Yash : 50 ಕೋಟಿಯ ಪಾನ್ ಮಸಾಲ ತಿರಸ್ಕರಿಸಿದ ಯಶ್ ಗೆ ರಂಗಣ್ಣ ಹೇಳಿದ್ದೇನು..? ಸಕತ್ ವಿಡಿಯೋ ವೈರಲ್

By Infoflick Correspondent

Updated:Wednesday, May 4, 2022, 15:06[IST]

Yash : 50 ಕೋಟಿಯ ಪಾನ್ ಮಸಾಲ ತಿರಸ್ಕರಿಸಿದ ಯಶ್ ಗೆ ರಂಗಣ್ಣ ಹೇಳಿದ್ದೇನು..? ಸಕತ್ ವಿಡಿಯೋ ವೈರಲ್

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವಮಟ್ಟದಲ್ಲಿ ಸಕ್ಕತ್ತಾಗಿ ಧೂಳೆಬ್ಬಿಸುತ್ತಿದ. ಸಿನಿ ಪ್ರಿಯರು ಕೆಜಿಎಫ್ ಸಿನಿಮಾವನ್ನು ಅಪ್ಪಿ ಒಪ್ಪಿಕೊಂಡಿದ್ದಾರೆ. ಕೆಜಿಎಫ್ ಆರ್ಭಟಕ್ಕೆ ರಾಕಿ ಬಾಯ್ ಅಭಿನಯಕ್ಕೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಹೌದು ಕೆಜಿಎಫ್ ಸಿನಿಮಾ ಕನ್ನಡದ ಗೋಲ್ಡನ್ ಚಿತ್ರವಾಗಿದ್ದು ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುತ್ತಿದೆ. ಕೇವಲ ನೋಡುವುದಲ್ಲದೆ ಚಪ್ಪಾಳೆ ಹೊಡೆದು ಸಿನಿಮಾಗೆ ಬೆರಗಾಗಿ ಸೆಲ್ಯೂಟ್ ಹೊಡೆಯುತ್ತಿದೆ. ಕೆಜಿಎಫ್ 2 ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು ಬಿಡುಗಡೆ ಆದ ಹದಿನೈದು ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಮಾಡಿದ್ದು ಇದು ಕೂಡ ಕನ್ನಡಿಗರಿಗೆ ಹೆಮ್ಮೆಯ ವಿಷಯ.

ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದ ಮುಂದೆ ಎಲ್ಲಾ ದಾಖಲೆ ಅಳಿಸುತ್ತಿವೆ. ಹಾಗೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಹಾಗೂ ರವಿನಾ ಟಂಡನ್ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ನಟ ಯಶ್ ಅವರು ಸಾಮಾಜಿಕ ಕಳಕಳಿಯ ಮರೆತಿಲ್ಲ. ಯಶ್ ಸದಾ ಇನ್ನೊಬ್ಬರ ಒಳತಿಗಾಗಿ ಕೆಲಸ ಮಾಡುತ್ತಾರೆ. ಹೌದು ಪಾನ್ ಮಸಾಲದ ಜಾಹೀರಾತು ಯಶ್ ಅವರ ಕೈಯಲ್ಲಿ ಮಾಡಿಸಲು 50 ಕೋಟಿ ಆಫರ್ ಬಂದಿತ್ತು ಅದನ್ನ ಯಶ್ ತಿರಸ್ಕರಿಸಿದ್ದಾರೆ. ಹಾಗೇನೇ ಇನ್ನೊಂದು ಕಡೆ ಕೆಜಿಎಫ್ 2 ಭರ್ಜರಿಯಾಗಿ ಓಡುತ್ತಿದೆ.   

ಇನ್ನು ಕೂಡ ರಾಕಿ ಆರ್ಭಟ ಥಿಯೇಟರ್ನಲ್ಲಿ ಹಾಗೆ ಧೂಳೆಬ್ಬಿಸುತ್ತಾ ಮುಂದುವರೆಯುತ್ತಿದೆ. ಈ ಮುಂಚೆ ನಮ್ಮ ಕನ್ನಡದ ಯಾವ ಸಿನಿಮಾ ಮಾಡದ ಕಲೆಕ್ಷನ್ ಕೆಜಿಎಫ್ 2 ಮಾಡಿದ್ದು ದಾಖಲೆ ಮಾಡಿದೆ. 

ಹಾಗೆ ಬೇರೆಯವರು ಕನ್ನಡದ  ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತ ಎಂಬ ಪ್ರಶ್ನೆಗೆ ಇದೀಗ ಕೆಜಿಎಫ್ ಉತ್ತರ ನೀಡಿದೆ. ಹೌದು ಕೆಜಿಎಫ್ ಸಕ್ಸಸ್ ಆಗುತ್ತಿದ್ದಂತೆ ಪಬ್ಲಿಕ್ ಟಿವಿ ಖ್ಯಾತಿಯ ರಂಗಣ್ಣ ಅವರು ಇಡೀ ಕೆಜಿಎಫ್ ಚಿತ್ರತಂಡಕ್ಕೆ ಯಾವ ರೀತಿ ಶುಭಾಶಯಯ ತಿಳಿಸಿದ್ದಾರೆ. ಜೊತೆಗೆ 50 ಕೋಟಿ ಆಫರ್ ಬಂದಿದ್ದ ಪಾನ್ ಮಸಾಲಾ ಜಾಹಿರಾತನ್ನು ತಿರಸ್ಕರಿಸಿದ ಯಶ್ ಅವರಿಗೆ ರಂಗಣ್ಣ ಅವರು ಹೇಳಿದ್ದಾದ್ರೂ ಏನು ಗೊತ್ತಾ. ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು.. (Video credit ; voice of kannadiga )