Puneeth Rajkumar : ಸಚಿವರ ಕಚೇರಿಯಲ್ಲಿ ಪುನೀತ್ ಜಾಕೇಟ್ ಏಕೆ ? ಏನು ಇದರ ವಿಶೇಷತೆ

By Infoflick Correspondent

Updated:Saturday, June 25, 2022, 19:35[IST]

Puneeth Rajkumar :  ಸಚಿವರ ಕಚೇರಿಯಲ್ಲಿ ಪುನೀತ್ ಜಾಕೇಟ್ ಏಕೆ ?  ಏನು ಇದರ ವಿಶೇಷತೆ

ಪುನೀತ್ ರಾಜ್​ಕುಮಾರ್​ ನಮ್ಮನ್ನು ಅಗಲಿ 6 ತಿಂಗಳ ಕಳೆದರೂ ಅಭಿಮಾನಿಗಳ ಮನದಲ್ಲಿನ ನೋವು ಮಾತ್ರ ಇನ್ನೂ ಕರಗಿಲ್ಲ. ಅಪ್ಪು ನೆನಪಲ್ಲೇ ಇದ್ದಾರೆ. ಅವರ ಹಲವರು ಪುನೀತ್​ರ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ, ಕೆಲವರು ಅಪ್ಪು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಇದೀಗ ಅಭಿಮಾನಿಯೊಬ್ಬ ಪುನೀತ್ ಧರಿಸಿದ್ದ ಜಾಕೆಟ್ ಅನ್ನು ಫ್ರೇಮ್ ಹಾಕಿಸಿ ಗೋಡೆಯ ಮೇಲಿಟ್ಟಿದ್ದಾರೆ. ಇದೀಗ ಸಚಿವರೊಬ್ಬರ ಕಚೇರಿಯಲ್ಲಿ ಪುನೀತ್​ರ ಜಾಕೆಟ್​ಗೆ ಫೋಟೋ ಫ್ರೇಮ್​ ಹಾಕಿಸಿ ಇಡಲಾಗಿದೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ    

ಅರಸು' ಸಿನಿಮಾದಲ್ಲಿ ಪುನೀತ್​ರಾಜ್​ಕುಮಾರ್​ ಅವರು ಧರಿಸಿದ್ದ ಜಾಕೆಟ್​ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಫೋಟೋ ಫ್ರೇಮ್​ ಹಾಕಿಸಿ ಅಪ್ಪನ ಕಚೇರಿಯಲ್ಲಿ ಇಟ್ಟಿದ್ದಾರೆ.ಅರಸು ಸಿನಿಮಾದಲ್ಲಿ ತಾನು ಧರಿಸಿದ್ದ ಜಾಕೆಟ್​ ಅನ್ನು ಪುನೀತ್​ ಅವರು ಅಂದು ತನ್ನ ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವಗೆ ಕೊಟ್ಟಿದ್ದರು. ಕಿಚಡಿ ವಿಶ್ವ, ಆ ಜಾಕೆಟ್​ ಅನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಅಪ್ಪು ಕೊಟ್ಟಿದ್ದ ಜಾಕೆಟ್ ಅನ್ನು ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಕಿಚಡಿ ವಿಶ್ವ ನೀಡಿದ್ದು, ಜಾಕೆಟ್​ಗೆ ಫೋಟೋ ಪ್ರೇಮ್​ ಹಾಕಿಸಿ ಅಪ್ಪನ ಕಚೇರಿಯಲ್ಲಿ ಮಗ ಇಟ್ಟಿದ್ದಾರೆ. 

ವಿಶ್ವನಿಗೆ ಕೊಟ್ಟ ಜಾಕೆಟ್ ನ್ನು ಪುನೀತ್ ಪುತ್ಥಳಿ ಅನಾವರಣ ವೇಳೆ ಸಿದ್ಧಾರ್ಥ್ ಸಿಂಗ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಸಿದ್ದಾರ್ಥ ಸಿಂಗ್ ಅದನ್ನು ಫ್ರೇಮ್ ಮಾಡಿಸಿ ತಂದೆಯ ಕಚೇರಿಯಲ್ಲಿ ಹಾಕಿಸಿದ್ದಾರೆ.