Puneeth statue : ಅಪ್ಪು ಪುತ್ಥಳಿ ಅನಾವರಣ ಅಗುತ್ತಿದ್ದಂತೆ ಗಳ ಗಳನೇ ಅತ್ತ ರಾಘಣ್ಣನವರ ಪತ್ನಿ ಮಂಗಳಾ..!

By Infoflick Correspondent

Updated:Monday, June 6, 2022, 12:49[IST]

Puneeth statue : ಅಪ್ಪು ಪುತ್ಥಳಿ ಅನಾವರಣ ಅಗುತ್ತಿದ್ದಂತೆ ಗಳ ಗಳನೇ ಅತ್ತ ರಾಘಣ್ಣನವರ ಪತ್ನಿ ಮಂಗಳಾ..!

ಕನ್ನಡ ಚಿತ್ರರಂಗದ ಅಜಾತಶತ್ರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇಂದಿಗೂ ಕೂಡ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅಭಿಮಾನಿಗಳು ಪ್ರತಿದಿನ ಅಪ್ಪು ನೆನಪಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅತ್ತ ರಾಜ್ ಕುಟುಂಬ ಸಹ ಈಗಲೂ ಪ್ರತಿಕ್ಷಣ ಅಪ್ಪು ಅವರನ್ನು ನೆನೆದು, ಅವರ ನೆನಪು ಮಾಡಿಕೊಂಡು ಕಣ್ಣೀರಿಡುತ್ತಿದ್ದಾರೆ. ಸಮಾರಂಭಗಳಿಗೆ ಹೋದಾಗಲೆಲ್ಲ ಅಪ್ಪು ಅಭಿಮಾನಿಗಳ ಸಾಗರದಂತಹ ಪ್ರೀತಿ ನೋಡಿ, ಅಪ್ಪು ಅಪ್ಪು ಎಂಬ ಒಂದು ಶಬ್ದ ಕೇಳಿ ಬರುತ್ತಿದ್ದಂತೆ ರಾಜ್ ಫ್ಯಾಮಿಲಿಯನ್ನು ಒಂದು ಕ್ಷಣ ಮೂಕವಿಸ್ಮಿತರಾಗುವಂತೆ ಮಾಡುತ್ತಿದೆ. ನಟ ಪುನೀತ್ ರಾಜ್ ಕುಮಾರ್ ಹೊಸಪೇಟೆ ಜನರ ಮೇಲೆ ತುಂಬಾ ಅತೀವವಾದ ಪ್ರೀತಿ ಇಟ್ಟುಕೊಂಡಿದ್ದರು. ಯಾರೇ ಕೈಬಿಟ್ಟರು  ಹೊಸಪೇಟೆ ಜನರು ನಮ್ಮನ್ನು ಕೈಬಿಡುವುದಿಲ್ಲ ಎಂದು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿಕೊಂಡಿದ್ದರು.

ಅವರ ಪ್ರೀತಿಗೆ ನಾವು ಎಂದು ಚಿರಋಣಿ, ವರ್ಷಕ್ಕೆ ಎರಡು ಮೂರು ಸಾರಿ ನಾನು ಹೊಸಪೇಟೆಗೆ ಹೋಗಿ ಬಂದೇ ಬರುತ್ತೇನೆ ಎನ್ನುವ ಮಾತನ್ನು ಆಡುತ್ತಾ ಅಪಾರ ಅಭಿಮಾನಿ ಬಳಗವನ್ನು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಗಿಟ್ಟಿಸಿಕೊಂಡಿದ್ದರು. ಆದರೆ ಅಪ್ಪು ಅವರ ಅಕಾಲಿಕ ಮರಣ ನಿಜಕ್ಕೂ ಎಲ್ರಿಗೂ ನೋವ ನೀಡಿತು ಎನ್ನಬಹುದು. ನಿನ್ನೆ ಪುನೀತ್ ಅವರನ್ನ ಅಮರರನ್ನಾಗಿಸಲೆಂದೇ, ಅದೆಷ್ಟೆ ವರ್ಷ ಕಳೆದರೂ ಪುನೀತ್ ಅವರ ಹೆಸರು ಮಾಸದಂತೆಯೇ ಅವರ ಪ್ರೀತಿಯ ಅಭಿಮಾನಿಗಳು ಹೊಸಪೇಟೆಯಲ್ಲಿ ಪುನೀತ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.. ನಿನ್ನೆ ಪುನೀತ್ ಅವರ ಕಂಚಿನ ಪುತ್ಥಳಿ ಅನಾವರಣ ಆಗಿದೆ. 

ಪ್ರೀತಿಯ ನಟ ಪುನೀತ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಹಾಗೂ ರಾಘಣ್ಣ ಮತ್ತು ಅವರ ಪತ್ನಿ ಮಂಗಳ ಅವರು ಕೂಡ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ಒಂದು ಕಡೆ ಪುನೀತ್ ಅವರ ಅಪಾರ ಅಭಿಮಾನಿಗಳ ಪ್ರೀತಿ, ಮತ್ತೊಂದು ಕಡೆ ಪುನೀತ್ ಕಂಚಿನ ಪುತ್ಥಳಿ ನಿರ್ಮಾಣ ಆಗಿದ್ದನ್ನು ನೋಡಿ ರಾಘಣ್ಣ ಅವರ ಪತ್ನಿ ಮಂಗಳಾ ಅವರು ನೋಡ ನೋಡುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ಪುನೀತ್ ಅವರನ್ನು ನೆನೆದು ಗಳಗಳನೆ ಅತ್ತಿದ್ದಾರೆ. ಏನೇ ಆಗಲಿ ಜೀವನ ಸಾಗಲೇಬೇಕು, ಅವರ ನೆನಪಿನಲ್ಲಿ ನಾವು ಇರೋವರೆಗೂ ಜೀವನ ಮಾಡಲೆಬೇಕು ಅಷ್ಟೇ. ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳ ಕಮೆಂಟ್ ಮಾಡಿ. ಜೊತೆಗೆ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು....( video credit : public tv )