Puneeth Rajkumar : ಅಂದು ಪುನೀತ್ ರಾಜ್ ಕುಮಾರ್ ತನ್ನ ತಾಯಿ ಬಗ್ಗೆ ಹೇಳಿರುವ ಮಾತು..! ಕಣ್ಣೀರು ತರಿಸುತ್ತೆ ಈ ವಿಡಿಯೋ..!

By Infoflick Correspondent

Updated:Monday, May 9, 2022, 13:59[IST]

Puneeth Rajkumar : ಅಂದು ಪುನೀತ್ ರಾಜ್ ಕುಮಾರ್ ತನ್ನ ತಾಯಿ ಬಗ್ಗೆ ಹೇಳಿರುವ ಮಾತು..! ಕಣ್ಣೀರು ತರಿಸುತ್ತೆ ಈ ವಿಡಿಯೋ..!

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆ ದೈಹಿಕವಾಗಿ ವೈಯಕ್ತಿಕವಾಗಿ ಕಣ್ಣು ಮುಂದೆ ಕಾಣುತ್ತಿಲ್ಲ. ಆದರೆ ನಟ ಪುನೀತ್ ರಾಜ್ ಕುಮಾರ್ ಅವರಂತೆ ಬದುಕಲು ನಿಜಜೀವನದಲ್ಲಿ ಹೆಚ್ಚು ಯಾರ ಕೈಯಿಂದಲೋ ಆಗುವುದಿಲ್ಲ ಎಂದೆನಿಸುತ್ತದೆ. ಅಂದಹಾಗೆ ಅವರಂತೆ ಬದುಕಲು ದೊಡ್ಡ ಮನಸ್ಸು ಇರಬೇಕು. ನಿಜ ಜೀವನದಲ್ಲಿ ಏನೇ ಸಾಧನೆ ಮಾಡಿದರು, ಒಳ್ಳೆಯ ರೀತಿ ಇನ್ನೊಬ್ಬರಿಗೆ ಸಹಾಯ ಹಸ್ತ ನೀಡಿ ಹೆಗಲು ಕೊಡುವವರ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಬಹುದು. ಪುನೀತ್ ರಾಜ್ ಕುಮಾರ ಅವರು ಈಗಲೂ ಕೂಡ ನಮ್ಮ ಜೊತೆಗೆನೇ ಇದ್ದಾರೆ ಎಂದೆನಿಸುತ್ತದೆ. ಹೌದು ಪ್ರತಿದಿನ ಅಪ್ಪು ಅವರ ಅಗಲಿಕೆಯ ನೋವು ಹೆಚ್ಚು ಎಲ್ಲರಲ್ಲಿಯೂ ಕಾಡುತ್ತಿದೆ.

ಇದೀಗ ಅಪ್ಪು ದೇವರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಅವರ ತಾಯಿಯ ನಿಧನರಾದ ಸಂದರ್ಭದಲ್ಲಿ  ವೇದಿಕೆ ಮೇಲೆ ಆಯೋಜಿಸಿದ್ದ ಆ ಕಾರ್ಯಕ್ರಮದಲ್ಲಿ ತುಂಬಾ ಭಾವುಕವಾಗಿ ಮಾತನಾಡಿದ್ದರು. ಹೌದು, ನಮ್ಮ ಕುಟುಂಬದ ಮೇಲೆ, ನಮ್ಮ ತಂದೆ ತಾಯಿಯ ಮೇಲೆ ನೀವು ಇಟ್ಟಿರುವ ಪ್ರೀತಿ, ಮಾತನಾಡಿದ ರೀತಿಗೆ ನಾನು ಎಂದೂ ಚಿರಋಣಿ ಧನ್ಯವಾದ ಎಂದಿದ್ದರು ಅಪ್ಪು. ಹಾಗೇನೇ ಈ ಕರ್ನಾಟಕವೇ ನಮ್ಮ ಕುಟುಂಬ, ಎಲ್ಲಾ ಕನ್ನಡಿಗರೇ ನಮ್ಮ ಸಂಬಂಧಿಗಳು ಎಂದಿದ್ದ ಅಪ್ಪು ಅವರ ಈ ವಿಡಿಯೋ ನೋಡಿದರೆ ಒಂದು ಕಡೆ ಹೆಮ್ಮೆ ಎನಿಸುತ್ತದೆ. ಹಾಗೇನೇ ಈಗ  ಅವರು ನಮ್ಮ ಜೊತೆಗೆ ಇಲ್ಲವಲ್ಲ ಎಂದು ನೆನೆದರೆ ತುಂಬಾ ಕಣ್ಣೀರು ಬರುತ್ತದೆ.

ಅವರ ತಾಯಿ ಬಗ್ಗೆ ಪುನೀತ್ ರಾಜಕುಮಾರ್ ಅವರು ಹೇಳಿದ ಆ ಒಂದು ಮಾತು ಎಷ್ಟು ಸತ್ಯ ಎಂದರೆ ನಾನು ಇಂದು ಏನಾಗಿದ್ದೇನೋ ಅದೆಲ್ಲ ನನ್ನ ತಾಯಿಯಿಂದಲೇ. ಹಾಗೆ ತಾಯಿ ಶಕ್ತಿಯ ಮುಂದೆ ಯಾವುದು ಇಲ್ಲ ಎಂದಿದ್ದರು ಅಪ್ಪು ಅವರು. ಅಪ್ಪು ಅವರ ಈ ಭಾವನಾತ್ಮ ವಿಡಿಯೋ ನೋಡಿ. ಅಂದು ಅವರ ತಾಯಿ ಬಗ್ಗೆ ಆಡಿದ ಮಾತುಗಳನ್ನು ನೀವೂ ಕೇಳಿ ನಿಜಕ್ಕೂ ಹೆಮ್ಮೆ ಎನಿಸುತ್ತದೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...(Video credit : national tv )