ಪುನೀತ್ ಅವರ ಆತ್ಮಕ್ಕೆ ಮರು ಹುಟ್ಟು ಯಾವಾಗ..? ಖ್ಯಾತ ಜ್ಯೋತಿಷಿ ರವೀಂದ್ರ ಐರೋಡಿ ಮಾತು ಸತ್ಯ ಆಗುತ್ತ..?

By Infoflick Correspondent

Updated:Monday, March 21, 2022, 08:46[IST]

ಪುನೀತ್ ಅವರ ಆತ್ಮಕ್ಕೆ ಮರು ಹುಟ್ಟು ಯಾವಾಗ..? ಖ್ಯಾತ ಜ್ಯೋತಿಷಿ ರವೀಂದ್ರ ಐರೋಡಿ ಮಾತು ಸತ್ಯ ಆಗುತ್ತ..?

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕರ್ನಾಟಕದ ಮನೆ ಮಗ. ಅಣ್ಣಾವ್ರ ಕುಟುಂಬದ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ಇದೀಗ ನಮ್ಮ ಜೊತೆ ನೆನಪಾಗಿ ಉಳಿದಿದ್ದಾರೆ. ಪುನೀತ್ ಅವರ ಅಕಾಲಿಕ ಮರಣದಿಂದ ಅವರ ಅಗಲಿಕೆಯಿಂದ ಈಗಲೂ ಕೂಡ ಅಭಿಮಾನಿಗಳು ಕಣ್ಣೀರಿಡುತ್ತಲೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ಅವರ ಪ್ರೀತಿಯ ಅಭಿಮಾನಿಗಳಿಗೆ ಬಂದೊದಗಿದೆ. ನಟ ಪುನೀತ್ ಅವರು ಈಗಾಗಲೇ ನಮ್ಮನ್ನು ದೈಹಿಕವಾಗಿ ಅಗಲಿ ನಾಲ್ಕು ತಿಂಗಳು ಮೇಲಾಗಿದೆ. ಈಗಲೂ ಕೂಡ ಅಪ್ಪು ಅಗಲಿಕೆಯ ನೆನೆಸಿಕೊಂಡರೆ ಕಣ್ಣೀರು ತನ್ನಂತಾನೇ ಜಾರುತ್ತದೆ. ನಿಜ ಜೀವನದಲ್ಲಿ ಎಲ್ಲ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಿ ಅದೆಷ್ಟೋ ಜನರಿಗೆ ಬೆಳಕಾಗಿ, ಅನಾಥಾಶ್ರಮ, ವೃದ್ಧಾಶ್ರಮ, ಮಕ್ಕಳ ವಿದ್ಯಾಭ್ಯಾಸ, ಗೋಶಾಲೆ ಹೀಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಸೇವೆಯನ್ನು ಮಾಡಿ ಹೋಗಿದ್ದಾರೆ.

ಅಂತಹ ದೇವರಂತಹ ವ್ಯಕ್ತಿ ಇದೀಗ ನಮ್ಮ ಜೊತೆಗೆ ಇಲ್ಲ. ಅವರ ಅಗಲಿಕೆಯ ಬಳಿಕ ಅವರ ಅಭಿಮಾನಿಗಳು ಎಂತಹ ದೇವರ ಜೊತೆ ನಾವೆಲ್ಲರೂ ಇದ್ದೆವು ಎಂಬುದಾಗಿ ಪ್ರತಿದಿನ ಅವರ ಎದೆಯಲ್ಲಿ ಅಪ್ಪು ಅವರನ್ನ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಹೌದು ಪುನೀತ್ ರಾಜಕುಮಾರ್ ಅವರ ಚಿತ್ರ ಜೇಮ್ಸ್ ಈಗಾಗಲೇ ಥಿಯೇಟರ್ನಲ್ಲಿ ರಾರಾಜಿಸುತ್ತಿದ್ದು, ಇವರ ಅಗಲಿಕೆ ಸಂದರ್ಭದಲ್ಲಿ ಒಬ್ಬ ಖ್ಯಾತ ಜ್ಯೋತಿಷಿ ಅಪ್ಪು ಆತ್ಮ ಮರುಜನ್ಮದ ಬಗ್ಗೆ ಮಾತನಾಡಿದ್ದರು. ಅದರ ವಿಡಿಯೋ ಈಗಲೂ ಕೂಡ ಹೆಚ್ಚು ವೈರಲ್ ಆಗುತ್ತಿದೆ. ಈ ಖ್ಯಾತ ಜ್ಯೋತಿಷ್ಯ ತಜ್ಞರಾದ ರವೀಂದ್ರ ಐರೋಡಿ ಅವರು ಪುನೀತ್ ಅವರ ಆತ್ಮಕ್ಕೆ ಮರುಹುಟ್ಟು ಇದೆ ಎಂಬುದಾಗಿ ಹೇಳಿದ್ದಾರೆ. ಈ ಹಿಂದೆ ಹೇಳಿದ ಹಾಗೆ ಪುನೀತ್ ರಾಜ್ ಕುಮಾರ್ ಮತ್ತೆ ಮರಳಿ ಹುಟ್ಟಿ ಬರಬೇಕಾದರೆ ಅವರು ಕಾಯಬೇಕು. ಅವರ ಆತ್ಮ ಮರುಹುಟ್ಟು ಆಗಬೇಕಾದರೆ ಕಾಯಬೇಕು.

ಕಳೆದ ನವಂಬರ್ 24 ಮೇ ವರೆಗೂ ಅಪ್ಪು ಆತ್ಮ ಮರುಜನ್ಮ ಪಡೆಯಲು ಸಾಧ್ಯವಿಲ್ಲ ಎಂದಿದ್ದರು ಈ ಜ್ಯೋತಿಷ್ಯ ತಜ್ಞರು. ಹೌದು ಪುನೀತ್ ರಾಜ್ಕುಮಾರ್ ಅವರು ಅವರ ಗೊತ್ತಿರುವ ಕುಟುಂಬದವರ ಮನೆಯಲ್ಲಿಯೇ ಹುಟ್ಟುವ ಸಾಧ್ಯತೆ ಇದೆ. ಹಾಗೆ ಈ ಆತ್ಮಗಳನ್ನು ಕಂಟ್ರೋಲ್ ಮಾಡುವುದು ಯಾರ ಕೈಯಿಂದಲೂ ಸಾಧ್ಯವಿಲ್ಲ, ಅದು ಪ್ರಾರಬ್ಧ ಕರ್ಮದಿಂದ ಮಾತ್ರ ಸಾಧ್ಯ ಎಂದಿದ್ದರು ಈ ಜ್ಯೋತಿಷ್ಯ ತಜ್ಞರು. ಪುನೀತ್ ಅವರ ಬಗ್ಗೆ ಮಾತನಾಡಿದ ಈ ಜ್ಯೋತಿಷ್ಯ ರವೀಂದ್ರ ಅವರ ಮಾತುಗಳನ್ನು ಕೇಳಿದ ಅಭಿಮಾನಿಗಳು ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೂಡ ಮಾಡಿದ್ದಾರೆ. ಅಸಲಿಗೆ ಈ ರವೀಂದ್ರ ಅವರು ಪುನೀತ್ ಅವರ ಆತ್ಮದ ಮರುಜನ್ಮದ ಬಗ್ಗೆ ಹೇಳಿದ್ದೇನು ಗೊತ್ತಾ..? ಈ ವಿಡಿಯೋ ನೋಡಿ. ಜೀವನದಲ್ಲಿ ಒಬ್ಬ ಮನುಷ್ಯ ಸತ್ತರೆ ಆತನ ಆತ್ಮ ಎಲ್ಲಿ ಹೋಗುತ್ತದೆ. ಯಾವ ರೀತಿ ಮರಳಿ ಜನ್ಮ ಪಡೆಯುತ್ತದೆ.  

ಆತನ ಆತ್ಮ ಯಾರಲ್ಲಿ ಸೇರುತ್ತದೆ ಎನ್ನುವ ಯಾವ ಅಂಶ ಕೂಡ ಯಾರ ಗಮನಕ್ಕೆ ಬರುವುದಿಲ್ಲ. ಅದೆಲ್ಲಾ ದೇವರಿಗೆ ಮಾತ್ರ ಗೊತ್ತು. ಹೌದು ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.(video credit; udayavani)..