ಅಪ್ಪು ವಿಚಾರಕ್ಕೆ ದರ್ಶನ್ ಕ್ಷಮೆ ಕೇಳಬೇಕು ಎಂದ ಪುನೀತ್ ಫ್ಯಾನ್ಸ್ ಕೆಂಡಾಮಂಡಲ..! ಅಸಲಿಗೆ ಆಗಿದ್ದೇನು..?

By Infoflick Correspondent

Updated:Sunday, August 7, 2022, 20:32[IST]

ಅಪ್ಪು ವಿಚಾರಕ್ಕೆ ದರ್ಶನ್ ಕ್ಷಮೆ ಕೇಳಬೇಕು ಎಂದ ಪುನೀತ್ ಫ್ಯಾನ್ಸ್ ಕೆಂಡಾಮಂಡಲ..! ಅಸಲಿಗೆ ಆಗಿದ್ದೇನು..?

ಕನ್ನಡದ ಅಪ್ಪಟ ನಟ ಅಭಿಮಾನಿಗಳ ಆರಾಧ್ಯ ದೈವ ಹಾಗೂ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡು ಸರಳತೆ ಹೊಂದಿದ್ಸು ಸರಳವಾದ ವ್ಯಕ್ತಿತ್ವದಿಂದ ಮೆರೆದ ರಾಜ್ ಕುಟುಂಬದ ಅಪ್ಪು ಅವರ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಈಗಾಗಲೇ ಅವರು ದೇವರಾಗಿದ್ದಾರೆ. ಇಂದು ನಟ ದರ್ಶನ್ ಅವರು ಕ್ರಾಂತಿ ಸಿನಿಮಾ ವಿಚಾರವಾಗಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದರು. ಅದರ ಸಂದರ್ಶನದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ದರ್ಶನ್ ಅವರ ವಿರುದ್ಧವಾಗಿ ಅವರ ಚಿತ್ರ ಕ್ರಾಂತಿ ವಿರುದ್ಧವಾಗಿ ಇದೀಗ ಹೊಸಪೇಟೆ ಜನತೆಯ ಒಂದು ಗುಂಪಿನ ವಿಡಿಯೋ ಭಾರಿ ವೈರಲಾಗುತ್ತಿದೆ. ನಟ ದರ್ಶನ್ ಅಭಿಮಾನಿಗಳು ಹಾಗೂ ದರ್ಶನ್ ಅವರು ಅಪ್ಪು ಅವರಿಗೆ ಕ್ಷಮೆ ಕೇಳಬೇಕು, ಅಪ್ಪು ಅಭಿಮಾನಿಗಳ ಬಳಿ ಕ್ಷಮೆಯನ್ನು ಯಾಚಿಸಬೇಕು ಎಂದು ತಾಕಿತು ಮಾಡಿದ್ದಾರೆ.

ಹೌದು, ಅಸಲಿಗೆ ಆಗಿದ್ದೆ ಬೇರೆ. ಅಪ್ಪು ಅವರಿಗೆ ಗೌರವ ನೀಡದೆ ಮಾತನಾಡಿದ್ದಾರೆ ದರ್ಶನ್ ಎನ್ನಲಾಗಿ ಇವರು ಹೇಳುತ್ತಿದ್ದಾರೆ. ಅಪ್ಪು  ತೀರಿ ಕೊಂಡಾಗ ಸಿಕ್ಕ ಗೌರವ ನನಗೆ ಈಗಲೇ ಸಿಕ್ಕಿದೆ ಎಂಬಂತೆ ದರ್ಶನ್ ಮಾತನಾಡಿದ್ದಾರೆ ಎಂದು ಹೊಸಪೇಟೆಯ ಕೆಲ ಅಭಿಮಾನಿಗಳು ಮಾಧ್ಯಮದ ಮುಂದೆ ಬಂದಿದ್ದಾರೆ. ಹೌದು ಈ ವಿಚಾರವಾಗಿ ಅವರು ಮಾತನಾಡಿದ್ದು ಅಪ್ಪು ಅವರ ಸಮಾನತೆ ಇಲ್ಲ ದರ್ಶನ್, ಅವರು ಎಷ್ಟು ಮಾಡಿ ಹೋಗಿದ್ದಾರೆ, ಅವರನ್ನು ನಾವು ಕಳೆದುಕೊಂಡು ಎಷ್ಟು ನೋವಿನಲ್ಲಿ ಇದ್ದೇವೆ ಅಂತಹದರಲ್ಲಿ ಹೀಗೆ ಬೇಕಾಬಿಟ್ಟಿ ಅಪ್ಪು ಅವರ ಬಗ್ಗೆ ಮಾತನಾಡುವುದು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆ ಒಂದು ವೇಳೆ ದರ್ಶನ್ ಅವರು ಅಪ್ಪುಗೆ ಅಪ್ಪು ಅಭಿಮಾನಿಗಳಿಗೆ ಕ್ಷಮೆ ಯಾಚಿಸದೆ ಇದ್ದಲ್ಲಿ, ಅವರ ಮುಂದಿನ ಕ್ರಾಂತಿ ಚಿತ್ರವನ್ನ ನಾವು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ಬಿಡುವುದೇ ಇಲ್ಲ ಎಂದಿದ್ದಾರೆ. 

ಅದೇನೆ ಆಗಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದಿದ್ದಾರೆ ಎಂದು ತಿಳಿದುಬಂದಿದೆ. ಅಸಲಿಗೆ ಅಪ್ಪು ಅವರ ಬಗ್ಗೆ ನಮ್ಮ ದರ್ಶನ್ ಅವರು ಏನು ಕೆಟ್ಟದಾಗಿ ಮಾತನಾಡಿಲ್ಲ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಕ್ರಾಂತಿ ಸಿನಿಮಾ ವಿಚಾರವಾಗಿ ಸಂದರ್ಶನ ಕೊಟ್ಟ ವಿಡಿಯೋದಲ್ಲಿ ಅಪ್ಪು ಅವರು ಇಲ್ಲವಾದ ಬಳಿಕ ಅದೆಷ್ಟು ಪ್ರೀತಿಯ ತೋರಿದರು,  ಅಭಿಮಾನಿಗಳು ಅದೆಷ್ಟು ಕಣ್ಣೀರು ಹಾಕಿದರು, ಅವರ ನೆನೆದು, ಜೊತೆಗೆ ಅವರನ್ನು ನೆನೆದು ಅವರೊಟ್ಟಿಗೆ ನಿಂತರು ಅದೇ ರೀತಿ ನಮ್ಮ ಸಿನಿಮಾಗೆ ಕ್ರಾಂತಿ ಜೊತೆ ನಿಂತಿದ್ದಾರೆ. ಆ ಋಣವನ್ನು ನಾವು ತೀರಿಸಲು ಆಗುವುದಿಲ್ಲ. ನಮಗೆ ನಮ್ಮ ಅಭಿಮಾನಿಗಳೇ ದೇವರು ಎಂದು ನಟ ದರ್ಶನ್ ಅವರು ಮೆಲುಕು ಹಾಕಿದರು ಅಷ್ಟೇ. ಅದೇ ನಿಟ್ಟಿನಲ್ಲಿ ಇದೀಗ ಈ ಸುದ್ದಿ ಹೇಳಿ ಬಂದಿದೆ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ದರ್ಶನ್ ಅವರು ನಿಜಕ್ಕೂ ತಪ್ಪು ಮಾತನಾಡಿದ್ರಾ, ಅಥವಾ ಇಲ್ಲವಾ ಎಂದು ನೀವು ಕಮೆಂಟ್ ಮೂಲಕ ಹೇಳಿ ಧನ್ಯವಾದಗಳು...