Puneeth Rajkumar : ಈ ವ್ಯಾಕ್ಸ್ ಪ್ರತಿಮೆ ನೋಡಿದರೆ ಅಪ್ಪು ಜೀವಂತವಾಗಿ ಕುಳಿತಿದ್ದಾರೆ ಎನಿಸುತ್ತದೆ..! ವಿಡೀಯೋ ವೈರಲ್

By Infoflick Correspondent

Updated:Wednesday, July 6, 2022, 15:53[IST]

Puneeth Rajkumar :  ಈ ವ್ಯಾಕ್ಸ್ ಪ್ರತಿಮೆ ನೋಡಿದರೆ ಅಪ್ಪು  ಜೀವಂತವಾಗಿ ಕುಳಿತಿದ್ದಾರೆ ಎನಿಸುತ್ತದೆ..! ವಿಡೀಯೋ ವೈರಲ್

ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮಿಂದ ದೈಹಿಕವಾಗಿ ದೂರವಾಗಿ ಎಂಟು ತಿಂಗಳು ಸಮೇಪಿಸುತ್ತೇವೆ. ಈಗಲೂ ಕೂಡ ಅಪ್ಪು ಅವರ ನೆನಪು ಪ್ರತಿದಿನ ಹೆಚ್ಚು ಬರುತ್ತಲೇ ಇದೆ ಎನ್ನುವುದು ಸತ್ಯ. ಹೌದು ಅವರ ಅಭಿಮಾನಿಗಳಿಗಂತೂ ಇಂದಿಗೂ ಕೂಡ ಅಪ್ಪು ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಶಿವಣ್ಣ ಅವರನ್ನು ನೋಡಿದರೆ ಯಾವ ವೇದಿಕೆಗೆ ಹೋದ್ರು, ಅಪ್ಪು ವಿಚಾರವಾಗಿ ಯಾವುದಾದರು ಒಂದು ಫೋಟೋ ಹೊರ ಬಂದರೆ ಸಾಕು ಅಪ್ಪು ಅವರ ಬಗ್ಗೆ ಅದನ್ನೆಲ್ಲ ನೋಡಿ  ಕಣ್ಣೀರು ತನ್ನಂತಾಗಿಯೇ ಶಿವಣ್ಣ ಹಾಕುತ್ತಿದ್ದಾರೆ. ಹಾಗೆ ಎಲ್ಲರನ್ನೂ ಕಣ್ಣೀರು ಹಾಕುವಂತೆ ಮಾಡುತ್ತವೆ ಅಪ್ಪು ನೆನಪು ಎಂದು ಹೇಳಬಹುದು. ಅಪ್ಪು ಅವರ ಅಗಲಿಕೆ ಅದೆಷ್ಟರ ಮಟ್ಟಿಗೆ ಎಲ್ಲರಿಗೂ ನೋವನ್ನ ನೀಡಿದೆ ಎಂದು ಇದರಲ್ಲಿಯೇ ಗೊತ್ತಾಗುತ್ತದೆ.   

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ, ನಿಜ ಜೀವನದಲ್ಲಿ ಒಬ್ಬ ಮನುಷ್ಯ ಹೇಗಿರಬೇಕು, ಯಾವ ರೀತಿ ಕೆಲಸಗಳನ್ನು ಮಾಡಬೇಕು ಎಂಬುದಾಗಿ ಪ್ರೇರೇಪಿಸಿ ಹೋಗಿದ್ದಾರೆ. ಹಾಗೆ ಸ್ಪೂರ್ತಿ ತುಂಬಿದ್ದಾರೆ..ಪುನೀತ್ ರಾಜಕುಮಾರ್ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಅವರು ಹೋದ ಬಳಿಕ ಏನೆಲ್ಲ ಮಾಡಿದ್ದಾರೆ ಎಂಬುದಾಗಿ ನಿಮಗೂ ಗೊತ್ತು, ಇದೀಗ ಏನು ಮಾಡುತ್ತಿದ್ದಾರೆ ಎಂಬುದಾಗಿಯೂ ಗೊತ್ತು. ಹೌದು ಇದೀಗ ಇನ್ನೊಬ್ಬ ಅಭಿಮಾನಿ ಪುನೀತ್ ಅವರ ವ್ಯಾಕ್ಸ್ ಪ್ರತಿಮೆ ನಿರ್ಮಾಣ ಮಾಡಿದ್ದಾನೆ ಎನ್ನಲಾಗಿದೆ. ಥೇಟ್ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಇದ್ದಾರೆ, ಅವರು ಇಲ್ಲೇ ಕುಳಿತಿದ್ದಾರೆ ಎನ್ನುವಂತೆ ಸಕತ್ ರಿಯಲಿಸ್ಟಿಕ್ ಆಗಿ ಈ ಫೋಟೋ ಕಂಡಿದೆ.

ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಇಷ್ಟ ಆಗಿದ್ದಾರೆ ಈ ಪ್ರತಿಮೆಯಲ್ಲಿ. ಅವರು ಹೇಗೆ ಇದ್ದರೂ ಇಷ್ಟ, ಅದು ಬೇರೆ ವಿಷಯ ಬಿಡಿ. ಅಸಲಿಗೆ ಪುನೀತ್ ರಾಜಕುಮಾರ್ ಅವರ ವ್ಯಾಕ್ಸ್ ಪ್ರತಿಮೆ ಹೇಗಿದೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋದಲ್ಲಿ. ನೀವು ಕೂಡ ಖಂಡಿತ ಇಷ್ಟಪಡುತ್ತೀರಾ. ಅಪ್ಪು ಅಭಿಮಾನಿಯಾಗಿದ್ದಲ್ಲಿ ತಪ್ಪದೇ ವಿಡೀಯೋ ಶೇರ್ ಮಾಡಿ ಧನ್ಯವಾದಗಳು..