Puneeth Rajkumar : ಈ ವರ್ಷದ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್‌ ಹಾಗೂ ಗಾಜಿನ ಮನೆ ವಿಶೇಷವಾಗಿದೆ

By Infoflick Correspondent

Updated:Saturday, July 23, 2022, 11:25[IST]

Puneeth Rajkumar :  ಈ ವರ್ಷದ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್‌ ಹಾಗೂ ಗಾಜಿನ ಮನೆ  ವಿಶೇಷವಾಗಿದೆ

ಕೋವಿಡ್‌ ನಿಂದಾಗಿ ಲಾಲ್‌ ಬಾಗ್‌ ನಲ್ಲಿ ಫ್ಲವರ್‌ ಶೋ ನೋಡಲಾಗದೇ ಮಿಸ್‌ ಮಾಡಿಕೊಳ್ಳುತ್ತಿದ್ದವರಿಗೆ ಡಬಲ್‌ ಗುಡ್‌ ನ್ಯೂಸ್‌ ಸಿಕ್ಕಿದೆ. ಸೋ.. ಮಿಸ್‌ ಮಾಡದೇ, ಫ್ಲವರ್‌ ಶೋ ಅನ್ನು ನೋಡಿ. ಯಾಕೆಂದರೆ, ಈ ವರ್ಷದ ಫ್ಲವರ್‌ ಶೋ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಅದೇನೆಂದರೆ, ಈ ಬಾರಿಯ ಫ್ಲವರ್‌ ಶೋನಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರನ್ನು ನೋಡಿ ಕಣ್ತುಂಬಿಕೊಳ್ಳಬಹುದು. 

ಬೆಂಗಳೂರಿನ ಲಾಲ್‍ಬಾಗ್ ನಲ್ಲಿ ಆಗಸ್ಟ್ 15 ರಂದು ಫ್ಲವರ್ ಶೋ ನಡೆಯಲಿದೆ. ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನವನ್ನು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಆಗಸ್ಟ್ 5 ರಿಂದ 15 ವರೆಗೂ ಪ್ರದರ್ಶನ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರು, ಕೋವಿಡ್‌ ನಿಯಮಗಳ ಪಾಲನೆ ಜೊತೆಗೆ ಫ್ಲವರ್‌ ಶೋ ನಡೆಯುತ್ತದೆ.

ಆಗಸ್ಟ್ 15 ರ  ನಂತರ ಮತ್ತೆರಡು ದಿನಗಳ ಕಾಲ ಮುಂದುವರಿಸುವ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆ.   

ಇನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ವಿದೇಶಗಳಿಂದಲೂ ಹೂವುಗಳನ್ನು ತರಿಸುತ್ತಿರುವುದು ವಿಶೇಷ. ಫ್ಲವರ್‌ ಶೋಗೆ ಪುನೀತ್ ಹಾಗೂ ಗಾಜಿನ  ಮನೆ ವಿಶೇಷವಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‍ನಿಂದ ಲಾಲ್‍ಬಾಗ್ ಫ್ಲವರ್ ಶೋ ಮಾಡಿರಲಿಲ್ಲ. ಹಾಗಾಗಿ ಈ ವರ್ಷ ಪ್ರತಿ ವರ್ಷಕ್ಕಿಂತ  ಹೆಚ್ಚಾಗಿ ಮಾಡಲಾಗುವುದು ಎಂದು ಹೇಳಿದರು. ಇನ್ನು ಈ ಬಾರಿಯ ಶೋಗೆ ಅಪ್ಪು ಹೆಸರಿಟ್ಟಿರುವುದಕ್ಕೆ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.