ತವರಿಗೆ ಮರಳಿದ ಅಪ್ಪು ಗನ್ ಮ್ಯಾನ್ ಚಲಪತಿ ಭಾವುಕ ಮಾತುಗಳು

By Infoflick Correspondent

Updated:Sunday, June 19, 2022, 09:58[IST]

ತವರಿಗೆ ಮರಳಿದ ಅಪ್ಪು ಗನ್ ಮ್ಯಾನ್ ಚಲಪತಿ ಭಾವುಕ ಮಾತುಗಳು

ಪುನೀತ್ ರಾಜ್ ಕುಮಾರ್ ಅವರ ಗನ್ ಮ್ಯಾನ್ ತೆಗೆದುಕೊಂಡ ಈ ನಿರ್ಧಾರ ಎಲ್ಲರನ್ನು ಒಂದು ಕ್ಷಣ ದಿಗ್ಭ್ರಾಂತಗೊಳಿಸಿದೆ. ಅಪ್ಪು ಅವರಿಗೆ ಬಹಳ ವರ್ಷಗಳಿಂದ ಗನ್ ಮ್ಯಾನ್ ಆಗಿ ರಕ್ಷಣೆ ನೀಡಿದ್ದ ಚಲಪತಿ ಅವರು ಈಗ ರಾಜ ಕುಮಾರನಿಲ್ಲದ ಅರಮನೆಯಿಂದ ಹೊರ ನಡೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರುಗಳನ್ನು ಬಿಟ್ಟು ಹೋದಾಗ ಇಡೀ ಕರುನಾಡೇ ಶೋಕ ಸಾಗರದಲ್ಲಿ ಮುಳುಗಿತ್ತು. ಆಗ ಅಪ್ಪು ಮನೆಯವರಷ್ಟೇ ದುಃಖದಲ್ಲಿ ಮುಳುಗಿದ್ದ ಅವರ ಗನ್ ಮ್ಯಾನ್ ಚಲಪತಿ ಅವರು ಈಗ ಗಟ್ಟಿ ನಿರ್ಧಾರ ಮಾಡಿ ಊರು ಬಿಟ್ಟಿದ್ದಾರೆ.

ತನ್ನನ್ನು ಎಂದಿಗೂ ಗನ್ ಮ್ಯಾನ್ ನಂತೆ ನೋಡದ ಅಪ್ಪು ಅವರು ತಮ್ಮನಂತೆ  ನೋಡ್ತಿದ್ದರು. ಅವರ ದೇವರಿಗೆ ಸಮಾನವಾದ ವ್ಯಕ್ತಿ. ಅಂತಹವರನ್ನೇ ಕಳೆದುಕೊಂಡ ಮೇಲೆ ಇಲ್ಲಿ ನನಗಿನ್ನೇನೂ ಕೆಲಸವಿಲ್ಲ. ಅಪ್ಪು ಅಗಲಿಕೆಯ ನೋವಿನಲ್ಲೇ  ಸುಮಾರು 6 ತಿಂಗಳು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಳಿ ಕೆಲಸ ಮಾಡಿದ್ದರು. ಕಳೆದ ತಿಂಗಳು ಕೆಲಸ ಬಿಟ್ಟ ಚಲಪತಿ ಅವರು ಇದೀಗ ಊರು ಸೇರಿದ್ದಾರೆ. ಚಲಪತಿ ಸದ್ಯ ಕೋಲಾರದ ಬಂಗಾರಪೇಟೆಯಾದ ತಮ್ಮ ಊರಿನಲ್ಲಿ ಅಪ್ಪು ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ.  


ಪುನೀತ್ ರಾಜ್ ಕುಮಾರ್ ಅವರಿಗೆ ದೇವರ ಸ್ಥಾನ ಕೊಟ್ಟಿರುವ ಚಲಪತಿ ಅವರು ಇನ್ಯಾವ ಸ್ಟಾರ್ ಗೂ ಗನ್ ಮ್ಯಾನ್ ಆಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅಲ್ಲದೇ ಬೇರೆಯವರ ಜೊತೆಗೆ ಕೆಲಸ ಮಾಡಿದರೆ, ಅಪ್ಪು ಸರ್ ನನ್ನು ಮರೆಯುವ ಭಯವಿದೆ. ದೇವರ ಜೊತೆಗೆ ಇದ್ದ ನನಗೆ ಇನ್ನೇನೂ ಬೇಕಿಲ್ಲ. ಆದರೆ ಮುಂದೆ ಬಿಸಿನೆಸ್ ಅನ್ನು ಮಾಡುವ ಯೋಚನೆ ಇದೆ. ಮುಂದಿನ ತಿಂಗಳು ಈ ಬಗ್ಗೆ ಡಿಸೈಡ್ ಮಾಡುತ್ತೇನೆ. ಆದರೆ, ಸದ್ಯ ಯಾವ ಕೆಲಸವೂ ಇಲ್ಲದೇ ಊರಿನಲ್ಲಿದ್ದೇನೆ ಎಂದು ಭಾವುಕವಾಗಿ ಮಾತನಾಡಿದ್ದಾರೆ.