ಕೆಜಿಎಫ್ ಮುಂಚೆಯೇ ನಟ ಅಪ್ಪು ಜೊತೆ ಪ್ರಶಾಂತ್ ನೀಲ್ ಸಿನಿಮಾ ಬರಬೇಕಿತ್ತಂತೆ..! ಶಾಕಿಂಗ್ ಹೇಳಿಕೆ ಕೊಟ್ಟ ನೀಲ್

By Infoflick Correspondent

Updated:Tuesday, April 12, 2022, 18:45[IST]

ಕೆಜಿಎಫ್ ಮುಂಚೆಯೇ ನಟ ಅಪ್ಪು ಜೊತೆ ಪ್ರಶಾಂತ್ ನೀಲ್ ಸಿನಿಮಾ ಬರಬೇಕಿತ್ತಂತೆ..! ಶಾಕಿಂಗ್ ಹೇಳಿಕೆ ಕೊಟ್ಟ ನೀಲ್

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆಜಿಎಫ್ ಮೂಲಕ ಇಡೀ ದೇಶಕ್ಕೆ ನಿರ್ದೇಶಕರ ಗತ್ತನ್ನು ತೋರಿಸಿದ ಪ್ರಶಾಂತ್ ನೀಲ್ ಅವರು ಇದೀಗ ತುಂಬಾ ಸುದ್ದಿಯಲ್ಲಿದ್ದಾರೆ. ಉಗ್ರಂ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಆರಂಭ ಮಾಡಿದ ಪ್ರಶಾಂತ್ ನೀಲ್ ಅವರು ಆರಂಭದಲ್ಲಿ ತುಂಬಾ ಏರು ಪೇರು ಕಂಡವರು, ಹಾಗೆ ಹೆಚ್ಚು ಕಷ್ಟಗಳನ್ನು ಅನುಭವಿಸಿದರು. ಈ ಚಿತ್ರರಂಗದಲ್ಲಿ ಬೆಳೆಯಲು ಬೇಕಾದ ಎಲ್ಲಾ ಕ್ವಾಲಿಟಿಸ್ ಇದ್ದರೂ ಕೂಡ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅವರು ಅಂದುಕೊಂಡಷ್ಟು ಸುಲಭವಾಗಿ ಸಿನಿಮಾ ದಾರಿ ಸುಲಭವಾಗಿರಲಿಲ್ಲ. ತುಂಬಾನೇ ಕಷ್ಟಗಳನ್ನು ಎದುರಿಸಿ ಉಗ್ರಂ ಸಿನಿಮಾ ತೆರೆಯ ಮೇಲೆ ತಂದಿದ್ದರು.

ಇದಾದ ಬಳಿಕ ನಟ ಯಶ್ ಅವರ ಜೊತೆ ಕೆಜಿಎಫ್ ಚಿತ್ರದ ಪ್ರಾಜೆಕ್ಟ್ ಕೈಗೆತ್ತಿಕೊಂಡು ಕೆಜಿಎಫ್ ಮೊದಲ ಭಾಗದ ಮೂಲಕ, ದೇಶಕ್ಕೆ ಮಾತ್ರ ಅಲ್ಲದೆ ಇಡೀ ವಿಶ್ವಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಎಂಬುದಾಗಿ ತಮ್ಮನ್ನು ತಾವು ಗುರುತಿಸಿಕೊಂಡವರು. ಹಾಗೆ ಕನ್ನಡ ಸಿನಿರಂಗದ ಶಕ್ತಿ ಏನು ಎಂಬುದಾಗಿ ತೋರಿಸಿದವರು. ಹೌದು ಇದೀಗ ಕೆಜಿಎಫ್ ಎರಡನೇ ಭಾಗ ತೆರೆಗೆ ಬರಲು ಸಿದ್ಧ ಆಗಿದೆ. ಹೀಗಿರುವಾಗ ನಿರ್ದೇಶಕ ಪ್ರಶಾಂತ್ ಅವರು ಇತ್ತೀಚಿಗೆ ಸಂದರ್ಶನದಲ್ಲಿ ಒಂದು ಅಚ್ಚರಿ ವಿಚಾರವನ್ನು ತಿಳಿಸಿದ್ದಾರೆ. ಕೆಜಿಎಫ್ ಬರುವ ಮುನ್ನವೇ ನಾವು ಅಪ್ಪು ಅವರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದೆವು. ನಮ್ಮ ಮತ್ತು ಅವರ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಬರುವುದರಲ್ಲಿತ್ತು. ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ಬೇರೆ ಸಿನಿಮಾ ಪ್ರಾಜೆಕ್ಟ್ಗಳು ಹಾಗೂ ತಮಿಳು ನಿರ್ದೇಶಕನ ಕಮಿಟ್ಮೆಂಟ್ ಇದ್ದ ಕಾರಣಕ್ಕಾಗಿ ಸಿನಿಮಾ ಮಾಡಲು ಆಗಲಿಲ್ಲ ಎಂದಿದ್ದಾರೆ. 

ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್ ಅವರು. ಹೌದು ಇವರ ನಿರ್ದೇಶನದಲ್ಲಿ ಅಪ್ಪು ಅವರ ಅಭಿನಯ ನಾವು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...