ಯುವರತ್ನದ ವೇಳೆ ಅಪ್ಪುರನ್ನ ಇಷ್ಟ ಪಟ್ಟವರಾರು..? ಅಂದು ನನಗೆ ಮದುವೆ ಆಗಿದೆ ಎಂದಿದ್ದೇಕೆ ಅಪ್ಪು..?

By Infoflick Correspondent

Updated:Friday, March 25, 2022, 11:04[IST]

ಯುವರತ್ನದ ವೇಳೆ ಅಪ್ಪುರನ್ನ ಇಷ್ಟ ಪಟ್ಟವರಾರು..? ಅಂದು ನನಗೆ ಮದುವೆ ಆಗಿದೆ ಎಂದಿದ್ದೇಕೆ ಅಪ್ಪು..?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  (Puneeth Rajkumar) ಅವರ ಜೊತೆ ಹೆಚ್ಚು ಜನರು ನಂಟು ಇಟ್ಟುಕೊಂಡಿದ್ದರು. ಪ್ರೀತಿಯಿಂದ ಮಾತನಾಡುತ್ತಿದ್ದ ಅಪ್ಪು ಅವರ ಜೊತೆ ಮಾತನಾಡುವುದೆ ಒಂದು ಖುಷಿಯ ವಿಚಾರ. ಹಾಗೆ ಅವರ ಸರಳತನ, ತೆರೆಯ ಮೇಲೆ ಅವರ ನಟನೆ ಯಾವುದನ್ನು ಎಂದಿಗೂ ಯಾರು ಮರೆಯುವುದಕ್ಕೆ ಆಗುವುದಿಲ್ಲ. ಸಮಾಜದ ಒಳಿತಿಗಾಗಿ ಸದಾ ದುಡಿಯುತ್ತಿದ್ದ ಅಪ್ಪು ಅವರ ಒಳ್ಳೆಯ ಮನಸ್ಥಿತಿ ಎಂತದ್ದಿತ್ತು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.  ಅಂತಹ ಮನುಷ್ಯ ಇಂದು ನಮ್ಮ ಜೊತೆಗಿಲ್ಲ. ದೇವರು ತುಂಬಾ ಕ್ರೂರಿ ಎಂದು ಹೇಳಬಹುದು. ಅಂತಹ ಒಳ್ಳೆಯ ಮನುಷ್ಯನನ್ನ ತನ್ನ ಬಳಿ ಅತಿಬೇಗನೆ ಕರೆದು ಕೊಂಡಿದ್ದಕ್ಕೆ ಎಲ್ಲರೂ ಕೂಡ ದೇವರನ್ನು ಶಪಿಸುತ್ತಿದ್ದಾರೆ. ವಾಸ್ತವ ಜೀವನವ ಸಾಗಿಸಲೇಬೇಕು.

ಅವರ ಅಭಿಮಾನಿಗಳು ಜೀವನವನ್ನು ನೋವಿನ ಜೊತೆಗೆ ನಟ ಪುನೀತ್ ಅವರ ನೆನಪಲ್ಲಿಯೇ ಸಾಗಿಸುತ್ತಿದ್ದಾರೆ. ಹೌದು ಇನ್ನೊಂದು ಕಡೆ ಪುನೀತ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅವರು ಇಲ್ಲವಾದ ಬಳಿಕ ಅವರು ಮಾಡಿದ್ದ ಒಂದೊಂದೇ ಸಹಾಯಗಳು ಹೆಚ್ಚು ಹೊರ ಬರಲು ಆರಂಭವಾಗಿದ್ದವು. ಕೇವಲ ಸಹಾಯ ಮಾಡಿದ ವಿಚಾರ ಅಷ್ಟೇ ಅಲ್ಲದೆ, ಅವರ ನಿಜ ಜೀವನದ ವೈಯಕ್ತಿಕ ವಿಚಾರಗಳು, ಅವರ ವಿಡಿಯೋಗಳು ಹಾಗೇನೇ ಫೋಟೋಗಳು ಹೆಚ್ಚಿನ ಮಟ್ಟದಲ್ಲಿ ವೈರಲ್ ಆಗುತ್ತಿವೆ. ಈ ಯುವರತ್ನ ಸಿನಿಮಾ ಟೀಸರ್ ನಲ್ಲಿ ನಟಿ ನೀವು ನೋಡಲು ಥೇಟ್ ಅಣ್ಣಾವ್ರ ಅಂತೆ ಇದ್ದೀರ ಎಂದಾಗ, ಅಪ್ಪು ಅವರು ಹೌದು ಆದರೆ ನನಗೆ ಅಣ್ಣ ಅನ್ನಬೇಡಿ ಎಂದಿದ್ದರು.     

ಆ ಡೈಲಾಗ್ ಬಗ್ಗೆ ಮಾತನಾಡಿ ಅಪ್ಪು ನಿರ್ದೇಶಕರಾದ  ಸಂತೋಷ್ ಬಗ್ಗೆ ಮಾತನಾಡಿದ್ದರು. ಜೊತೆಗೆ ಇಷ್ಟ ಪಡಿ, ಆದರೆ ಮದುವೆ ಆಗುವಷ್ಟು ಅಲ್ಲ. ನನಗೆ ಮದುವೆ ಆಗಿದೆ ಎನ್ನುವ ಒಂದು ಸಂದರ್ಶನದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನಟ ಪುನೀತ್ ಅವರನ್ನ ಯಾರು ಇಷ್ಟಪಟ್ಟಿದ್ದರು, ಪುನೀತ ನನಗೆ ಮದುವೆ ಆಗಿದೆ, ನನ್ನ ಇಷ್ಟ ಪಡಬೇಡಿ ಅಂತ ಹೇಳಿದ್ದು ಯಾರಿಗೆ ಗೊತ್ತಾ..? ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ. ಅಪ್ಪು ಅವರ ಯಾವ ಕೆಲಸ ನಿಮಗೆ ಅತಿ ಹೆಚ್ಚು ಇಷ್ಟ ಎಂದು ಸಹ ತಿಳಿಸಿ ಧನ್ಯವಾದಗಳು (video credit : tv9 kannada)