ಶಿವಣ್ಣ ರಾಘಣ್ಣನ ಬಗ್ಗೆ ಅಂದು ಅಪ್ಪು ಹೇಳಿದ್ದ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ..

By Infoflick Correspondent

Updated:Saturday, June 18, 2022, 10:29[IST]

ಶಿವಣ್ಣ ರಾಘಣ್ಣನ ಬಗ್ಗೆ ಅಂದು ಅಪ್ಪು ಹೇಳಿದ್ದ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ..

ಸ್ಯಾಂಡಲ್ವುಡ್ನ ಖ್ಯಾತ ನಟ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನು ಅಗಲಿ ಏಳು ತಿಂಗಳು ಮೇಲಾಗಿದೆ. ಈಗಲೂ ಕೂಡ ಅವರ ಅಭಿಮಾನಿಗಳು ಅಪ್ಪು ಅವರ ನೆನೆದು ಕಣ್ಣೀರಿಡುತ್ತಿದ್ದಾರೆ ಎನ್ನಬಹುದು. ಹಾಗೆ ಅವರ ಕುಟುಂಬ ಸಹ ಅಪ್ಪು ನೆನಪಿನಲ್ಲಿ ಅವರನ್ನು ನೆನೆದು ಕಣ್ಣೀರು ಸುರಿಸುತ್ತಲೇ ಜೀವನ ಮಾಡುತ್ತಿದೆ. ಹೌದು ಇತ್ತೀಚಿಗಷ್ಟೇ ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ಥಳಿ ಅನಾವರಣ ಆಯಿತು. ಬದುಕಿದ್ದ ವೇಳೆ ನಟ ಪುನೀತ್  ರಾಜ್ ಕುಮಾರ್ ಅವರು ಹೇಳಿದಂತೆ ಯಾರೇ ಕೈಬಿಟ್ಟರು ನಮ್ಮನ್ನು ಈ ಹೊಸಪೇಟೆ ಜನರು ಕೈಬಿಡುವುದಿಲ್ಲ ಎಂದಿದ್ದರು, ಆ ಮಾತು ಸತ್ಯವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡಿಗರಿಗೆ, ಸಾಕಷ್ಟು ಅಭಿಮಾನಿ ಬಳಗದವರಿಗೆ ದೇವರಾಗಿದ್ದಾರೆ. ಪ್ರತಿಯೊಬ್ಬ ಅಭಿಮಾನಿ ಮನೆಯಲ್ಲೂ ಪುನೀತ್ ಅವರ ಫೋಟೋ ದೇವರ ಸ್ಥಾನದಲ್ಲಿದೆ. ಪುನೀತ್ ರಾಜಕುಮಾರ್ ಅವರು ಕೇವಲ ನಟನೆ ಮಾತ್ರವಲ್ಲದೆ, ಕಿರುತೆರೆಯಲ್ಲಿ ಕೂಡ ಸಕ್ರಿಯರಾಗಿದ್ದಂತವರು. ಫ್ಯಾಮಿಲಿ ಕಾರ್ಯಕ್ರಮದಲ್ಲಿ ಹೆಚ್ಚು ಕಾಣಿಸಿದ್ದವರು. ಆಗಾಗ ಸಿನಿಮಾದ ವಿಚಾರಗಳಿಗಾಗಿ ವೇದಿಕೆ ಮೇಲೆ ಬರುತ್ತಿದ್ದ, ಪುನೀತ್ ಅವರ ಸರಳತೆ, ಅವರ ಪ್ರೀತಿ, ಆ ನಗು ಎಲ್ಲವನ್ನೂ ಅಷ್ಟು ಬೇಗನೆ ನಾವು ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ. ಆದರೆ ವಿಧಿಯಾಟ ಏನು ಮಾಡುವುದು, ನಮ್ಮ ಪ್ರೀತಿಯ ನಟ ಪುನೀತ್ ಅವರು ನಮ್ಮಿಂದ ಬಹು ಬೇಗನೆ ದೈಹಿಕವಾಗಿ ದೂರವಾದರು.  

ನಟ ಪುನೀತ್ ರಾಜಕುಮಾರ್ ಅವರು ನಡೆಸುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ, ಶಿವಣ್ಣ ಮತ್ತು ರಾಘಣ್ಣ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ವಿಷಯ ಎಲ್ಲರಿಗೂ ಗೊತ್ತು. ಅಂದು ಪುನೀತ್ ಅವರು, ನನಗೆ ಅವರಿಬ್ಬರನ್ನು ಕಂಡರೆ ತುಂಬಾನೇ ಗೌರವ, ಮತ್ತು ಪ್ರೀತಿ. ಹಾಗಾಗಿ ನಾನು ಶಿವಣ್ಣ, ರಾಘಣ್ಣ ಅವರನ್ನು ಹೆಚ್ಚಾಗಿ ಪ್ರೀತಿ ಮಾಡುತ್ತೇನೆ. ಅವರಿಬ್ಬರನ್ನು ಕಂಡರೆ ನನಗೆ ತುಂಬಾ ಖುಷಿ, ಇಷ್ಟ ಎಂದು ಪ್ರೀತಿಯಿಂದ ಮಾತನಾಡಿದ್ದರು. ಅವರಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೀನಿ ಅಂದಿದ್ದರು . ಅದೇ ರೀತಿ ತಮ್ಮ ಪ್ರಾಣವನ್ನೇ ಅವರಿಗೋಸ್ಕರ  ಅರ್ಪಿಸಿದ್ದಾರೆ . ಇದೆ ಅಲ್ಲವಾ ನಿಜವಾದ ಪ್ರೀತಿ ಅಂದರೆ .

ಅದರ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮೂವರು ಅಣ್ಣ ತಮ್ಮಂದಿರ ನಡುವೆ ಅದೆಷ್ಟು ಪ್ರೀತಿ ಗಾಢ ಆಗಿತ್ತು ಎಂದೆನಿಸುತ್ತದೆ. ಈ ವಿಡೀಯೋ ಮತ್ತೆ ನೋಡಿದರೆ ನಿಜಕ್ಕೂ ಕಣ್ಣೀರು ಬರುವಂತಿದೆ. ಇಲ್ಲಿದೆ ನೋಡಿ ವಿಡಿಯೋ. ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಅಪ್ಪು ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಹೇಳಿ ಧನ್ಯವಾದ.