ವಾವ್ ಅಪ್ಪು ದೇವರ ಹಾಡು ಇಂದು ಚಿನ್ನಸ್ವಾಮಿಯಲ್ಲಿ..! ಜಾಕಿ ಹಾಡಿಗೆ ತಲೆದೂಗಿದ ಫ್ಯಾನ್ಸ್..!

By Infoflick Correspondent

Updated:Sunday, March 13, 2022, 08:56[IST]

ವಾವ್ ಅಪ್ಪು ದೇವರ ಹಾಡು ಇಂದು ಚಿನ್ನಸ್ವಾಮಿಯಲ್ಲಿ..! ಜಾಕಿ ಹಾಡಿಗೆ ತಲೆದೂಗಿದ ಫ್ಯಾನ್ಸ್..!

ಇಂದು ಭಾರತ ಕ್ರಿಕೆಟ್ ತಂಡವು ತನ್ನ ಎರಡನೇ ಟೆಸ್ಟ್ ಮ್ಯಾಚ್ ಅನ್ನು ಶ್ರೀಲಂಕಾ ವಿರುದ್ಧ ಆಡುತಿದೆ. ಇಂದಿನ ಪಂದ್ಯ ಭಾರತ ವರ್ಸಸ್ ಶ್ರೀಲಂಕಾ (India Vs Srilanka Test Match) ಕ್ರೀಡಾಂಗಣದಲ್ಲಿ ಅಪ್ಪು ಅಭಿನಯಿಸಿದ್ದ ಜಾಕಿ ಸಿನಿಮಾದ ಹಾಡು ರಾರಾಜಿಸಿತು. ಪುನೀತ್ ರಾಜಕುಮಾರ್  (Puneeth Rajkumar) ಅವರು ಇದೀಗ ನಮ್ಮ ಜೊತೆಗಿಲ್ಲ, ನಟ ಪುನೀತ್ ಅವರ ಕೊನೆಯ ಸಿನಿಮಾ ಜೇಮ್ಸ್ ಅನ್ನು ಇದೆ ಮಾರ್ಚ್ 17 ನೇ ತಾರೀಕು ಅವರ ಹುಟ್ಟು ಹಬ್ಬದ ದಿವಸ ವಿಶ್ವದಾದ್ಯಂತ ಬಿಡುಗಡೆ ಮಾಡಲು ಜೇಮ್ಸ್ ಚಿತ್ರತಂಡ ಎಲ್ಲಾ ಪ್ಲಾನ್ ಮಾಡಿಕೊಂಡಿದೆ.

ಹಾಗೆ ಅಭಿಮಾನಿಗಳು ಕೂಡ ಅವರ ಪ್ರೀತಿಯ ದೇವರು ಅಪ್ಪು ಅವರನ್ನು ಕೊನೆಯ ಬಾರಿ ತೆರೆಯಮೇಲೆ ನೋಡಲು ತುಂಬಾ ಕಾತುರರಾಗಿದ್ದಾರೆ. ಹಾಗೆ ಅಪ್ಪು ಅವರ ಎಲ್ಲಾ ಸಿನಿಮಾದ ಕಟೌಟ್ ಗಳನ್ನು ವೀರೇಶ್ ಚಿತ್ರಮಂದಿರದಲ್ಲಿ ಇರಿಸಿ, ಇತಿಹಾಸದಲ್ಲಿ ಯಾವ ನಟನಿಗೂ ಕೊಡದಿರುವ ಗೌರವವನ್ನು ನೀಡುತ್ತಿದ್ದಾರೆ. ಮುಂದೆಂದೂ ಕೂಡ ಅಪ್ಪು ಸಿನಿಮಾವನ್ನು ಬರಮಾಡಿ ಕೊಂಡಂತೆ, ಯಾವ ಸಿನಿಮಾ ಬರಮಾಡಿಕೊಳ್ಳಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅಪ್ಪು ಅವರ ಜೇಮ್ಸ್ ಚಿತ್ರಕ್ಕೆ ಮಾಡುತ್ತಿದ್ದಾರೆ. ಹೌದು ಅಂದಿನ ದಿವಸ ಒಳ್ಳೆಯ ಕಾರ್ಯ ಕೆಲಸಗಳನ್ನು ಕೈಗೊಂಡಿರುವ ಅವರ ಅಭಿಮಾನಿಗಳು ಊಟದ ವ್ಯವಸ್ಥೆ, ರಕ್ತದಾನ ಶಿಬಿರ, ಆರೋಗ್ಯ ತರಬೇತಿ ಇನ್ನು ಕೆಲ ಒಳ್ಳೆಯ ಕಾರ್ಯಗಳನ್ನು ಮಾಡಲಿದ್ದಾರೆ.

ಸಿನಿಮಾ ವೀಕ್ಷಣೆಗಾಗಿ ಬರುವ ಎಲ್ಲಾ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಇಂದು ಭಾರತ ಶ್ರೀಲಂಕಾ ನಡುವಣ ಟೆಸ್ಟ್ ಮ್ಯಾಚ್ ನಡೆಯುವಾಗ ಅಪ್ಪು ಅಭಿನಯದ ಜಾಕಿ ಸಿನಿಮಾದ ಹಾಡು ಪ್ಲೇ ಆಗಿದ್ದು, ಅಲ್ಲಿ ನೆರೆದಿದ್ದ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆ ವಿಡಿಯೋ ಹೇಗಿದೆ ಗೊತ್ತಾ.? ಜಾಕಿ ಸಿನಿಮಾದ ಹಾಡಿನ ಅಪ್ಪು ಅವರ ಈ ವಿಡಿಯೋ ನೋಡಿ. ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...