ನೀವೂ ನೋಡಿರದ ಅಪ್ಪು ಮಾಡಿದ್ದ ಕುಂಗ್ ಫು ಸಾಹಸ ದೃಶ್ಯಗಳು..! ಈಗ ಎಲ್ಲೆಡೆ ವೈರಲ್
Updated:Thursday, March 24, 2022, 12:41[IST]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಎಲ್ಲಾ ಕೆಲಸಗಳಲ್ಲಿಯೂ ಹೆಚ್ಚು ಮುಂದಿರುತ್ತಿದ್ದರು. ಹೊಸತನದ ಕೆಲಸಗಳನ್ನು ಸದಾ ಯುವಕರಿಗೆ ಪ್ರೇರೇಪಿತವಾಗುವಂತೆ ಮಾಡುತ್ತಿದ್ದರು. ಹೌದು ಪವರ್ ಸ್ಟಾರ್ ಪುನೀತ್ ಅವರು ಕೇವಲ ತೆರೆ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಒಬ್ಬ ಮನುಷ್ಯ ಹೇಗೆ, ಯಾವ ರೀತಿ ಜನರ ಕಷ್ಟಗಳಿಗೆ ಸ್ಪಂದಿಸಿ ಒಳ್ಳೆ ಮನುಷ್ಯತ್ವ ಉಳಿಸಿಕೊಳ್ಳಬೇಕು, ಸದಾ ಇನ್ನೊಬ್ಬರಿಗೆ ಕಷ್ಟ ಎಂದವರಿಗೆ ಸಹಾಯ ಮಾಡುವ ಮನಸ್ಸನ್ನು ಸಹ ಹೊಂದಿರಬೇಕು ಎಂದು ಎಲ್ಲರಿಗೂ ಸ್ಪೂರ್ತಿಯಾಗುವಂತೆ ಬದುಕಿ ಹೋಗಿದ್ದಾರೆ. ಅವರು ಬದುಕಿದ್ದಾಗ ಅವರ ಬಗ್ಗೆ ಹೆಚ್ಚು ಜನರಿಗೆ ಅವರು ಮಾಡಿದಂತಹ ಸಹಾಯ ಗಮನಕ್ಕೆ ಬರಲಿಲ್ಲ. ಅವರು ಮಾಡಿದ ಸಹಾಯ ಹೊರಗಡೆ ಎಲ್ಲೂ, ಯಾರಿಗೂ ಗೊತ್ತಾಗದ ಹಾಗೇನೇ ಹೆಚ್ಚು ಮಾಡಿದ್ದಾರೆ.
ಹೌದು ಪುನೀತ್ ರಾಜಕುಮಾರ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅವರು ತುಂಬಾ ಆಸಕ್ತಿದಾಯಕ ನಟ. ಯಾರು ಮಾಡದ ರೀತಿ, ನಾನು ಏನಾದರೂ ಮಾಡಬೇಕು ಸಿನಿಮಾ ನೋಡಲು ಬರುವ ಅಭಿಮಾನಿಗಳು ಇಲ್ಲ ಕಣಯ್ಯ ಯಾರು ಮಾಡದ್ದನ್ನು ಇವನು ಮಾಡುತ್ತಿದ್ದಾನೆ, ದುಡ್ಡು ಕೊಟ್ಟು ಸಿನಿಮಾ ನೋಡಿದ್ದಕ್ಕೂ ಮೋಸ ಆಗಲಿಲ್ಲ ಎಂದು ಸಿನಿಮಾ ಎಂಜಾಯ್ ಮಾಡಿ ಹೋಗಬೇಕು ಎಂದು ಅಪ್ಪು ಅವರೇ ಈ ಮುಂಚೆಯ ಸಂದರ್ಶನೋಂದರಲ್ಲಿ ಹೇಳಿದ್ದರು. ಅದೇ ರೀತಿ ಸಿನಿಮಾದಲ್ಲಿ ರಿಯಲ್ ಸ್ಟಂಟ್ ಮತ್ತು ಫೈಟ್ ಗಳನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದು ಇದೆ ನಮ್ಮ ಅಪ್ಪು.
ಅವರು ಬದುಕಿದ್ದಾಗ ಕುಂಗ್ ಫು ವಿದ್ಯೆಯನ್ನು ಕಲಿತ ಒಂದು ಪ್ರಾಕ್ಟೀಸ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪುನೀತ್ ಅವರು ಎಷ್ಟು ಅದ್ಭುತವಾಗಿ ಅಂದು ಕುಂಗ್ ಫು ಪ್ರಾಕ್ಟಿಸ್ ಮಾಡಿದ್ದರು ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ಹಾಗೆ ಇಂತಹ ಮುತ್ತು ಮತ್ತೊಂದು ಸಿಗಲು ಸಾಧ್ಯವೇ ಇಲ್ಲ ಕನ್ನಡ ನಾಡಿಗೆ ಎಂದೆನಿಸುತ್ತದೆ. ಈ ವಿಡಿಯೋ ನೋಡಿ. ಹಾಗೆ ಪುನೀತ್ ಮಾಡಿರುವ ಈ ಕುಂಗ್ ಫು ಪ್ರಾಕ್ಟಿಸ್ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..