ಬಿಡುಗಡೆಯಾಗುತ್ತಿರುವ ಈ ಸಿನೆಮಾದಲ್ಲಿ ನಟಿಸಬೇಕಿತ್ತಂತೆ ಪುನೀತ್ ರಾಜ್‍ಕುಮಾರ್

By Infoflick Correspondent

Updated:Thursday, September 22, 2022, 10:04[IST]

ಬಿಡುಗಡೆಯಾಗುತ್ತಿರುವ ಈ ಸಿನೆಮಾದಲ್ಲಿ ನಟಿಸಬೇಕಿತ್ತಂತೆ ಪುನೀತ್ ರಾಜ್‍ಕುಮಾರ್

ಪುನೀತ್ ರಾಜ್‌ಕುಮಾರ್ ಅವರಿಗಾಗಿ ಎಂದ ಬರೆದ ಅದೆಷ್ಟೋ ಚಿತ್ರಕತೆಗಳು ಈಗಲೂ ನಿರ್ದೇಶಕರುಗಳ ತಲೆಯಲ್ಲಿ ಕೂತಿವೆ, ಕೆಲವು ಬೇರೆ ನಟರೊಟ್ಟಿಗೆ ಸಿನಿಮಾ ಸಹ ಆಗಿವೆ. ಅಂಥಹಾ ಸಿನಿಮಾಗಳಲ್ಲಿ 'ಕಾಂತಾರ' ಸಹ ಒಂದು. ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿರುವ 'ಕಾಂತಾರ' ಸಿನಿಮಾದಲ್ಲಿ ನಟ ಪುನೀತ್ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಬೇಕಿತ್ತು. !

ಈ ವಿಷಯವನ್ನು ಹೊಂಬಾಳೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ತಿಳಿಸಿದ್ದಾರೆ.

ಕಾರ್ತಿಕ್ ಗೌಡ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ಪ್ರಶ್ನೋತ್ತರ ಸೆಷನ್ ನಡೆಸಿದಾಗ ಈ ವಿಷಯ ಹೇಳಿದ್ದಾರೆ. ''ಪುನೀತ್ ಅವರು, 'ಕಾಂತಾರ' ಸಿನಿಮಾದ ಒಂದು ಕ್ಲಿಪ್ ಆದರೂ ನೋಡಿದ್ರಾ?' ಎಂದು ಅಭಿಮಾನಿಯೊಬ್ಬ ಕಾರ್ತಿಕ್‌ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕಾರ್ತಿಕ್, ''ಹೆಚ್ಚಿನ ಜನರಿಗೆ ತಿಳಿಯದ ವಿಷಯವೆಂದರೆ 'ಕಾಂತಾರ' ಸಿನಿಮಾದ ಮುಖ್ಯ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು ಎಂದಿದ್ದಾರೆ.  

ಇದೀಗ ರಿಷಬ್ ಶೆಟ್ಟಿಯ ಕಾಂತಾರದಲ್ಲಿ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಕಂಬಳ ಮಾಡಬೇಕಿತ್ತು. ಅಪ್ಪು ನಾಯಕನಾಗಿ ನಟಿಸಬೇಕಿತ್ತು ಅನ್ನೋ ಸೀಕ್ರೇಟ್ ರಿವಿಲ್ ಆಗಿದೆ. ಈ ಸಿನಿಮಾದ ಸ್ಟೋರಿಯನ್ನ ನಿರ್ದೇಶಕ ರಿಷಬ್ ಶೆಟ್ಟಿ ಅಪ್ಪುಗೆ ಹೇಳಿದ್ರಂತೆ. ಆದರೆ ಅಪ್ಪು ಬೇರೆ ಸಿನಿಮಾದಲ್ಲಿ ಬ್ಯೂಸಿ ಆಗಿದ್ದರು. ಮತ್ತು ಡೇಡ್ ಕ್ಲ್ಯಾಶ್ ಆಗುತ್ತಿತ್ತು. ಕೊನೆಗೆ ಪುನೀತ್ ಅವರೇ ರಿಷಬ್ ಶೆಟ್ಟಿಗೆ ಈ ರೋಲ್ ಮಾಡಲು ಸೂಚಿಸಿದ್ರು ಅಂತ ಹೊಂಬಾಳೆ ಫಿಲ್ಮ್ಸಂನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬಹಿರಂಗಪಡಿಸಿದ್ದಾರೆ. 

ರಿಷಬ್ ಶೆಟ್ಟಿ ಕಾಂತಾರ ಸ್ಟೋರಿಯನ್ನ ರೆಡಿ ಮಾಡಿ ಹೊಂಬಾಳೆ ಬ್ಯಾನರ್‌ನಲ್ಲೇ ನಿರ್ಮಾಣ ಮಾಡೋದಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ಆಗ ರಿಷಬ್ ಶೆಟ್ಟಿ ಈ ಕಥೆಗೆ ಪುನೀತ್ ರಾಜ್ ಕುಮಾರ್ ನಟಿಸಿದ್ರೆ ಸೂಪರ್ ಆಗಿರುತ್ತೆ ಅಂತ ನಿರ್ಮಾಪಕ ವಿಜಯ್ ಕಿರಂಗಂದೂರು ಬಳಿ ಹೇಳಿದ್ರಂತೆ. ಅದೇ ದಿನ ರಾಜ್ ಕುಮಾರ್ ರಸ್ತೆಯಲ್ಲಿರೋ ಹೊಂಬಾಳೆ ಆಫೀಸ್ಗೆ ಅಪ್ಪು ಬಂದಿದ್ರಂತೆ. ಆಗ ಈ ಸ್ಟೋರಿಯನ್ನ ರಿಷಬ್ ಶೆಟ್ಟಿ ಪುನೀತ್ರವರಿಗೆ ಹೇಳಿದ್ದಾರೆ. ಕಥೆ ಕೇಳಿದ ಅಪ್ಪು ಯೆಸ್, ಯೆಸ್, ಮಾಡೋಣ ಮಾಡೋಣ ಅಂತ ಫುಲ್ ಜೋಶ್ನಲ್ಲಿ ಕಥೆ ಒಕೆ ಮಾಡಿದ್ರು. ಕಾಂತಾರದಲ್ಲಿ ಮಂಗಳೂರು ಭಾಷೆ ಇರೋದ್ರಿಂದ ರಿಹರ್ಸಲ್ ಮಾಡಿ ಸಿನಿಮಾ ಮಾಡೋಣ ಅಂದಿದ್ರಂತೆ ಅಪ್ಪು. ರಿಷಬ್ ಶೆಟ್ಟಿ ಅಪ್ಪುಗೆ ಮೂರು ಸ್ಟೋರಿ ಹೇಳಿದ್ರಂತೆ. ಅದರಲ್ಲಿ ಕಾಂತಾರ ಸ್ಟೋರಿಯನ್ನ ಪುನೀತ್ ಪಿಕ್ಸ್ ಮಾಡಿದ್ರು.

 ಆದ್ರೆ ಧ್ವಿತ್ವ ಸಿನಿಮಾದ ಕೆಲಸಕ್ಕಾಗಿ ಡೇಟ್ ಕ್ಲಾಶ್ ಆಗುತ್ತೆ ಅಂತ ಪುನೀತ್ ಕೊನೆಗೆ ರಿಷಬ್‌ಗೆ ನೀವೇ ಈ ರೋಲ್ ಮಾಡಿ ಅಂತ ಹೇಳಿದ್ರು. ಇಲ್ಲಿಂದ ಕಾಂತಾರ ಶುರುವಾಯ್ತು. ಆದ್ರೆ ಪುನೀತ್‌ರನ್ನ ಬೇರೆ ಬೇರೆ ಪಾತ್ರಗಳಲ್ಲಿ ನೋಡಿರೋ ಅಭಿಮಾನಿಗಳು 'ಕಾಂತಾರ' ರೀತಿಯ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಮಿಸ್ ಆಯ್ತಲ್ಲಾ ಅಂತ ಬೇಸರಗೊಂಡಿದ್ದಾರೆ.