ಅಪ್ಪು ಕಂಡಿದ್ದ ಆ ಕನಸನ್ನು ಇಷ್ಟರಲ್ಲಿಯೇ ನನಸು ಮಾಡುತ್ತಾರಂತೆ ಅಶ್ವಿನಿ ಅವ್ರು..!ಮಹತ್ವ ನಿರ್ಧಾರ ನೋಡಿ

Updated: Thursday, November 25, 2021, 09:19 [IST]

ಅಪ್ಪು ಕಂಡಿದ್ದ ಆ ಕನಸನ್ನು ಇಷ್ಟರಲ್ಲಿಯೇ ನನಸು ಮಾಡುತ್ತಾರಂತೆ ಅಶ್ವಿನಿ ಅವ್ರು..!ಮಹತ್ವ ನಿರ್ಧಾರ ನೋಡಿ

ಸ್ನೇಹಿತರೆ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದ್ದಾಗಲೇ ರಾಜನಂತೆ ಬದುಕಿ ಎಲ್ಲರಿಗೂ ಆದರ್ಶವಾಗಿದ್ದರು. ಅಪ್ಪು ಬದುಕಿದ್ದಾಗ ಸಾಕಷ್ಟು ಕನಸುಗಳ ಬುತ್ತಿ ಹೊತ್ತುಕೊಂಡೇ ಬಂದವರು. ಅತಿ ಕಡಿಮೆ ಸಮಯದಲ್ಲಿಯೇ ಸಾಕಷ್ಟು ಖ್ಯಾತಿ ಹೊಂದಿದವರು. ಆದರೆ ಇನ್ನಷ್ಟು ಕನಸುಗಳು ಅವರ ಕೈಯಿಂದ ಆಗ ಬೇಕಿದ್ದವು  , ಆದರೆ ಆ ಕನಸುಗಳು ಬೆಳಕಿಗೆ ಬರುವ ಮುನ್ನವೇ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿ ಬಿಟ್ಟರು. ಹೌದು ಪುನೀತ್ ಅವರು ಕಂಡಿದ್ದ ಸಾಕಷ್ಟು ಕನಸುಗಳನ್ನು ಇದೀಗ ಅಶ್ವಿನಿ ಪುನೀತ್ ಅವರು ನನಸು ಮಾಡುವುದಾಗಿ ಭರವಸೆ ಮಾತುಗಳ ಆಡಿದ್ದಾರೆ. 

ಹಾಗೆ ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಿಆರ್ಕೆ ಪ್ರೊಡಕ್ಷನ್ ಮತ್ತು ಇನ್ನುಳಿದ ಎಲ್ಲ ಅಪ್ಪು ಅವರ ಕಾರ್ಯಗಳನ್ನು ತಾವೇ ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಹೌದು ಪುನೀತ್ ಅವರ ಕನಸೊಂದು ನವೆಂಬರ್ 1ನೇ ತಾರೀಕು ಬೆಳಕಿಗೆ  ಬರುವುದಿತ್ತು, ಕನ್ನಡ ನಾಡಿನ ನೆಲ ಜಲದ ಬಗ್ಗೆ, ಹಾಗೂ ಜನರ ಬಗ್ಗೆ ಪುನೀತ್ ಅವರು ಒಂದು ಡಾಕ್ಯುಮೆಂಟರಿ ಚಿತ್ರವನ್ನು ಮಾಡಿದ್ದರು. ಅದಕ್ಕೆ ಗಂಧದಗುಡಿ ಎಂದು ಹೆಸರು ಕೂಡ ಇಟ್ಟಿದ್ದರು. ಅದರ ಟೀಸರ್ ನವೆಂಬರ್ ಒಂದನೇ ತಾರೀಕು ಬಿಡುಗಡೆ ಆಗಬೇಕಿತ್ತು ಆದರೆ ಆಗಲಿಲ್ಲ..

ಹೌದು ಪುನೀತ್ ಅವರು ಈ ಹಿಂದೆ ಹೇಳಿಕೊಂಡ ಹಾಗೆ ದಶಕಗಳ ಹಿಂದೆನೇ ಒಂದು ಕಥೆ ಹುಟ್ಟಿತ್ತು, ನಮ್ಮ ನೆಲ ನಮ್ಮ ಜನ ಅದರ ಹಿರಿಮೆಯನ್ನು ಮೆರೆದಿದ್ದು ನಿಜ. ಅರಣ್ಯದ ಹಚ್ಚ ಹಸಿರನ್ನು ಇಡೀ ಜಗತ್ತಿಗೆ ಪಸರಿಸಿತ್ತು. ಮುಂದಿನ ಪೀಳಿಗೆಗೆ ಮತ್ತು ಈಗಿನ ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರ ಆಗಿತ್ತು. ಆ ಚರಿತ್ರೆಯು ಇದೀಗ ಮರುಕಳಿಸುವ ಸಮಯ ಬಂದಿದೆ ಎಂದು ಪುನೀತ್ ಅವರು ಬರೆದುಕೊಂಡು ಪೋಸ್ಟ್ ಮೂಲಕ ತಿಳಿಸಿದ್ದರು. ಜೊತೆಗೆ ನವಂಬರ್ ಒಂದನೇ ತಾರೀಖಿಗೆ ನೀವು ಕೂಡ ಕಾಯಿರಿ ಎಂದು ಹೇಳಿಕೊಂಡಿದ್ದರು.

ಆ ವೇಳೆ ಇದೀಗ ಬಂದಿದೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಈ ಬಗ್ಗೆ ಇದೀಗ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಅಶ್ವಿನಿ ಪುನೀತ್ ಟ್ವೀಟ್ ಮಾಡಿದ್ದು, ಪುನೀತ್ ಅವರ ಆ ಒಂದು ಕನಸು ನವೆಂಬರ್ ಒಂದರಂದು ಬೆಳಕಿಗೆ ಬರಬೇಕಿತ್ತು. ಆದ ಆ ಕನಸಿಗೆ ಇದು ಅಲ್ಪವಿರಾಮ ಅಷ್ಟೇ, ಅದನ್ನು ಪುನೀತ್ ಇಷ್ಟಪಟ್ಟಂತೆಯೇ ನನಸಾಗಿಸುವ ಜವಾಬ್ದಾರಿ ನನ್ನದು ಎಂದು ಅಶ್ವಿನಿ ಪುನೀತ್ ಹೇಳಿಕೊಂಡಿದ್ದಾರೆ. ಈ ಸಮಯದವರೆಗೆ ನೀವು ನಮಗೆ ತೋರಿದ ಸಂಯಮ ಹಾಗೂ ನೀಡಿದ ಸಹಕಾರಕ್ಕೆ ನಾವು ಆಭಾರಿ, ಎಂದು ಹೇಳಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...

ಅಪ್ಪು ಕಂಡಿದ್ದ ಆ ಕನಸನ್ನು ಇಷ್ಟರಲ್ಲಿಯೇ ನನಸು ಮಾಡುತ್ತಾರಂತೆ ಅಶ್ವಿನಿ ಅವ್ರು..!ಮಹತ್ವ ನಿರ್ಧಾರ ನೋಡಿ