Puneeth Rajkumar : ಪುನೀತ್ ರಾಜ್ ಕುಮಾರ್ ಫುಡ್ ಡೆಲಿವರಿ ಮಾಡುವ ಹುಡುಗರಿಗೂ ಎಷ್ಟು ಮರ್ಯಾದೆ ಕೊಡುತ್ತಿದ್ದರು ನೋಡಿ
Updated:Tuesday, May 17, 2022, 17:13[IST]

ಸದಾ ಎಲ್ಲರನ್ನೂ ಪ್ರೀತಿಸುತ್ತಿದ್ದ ವ್ಯಕ್ತಿ ಪುನೀತ್ ರಾಜ್ ಕುಮಾರ್. ಅಪ್ಪು ಅವರು ತಪ್ಪು ಮಾಡಿದ ವ್ಯಕ್ತಿ ಎಂದು ಹೇಳಲು ಸಾಧ್ಯವೇ ಇಲ್ಲ. ಪುನೀತ್ ರಾಜ್ ಕುಮಾರ್ ಅವರು ಸಾವನ್ನಪ್ಪಿದಾಗಿನಿಂದ ಇಂದಿನವರೆಗೂ ಅವರ ಬಗ್ಗೆ ಒಂದಲ್ಲಾ ಒಂದು ವಿಚಾರಗಳು ಹೊರ ಬರುತ್ತಿವೆ. ಗ್ರಂಥದಂತೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ವಿಚಾರಗಳು ಹೇಳಿದರೂ ಮುಗಿಯದು. ದಿನ ದಿನಕ್ಕೂ ಅಪ್ಪು ಅವರ ವಿಚಾರಗಳನ್ನು ಅಭಿಮಾನಿಗಳು ಹೇಳುತ್ತಲೇ ಇದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಅವರ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪುನೀತ್ ರಾಜ್ ಕುಮಾರ್ ಅವರು ದೊಡ್ಡ ಸ್ಟಾರ್ ಆದರೂ ಕೂಡ, ಚಿಕ್ಕ ಮಕ್ಕಳಿಗೂ ಗೌರವ ಕೊಡುತ್ತಿದ್ದರು. ತುಂಬಾ ಸಿಂಪಲ್ ಆಗಿ ಬದುಕುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ತಮ್ಮ ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು ಯಾರೇ ಬಂದು ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. ಯಾರನ್ನೂ ನೀ ಕೀಳು, ನಾ ಮೇಲು ಎಂಬ ರೀತಿಯಲ್ಲಿ ನೋಡುತ್ತಿರಲಿಲ್ಲ. ರಸ್ತೆಯಲ್ಲಿ ಕಸ ಗುಡಿಸುವವರು, ಕಸ ಆಯುವವರು ಯಾರೇ ಆದರೂ ಅವರಿಗೆ, ಅವರು ಮಾಡುವ ಕೆಲಸಕ್ಕೆ ಗೌರವ ಕೊಟ್ಟು, ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ಇನ್ನು ಪುನೀತ್ ರಾಜ್ ಕುಮಾರ್ ಅವರು ಝೊಮ್ಯಾಟೋ ಅವರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಝೊಮ್ಯಾಟೋ ಡೆಲಿವರಿ ಬಾಯ್ ಗಳು ತಮ್ಮ ಕೆಲಸದಲ್ಲಿನ ತೊಂದರೆಗಳನ್ನು ಹೇಳಿಕೊಂಡರು. ಫುಡ್ ಡೆಲಿವರಿ ಮಾಡುವುದು ತಡವಾದರೆ, ಮಳೆ, ಟ್ರಾಫಿಕ್ ಗಳಲ್ಲಿ ಸಿಕ್ಕಾಕಿಕೊಂಡರೆ ತೊಂದರೆಯಾಗುತ್ತದೆ. ತಮಗೆ ಯಾವುದೇ ಸೇಫ್ಟಿ ಇಲ್ಲ. ಆದರೆ ಕಸ್ಟಮರ್ ಗಳಿಗೆ ತಾಳ್ಮೆಯೇ ಇರುವುದಿಲ್ಲ. ತುಂಬಾನೇ ಪ್ರಾಬ್ಲಮ್ಸ್ ಗಳಾಗುತ್ತಿವೆ ಎಂದಾಗ ಪನೀತ್ ರಾಜ್ ಕುಮಾರ್ ಅವರು ಆಡಿದ ಮಾತುಗಳು ಈಗ ಎಲ್ಲೆಡೆ ವಯರಲ್ ಆಗಿವೆ. ನಮ್ಮ ದೇಶದಲ್ಲಿ ನಾವು ಮೊದಲು ಎಲ್ಲರಿಗೂ ಗೌರವ ಕೊಡುವುದನ್ನು ಕಲಿಯಬೇಕು. ತಾಳ್ಮೆಯಿಂದ ಇರಬೇಕು. ಟಿಪ್ಸ್ ಕೊಡುವುದರಲ್ಲಿ ಅಲ್ಲ. ನಾವ ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದಿದ್ದಾರೆ.
(video credit : kannada pichhar )