ಎಷ್ಟೊಬಾರಿ ಗೌರವ ಡಾಕ್ಟರೇಟ್ ನೀಡುವುದಾಗಿ ಹೇಳಿದಾಗ  ಪುನೀತ್ ಏನು ಹೇಳಿದ್ದರು ಗೊತ್ತೆ ?

By Priya

Updated:Tuesday, March 15, 2022, 14:53[IST]

ಎಷ್ಟೊಬಾರಿ ಗೌರವ ಡಾಕ್ಟರೇಟ್ ನೀಡುವುದಾಗಿ ಹೇಳಿದಾಗ  ಪುನೀತ್ ಏನು ಹೇಳಿದ್ದರು ಗೊತ್ತೆ ?

ಒಂದು ಸಿನಿಮಾದಲ್ಲಿ ಅಪ್ಪು ಒಬ್ಬರಿಗೆ ನಾನಿನ್ನು ಡಾಕ್ಟರ್ ಆಗಿಲ್ಲರಿ , ನಮ್ಮ ತಂದೆಯವರಿಗ ಡಾಕ್ಟರೇಟ್ ಸಿಕ್ಕಿತ್ತರಿ,‌ನಂಗ ಮುಂದ ಸಿಗತದರಿ ಎಂದು ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಯತ್ತಿದೆ. ನಟನೆ,ಹಾಡು, ಡಾನ್ಸ್ ಅದ್ಬುತವಾಗಿ ಮಾಡುವ ಸಕಲಕಲಾವಲ್ಲಭ ಅಪ್ಪು ಒಳ್ಳೆಯ ಸಂದೇಶ ನೀಡುವ ಚಿತ್ರಗಳನ್ನು ಜನತೆಗೆ ನೀಡಿದ್ದಾರೆ. ಲೋಹಿತ್ ನಿಂದ ಪುನೀತ್ ನಾಗಿ ಅಪ್ಪು ಎಂದು ಜನರ ಹೃದಯದ ಅಪ್ಪುಗೆಯಲ್ಲಿರುವ ಪುನೀತ್ ಮಾಡಿರುವ ಸಮಾಜಪರ ಕೆಲಸಗಳು ಒಂದೆರಡಲ್ಲ. ಕಲಾ ಸೇವೆ , ಸಮಾಜಸೇವೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯದಿಂದ ನಟ ಪುನೀತ್ ರಾಜ್ ಕುಮಾರ್ ( Actor Puneet Rajkumar ) ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.   

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ, ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದಾರೆ. ಇದು ಜನತೆಗೆ ಗೊತ್ತಿರುವ ವಿಷಯ ಅದರೆ ಒಂದು ಗುಟ್ಟಿನ ವಿಷಯ ಈಗ ರಟ್ಟಾಗಿದೆ. ಹಿಂದೆ ಗೌರವ ಡಾಕ್ಟರೇಟ್ ನೀಡುವುದಾಗಿ ಮೈಸೂರು ವಿವಿಯಿಂದ ( Mysore University) ಹೇಳಿದಾಗ, ಅಪ್ಪು ಏನು ಹೇಳಿದ್ದರು ಗೊತ್ತೆ ? ಇಲ್ಲಿದೆ ಓದಿ  

ಈ ಹಿಂದೆ ಹಲವು ಬಾರಿ ಅಪ್ಪುಗೆ ಗೌರವ ಡಾಕ್ಟರೇಟ್ ನೀಡುವ ವಿಷಯ ಪ್ರಸ್ತಾಪವಾಗಿತ್ತು. ಆದ್ರೇ. ಅವರು ಅದನ್ನು ವಿನಯದಿಂದ ನಯವಾಗಿಯೇ ತಿರಸ್ಕರಿಸಿದ್ದರು. ತಂದೆಯವರಿಗೆ ನೀಡಿದ್ದೇವೆ. ನಿಮಗೂ ಗೌರವ ಡಾಕ್ಟರೇಟ್ ನೀಡುತ್ತೇವೆ ಎಂದಾಗ, ಅವರದ್ದೇ ತೂಕ ಬೇರೆ. ನನ್ನದು ಬೇರೆ. ನಾನಿನ್ನೂ ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ಬೆಳೆದಿಲ್ಲ ಎಂಬುದಾಗಿ ವಿನಯಪೂರ್ವಕವಾಗಿ ನಿರಾಕರಿಸಿದ್ದರು‌. 

ತುಂಬಿದಕೊಡ ತುಳುಕುವುದಿಲ್ಲ. ಹಣ್ಣು ಬಿಟ್ಟ ಮಾವು ಬಗ್ಗುತ್ತದೆ. ಘನತೆಯ ಮನುಷ್ಯ ವಿನಯತೆಯಿಂದ ಇರುತ್ತಾನೆ ಎಂಬುದು ಇಲ್ಲಿ ತಿಳಿಯುತ್ತದೆ. ಅಪ್ಪು ಎಂದಿಗೂ ಪ್ರಶಸ್ತಿಗೆ ಅಪೇಕ್ಷಿಸಿದವರೆ ಅಲ್ಲ. ಅಷ್ಟು ಸರಳಜೀವಿ ಎಂಬುದನ್ನು ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಶ್ವಿನಿಯವರ ಎದುರು ನೆನಪುಮಾಡಿಕೊಂಡರು.