆ ಎಂಬುದಾಗಿ ತುಂಬಾ ಕುತೂಹಲದಿಂದ ಇದ್ದರು. ಅದಕ್ಕೆ ತಕ್ಕಂತೆ ಕೆಜಿಎಫ್ 2 ಸಿನಿಮಾದಲ್ಲಿ ಉತ್ತರ ಸಿಕ್ಕಿದೆ.   

ಕೆಜಿಎಫ್ ಚಾಪ್ಟರ್ 2  ನಿರೀಕ್ಷೆಗೂ ಮೀರಿ ಮೂಡಿಬಂದಿದೆ. ಕೆಜಿಎಫ್ 2  ಸಿನಿಮಾ ನೋಡಿದ ಪ್ರತಿಯೊಬ್ಬರು ಇದೊಂದು ಬ್ಲಾಕ್ಬಸ್ಟರ್ ಮೂವಿ ಎಂದು ಹೇಳುತ್ತಿದ್ದಾರೆ. ಇಡೀ ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ಹಾಲಿವುಡ್ ಚಿತ್ರರಂಗದ ಜನರು ಕೂಡ ತಮ್ಮ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಕೆಜಿಎಫ್ 2 ಚಿತ್ರ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ ಮೊದಲನೆ ಅಧ್ಯಾಯ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. 

ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಇನ್ನಷ್ಟು ಸಿನಿಮಾಗಳು ಮೂಡಿ ಬರಲಿ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಪ್ಯಾನ್ ಇಂಡಿಯಾ ಮೂವಿಗಳಲ್ಲೇ ಯಶ್ ಅಭಿನಯಿಸಲಿ ಎಂದಿದ್ದಾರೆ. ಇನ್ನು ಕೆಜಿಎಫ್ ಚಾಪ್ಟರ್ 3 ಯಾವಾಗ ಬರುತ್ತದೆ ಎಂದು ಕಾದು ನೋಡುವಷ್ಟು ಸಿನಿಮಾ ಇಷ್ಟವಾಗಿದೆ. ಇನ್ನು ಈ ಸಿನಿಮಾವನ್ನು ಪಬ್ಲಿಕ್ ಟಿವಿಯ ರಂಗಣ್ಣ ಅವರು ಕೂಡ ಮೆಚ್ಚಿಕೊಂಡಿದ್ದಾರೆ. ಕನ್ನಡದ ಸಿನಿಮಾ ಈ ಮಟ್ಟವನ್ನು ತಲುಪಿರುವುದೇ ಖುಷಿಯ ವಿಚಾರ ಎಂದು ರಂಗಣ್ಣ ಹೇಳಿದ್ದಾರೆ.